ಬೆಂಗಳೂರು : ದೇಶದಲ್ಲಿ ಪ್ರಥಮ ಬಾರಿಗೆ ಟ್ರಾಫಿಕ್‌ ತಡೆಗೆ ಜಾಯಿನ್‌ ದಿ ಕಮ್ಯೂಟ್‌ ಅಭಿಯಾನ

KannadaprabhaNewsNetwork |  
Published : Aug 27, 2024, 01:31 AM ISTUpdated : Aug 27, 2024, 07:02 AM IST
Traffic South | Kannada Prabha

ಸಾರಾಂಶ

ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ಸಮಸ್ಯೆಗಳನ್ನು ನಿಭಾಯಿಸಲು ದೇಶದಲ್ಲಿ ಪ್ರಥಮ ಬಾರಿಗೆ ನಗರದ ಸಂಚಾರ ದಕ್ಷಿಣ ವಿಭಾಗದಲ್ಲಿ ಡಿಸಿಪಿ ಶಿವಪ್ರಕಾಶ್‌ ದೇವರಾಜು ನೇತೃತ್ವದಲ್ಲಿ ‘ಜಾಯಿನ್‌ ದಿ ಕಮ್ಯೂಟ್‌’ ಎಂಬ ಅಭಿಯಾನ ಆರಂಭಿಸಲಾಗಿದೆ.

 ಬೆಂಗಳೂರು :  ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ಸಮಸ್ಯೆಗಳನ್ನು ನಿಭಾಯಿಸಲು ದೇಶದಲ್ಲಿ ಪ್ರಥಮ ಬಾರಿಗೆ ನಗರದ ಸಂಚಾರ ದಕ್ಷಿಣ ವಿಭಾಗದಲ್ಲಿ ಡಿಸಿಪಿ ಶಿವಪ್ರಕಾಶ್‌ ದೇವರಾಜು ನೇತೃತ್ವದಲ್ಲಿ ‘ಜಾಯಿನ್‌ ದಿ ಕಮ್ಯೂಟ್‌’ ಎಂಬ ಅಭಿಯಾನ ಆರಂಭಿಸಲಾಗಿದೆ.

ನಾಗರಿಕರನ್ನು ನೇರವಾಗಿ ಸಂಚಾರ ಸಮಸ್ಯೆಗಳ ಪರಿಹಾರದಲ್ಲಿ ಭಾಗಿಯಾಗಿಸುವುದು ಈ ಅಭಿಯಾನದ ಉದ್ದೇಶ. ನಗರ ಸಂಚಾರ ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಕಾಶ್‌ ದೇವರಾಜು ಅವರೇ ಖುದ್ದು ನಾಗರಿಕರ ಜತೆಗೆ ಸಂಚಾರದಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ನಾಗರಿಕರು ತಮ್ಮ ದೈನಂದಿನ ಪ್ರಯಾಣದ ಮಾರ್ಗಗಳು ಮತ್ತು ಪ್ರಯಾಣದ ವಿಧಾನಗಳನ್ನು ನೋಂದಣಿ ಮಾಡಿಕೊಳ್ಳಲುಆಹ್ವಾನಿಸಲಾಗಿದೆ.

ಇದರಲ್ಲಿ ಆಯ್ಕೆಯಾದ ನಾಗರಿಕರಿಗೆ ಡಿಸಿಪಿ ಶಿವಪ್ರಕಾಶ್‌ ದೇವರಾಜು ಜತೆಗೆ ಸಂಚಾರ ಮಾಡುವ ಅವಕಾಶ ದೊರಯಲಿದೆ. ಈ ವೇಳೆ ಸಂಚಾರ ದಟ್ಟಣೆ, ವಿಳಂಬ ಅಥವಾ ಸುರಕ್ಷತೆ ಕಾಳಜಿಗಳು ಸೇರಿದಂತೆ ನಾಗರಿಕರು ಸಂಚಾರ ಸಮಸ್ಯೆಗಳನ್ನು ನೇರವಾಗಿ ಡಿಸಿಪಿಗೆ ವಿವರಿಸಬಹುದಾಗಿದೆ. ಈ ಅಭಿಯಾನದಲ್ಲಿ ಸಂಗ್ರಹವಾಗುವ ಮಾಹಿತಿಯನ್ನು ಉಪಯೋಗಿಸಿ ನಗರದಾದ್ಯಂತ ಸಂಚಾರದ ಹರಿವು ಮತ್ತು ರಸ್ತೆ ಸುರಕ್ಷತೆ ಸುಧಾರಿಸುವ ನಿರ್ವಹಣಾತ್ಮಕ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

ನಾಗರಿಕರು-ಪೊಲೀಸರ ನಡುವಿನ ಅಂತರ ತಗ್ಗಿಸುವ ಪ್ರಯತ್ನ:ಈ ಬಗ್ಗೆ ಮಾತನಾಡಿರುವ ಡಿಸಿಪಿ ಶಿವಪ್ರಕಾಶ್‌ ದೇವರಾಜು, ನಗರ ಸಂಚಾರ ಸಮಸ್ಯೆಗಳು ಕೇವಲ ಪೊಲೀಸರು ನಿರ್ವಹಿಸಬೇಕಾದ ಸಮಸ್ಯೆಗಳಲ್ಲ. ನಾಗರಿಕರು ಮತ್ತು ಪೊಲೀಸರು ಒಟ್ಟಾಗಿ ಪರಿಹರಿಸಬೇಕಾದ ಸವಾಲುಗಳಾಗಿವೆ. ನಮ್ಮ ನಾಗರಿಕರು ಎದುರಿಸುವ ದೈನಂದಿನ ಸವಾಲುಗಳನ್ನು ಅರ್ಥಮಾಡಿಕೊಂಡು ಪರಿಹಾರಗಳನ್ನು ಕಂಡುಕೊಳ್ಳುವ ಅಗತ್ಯವಿದೆ. ಈ ಜಾಯಿನ್‌ ದಿ ಕಮ್ಯೂಟ್‌ ಅಭಿಯಾನವು ಸಾರ್ವಜನಿಕರು ಮತ್ತು ಪೊಲೀಸರ ನಡುವಿನ ಅಂತರವನ್ನು ತಗ್ಗಿಸುವ ಪ್ರಯತ್ನವಾಗಿದೆ ಎಂದು ತಿಳಿಸಿದ್ದಾರೆ.

ಅಭಿಯಾನದ ಕಾರ್ಯ ವಿಧಾನ ಹೇಗೆ?

ಪ್ರಯಾಣಿಕರು ತಮ್ಮ ದಿನಿತ್ಯದ ಪ್ರಯಾಣದ ಮಾರ್ಗಗಳು ಮತ್ತು ಸಂಚಾರ ಮಾಧ್ಯಮದ ವಿವರಗಳನ್ನು ಆನ್‌ಲೈನ್‌ (https://jointhecommutebstp.in) ಮೂಲಕ ನೋಂದಾಯಿಸಬೇಕು. ಬಳಿಕ ಡಿಸಿಪಿ ಜತೆಗೆ ಪ್ರಯಾಣಿಸುವ ಪ್ರಯಾಣಿಕರನ್ನು ಆಯ್ಕೆ ಮಾಡಲಾಗುತ್ತದೆ. ಪ್ರಯಾಣದ ವೇಳೆ ಸಂಚಾರ ಕಿರಿಕಿರಿ, ವಿಳಂಬ ಮತ್ತು ಸುರಕ್ಷತಾ ಸಮಸ್ಯೆಗಳನ್ನು ಡಿಸಿಪಿ ಗಮನಿಸುವುದರ ಜತೆಗೆ ಪ್ರಯಾಣಿಕರ ಅನುಭವಗಳನ್ನು ಆಲಿಸಲಿದ್ದಾರೆ. ಈ ಪ್ರಯಾಣಗಳಿಂದ ಸಂಗ್ರಹಿಸಿದ ಮಾಹಿತಿಗಳನ್ನು ಬಳಸಿಕೊಂಡು ನಗರದಾದ್ಯಂತ ಸಂಚಾರದ ಹರಿವು ಮತ್ತು ರಸ್ತೆ ಸುರಕ್ಷತೆ ಸುಧಾರಿಸಲು ನಿರ್ದಿಷ್ಟ ಕ್ರಮಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು