- ನಮ್ಮ ನಡೆ, ಆರೋಗ್ಯದ ಕಡೆ : ಐಎಂಎ ವತಿಯಿಂದ ನಡುಗೆ
----ಕನ್ನಡಪ್ರಭ ವಾರ್ತೆ ಯಾದಗಿರಿ
ತಂಬಾಕು ಮುಕ್ತ ಅಭಿಯಾನದ ಪ್ರಯುಕ್ತ ಡಿ.30 ರಂದು ನಗರದಲ್ಲಿ ಭಾರತೀಯ ವೈದ್ಯಕೀಯ ಸಂಘದಿಂದ ವಾಕ್ಥಾನ್ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಡಾ. ಚಂದ್ರಕಾಂತ ಪೂಜಾರಿ ಮತ್ತು ಕಾರ್ಯಕ್ರಮದ ಮುಖ್ಯ ಸಂಯೋಜಕ ಡಾ. ವೀರೇಶ ಜಾಕಾ ಜಂಟಿಯಾಗಿ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ವರ್ಷದ ಹೊಸ್ತಿಲಲ್ಲಿ ಜನತೆಗೆ ಹೊಸ ಸಂದೇಶ ರವಾನಿಸುವ ಕುರಿತು ಸಂಘವು ''''''''ನಮ್ಮ ನಡೆ, ಆರೋಗ್ಯದ ಕಡೆ'''''''' ಎಂಬ ಘೋಷಣೆಯೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಅಂದು ಬೆ.7ಕ್ಕೆ ನಗರದ ಲುಂಬಿನಿ ವನದಿಂದ ಆರಂಭಗೊಳ್ಳುವ ನಡುಗೆ ಜಾಥಾ ಡಾ. ಅಂಬೇಡ್ಕರ್ ಸರ್ಕಲ್, ಕನಕ ಸರ್ಕಲ್, ಕಾಡ್ಲುರ್ ಪೇಟ್ರೋಲ್ ಬಂಕ್, ಅಮರ ಲೇಜೌಟ್ ಮೂಲಕ ಲುಂಬಿನಿ ವನಕ್ಕೆ ಆಗಮಿಸಿ ಅಲ್ಲಿ ಉತ್ತಮ ಆರೋಗ್ಯದ ಬಗ್ಗೆ ಸೇರಿದ ಜನತೆಗೆ ಅರಿವು ಮೂಡಿಸಲಾಗುವುದು ಎಂದು ವಿವರಿಸಿದರು.ಅಂದಿನ ಬೆಳಗಿನ ವಾಕಥಾನ್ ದಲ್ಲಿ ಸುಮಾರು 500ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ನಗರದ ನಾಗರಿಕರು ಸೇರಬೇಕೆಂದು ಮನವಿ ಮಾಡಿರುವ ಅವರು, ಹೊಸ ವರ್ಷದಲ್ಲಿ ಎಲ್ಲರೂ ತಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಬೇಕು. ಸರ್ವರ ಬದುಕು ತಂಬಾಕು ರಹಿತವಾಗಬೇಕು. ಉತ್ತಮ ಆರೋಗ್ಯಕ್ಕೆ ಜಾಗೃತ ವಹಿಸಬೇಕೆಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಭಗವಂತ ಅನ್ವಾರ, ಡಾ. ಹೊನಗುಂಟಿ, ಡಾ. ರಾಘವೇಂದ್ರ, ಡಾ. ಸುರೇಶರಡ್ಡಿ, ಡಾ. ವೈಜನಾಥ, ಡಾ.ಸುನೀಲ್ ಇದ್ದರು.----
27ವೈಡಿಆರ್19: ಯಾದಗಿರಿ ನಗರದಲ್ಲಿ ಶುಕ್ರವಾರ ತಂಬಾಕು ಮುಕ್ತ ಅಭಿಯಾನದ ಅಂಗವಾಗಿ ಡಿ.30 ರಂದು ವಾಕ್ಥಾನ್ ಹಮ್ಮಿಕೊಂಡ ನಿಮಿತ್ತ ಭಾರತೀಯ ವೈದ್ಯಕೀಯ ಸಂಘದಿಂದ ಸುದ್ದಿಗೋಷ್ಠಿ ನಡೆಯಿತು.