ಕನ್ನಡಪ್ರಭ ವಾರ್ತೆ ಕೋಲಾರ ಕಲ್ಪುರ್ಗಿ ಜಿಲ್ಲೆಯ ಚಿತ್ತಾಪುರದಲ್ಲಿನ ತಿರಂಗ ಯಾತ್ರೆಗೆ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೋಗಿದ್ದ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರು ದೌರ್ಜನ್ಯ ನಡೆಸಿರುವುದನ್ನು ಖಂಡಿಸಿ ಬಿಜೆಪಿ ಮೇ ೨೪ ರಂದು ಕಲಬುರ್ಗಿ ಚಲೋ ಹಮಮಿಕೊಂಡಿದ್ದು, ‘ಪ್ರಿಯಾಂಕ್ ಖರ್ಗೆ ಹಠವೋ- ಕಲಬುರ್ಗಿ ಬಚಾವೋ’ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಲಿದೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಪಕ್ಷವು ಕಲ್ಪುರ್ಗಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸಚಿವರ ರಾಜೀನಾಮೆಗೆ ಅಗ್ರಹಪ್ರಿಯಾಂಕ್ ಖರ್ಗೆ ಬೆಂಬಲಿಗರುರೆಂದು ಹೇಳಿ ಕೊಂಡಿರುವ ಗೂಂಡಾಗಳು ಮಾಡಿರುವ ಹೇಯ ಕೃತ್ಯಕ್ಕೆ ಕ್ಷಮೆಯಾಚಿಸಬೇಕು, ಕಾಂಗ್ರೆಸ್ ಪಕ್ಷವು ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಲಾಗುವುದು, ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕ್ಷಮೆಯಾಚಿಸುವವರೆಗೂ ಅನಿರ್ಧಿಷ್ಟ ಪ್ರತಿಭಟನೆ ಮುಂದುವರೆಸಲಾಗುವುದು ಎಂದು ಹೇಳಿದರು.ಛಲವಾಧಿ ನಾರಾಯಣಸ್ವಾಮಿ ಸಭೆಯಲ್ಲಿ ಪ್ರಿಯಾಂಕ ಖರ್ಗೆ ವಿರುದ್ದ ಟೀಕಿಸುವ ಸಂದರ್ಭದಲ್ಲಿ ಗಾದೆಯೊಂದನ್ನು ಉದಾಹರಿಸಿದ ಹಿನ್ನೆಲೆಯಲ್ಲಿ ಅದನ್ನೇ ನೆಪ ಮಾಡಿಕೊಂಡು ಖರ್ಗೆರನ್ನು ನಾಯಿ ಎಂದಿದ್ದಾರೆ ಎಂದು ಆರೋಪಿಸಿ, ಖರ್ಗೆ ಬೆಂಬಲಿರು ಗುಂಪು ಕಟ್ಟಿಕೊಂಡು ಛಲವಾದಿ ನಾರಾಯಣಸ್ವಾಮಿರನ್ನು ಅಕ್ರಮವಾಗಿ ೪-೫ ಗಂಟೆ ದಿಗ್ಬಂಧನ ಹಾಕಿದ್ದು ಖಂಡನೀಯ ಎಂದರು. ಪೊಲೀಸರ ವೈಫಲ್ಯ:
ಛಲವಾದಿ ನಾರಾಯಣಸ್ವಾಮಿ ಅವರ ವಾಹನವನ್ನು ಕಾಂಗ್ರೆಸ್ ಕಾರ್ಯಕರ್ತರು ಜಖಂ ಮಾಡಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಖರ್ಗೆ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ. ಗೂಂಡಾಗಳನ್ನು ಬಂಧಿಸಿ ಪ್ರಕರಣವನ್ನು ದಾಖಲಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ರಾಜ್ಯ ಎಸ್.ಸಿ. ಮೋರ್ಚಾ ಕಾರ್ಯದರ್ಶಿ ಹನುಮಂತಪ್ಪ, ಮಾತನಾಡಿ ಕಾಂಗ್ರೆಸ್ ಗುಂಡಾಗಿರಿಗೆ ಮುಂದೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆಂದು ಎಚ್ಚರಿಸಿದರು.
ಎಸ್.ಸಿ ಮೋರ್ಚಾದ ಕಪಾಲಿ ಶಂಕರ್, ಬಿಜೆಪಿ ಕಾರ್ಯದರ್ಶಿ ರಾಜೇಶ್ ಸಿಂಗ್, ಮಾದ್ಯಮ ಪ್ರಮುಖ್ ಕೆಂಬೋಡಿ ನಾರಾಯಣಸ್ವಾಮಿ, ಮುಖಂಡರಾದ ಆನಂದ್, ಹಾರೋಹಳ್ಳಿ ವೆಂಕಟೇಶ್ ಇದ್ದರು.