ಕನ್ನಡಪ್ರಭವಾರ್ತೆ ಪಾವಗಡ
ಇಲ್ಲಿನ ಆನೇಕ ಹಿಂದೂ ಧಾರ್ಮಿಕ ಸಂಸ್ಥೆ ಹಾಗೂ ಮುಜರಾಯಿ ಧರ್ಮದಾಯಕ ದತ್ತಿ ಇಲಾಖೆಯ ಸಹಯೋಗದಲ್ಲಿ ಇದೇ ಜ.16ರಂದು ಮಂಗಳವಾರ ತಾಲೂಕಿನ ನಾಗಲಮಡಿಕೆ ಗ್ರಾಮದಲ್ಲಿ ಶ್ರೀ ಅಂತ್ಯ ಸುಬ್ರಮಣ್ಯಸ್ವಾಮಿಯ ಅದ್ದೂರಿಯ ಬ್ರಹ್ಮರಥೋತ್ಸವಕ್ಕೆ ಶಾಸಕ ಎಚ್.ವಿ.ವೆಂಕಟೇಶ್ ಹಾಗೂ ತಹಸೀಲ್ದಾರ್ ವರದರಾಜು ಚಾಲನೆ ನೀಡಲಿದ್ದಾರೆ.ಈ ಬಾರಿ ಸಂಕ್ರಾತಿ ಹಬ್ಬದ ಮರುದಿನವೇ ರಾಜ್ಯದ ಗಮನ ಸೆಳೆದ ತಾಲೂಕಿನ ನಾಗಲಮಡಿಕೆಯ ಶ್ರೀ ಅಂತ್ಯ ಸುಬ್ರಮಣ್ಯಸ್ವಾಮಿಯ ಮಹೋತ್ಸವ ಹಮ್ಮಿಕೊಂಡಿದ್ದು, 10ದಿನಗಳ ಕಾಲ ವಿವಿಧ ರೀತಿಯ ಪೂಜೆ ಕೆಂಕೈರ್ಯ, ಹಾಗೂ ಧನಗಳ ಜಾತ್ರೆ, ಭಕ್ತರಿಗೆ ಅನುಕೂಲವಾಗುವ ಇತರೆ ಆನೇಕ ರೀತಿಯ ಧಾರ್ಮಿಕ ಕಾರ್ಯಕ್ರಮ ನಡೆಸಲು ಭರ್ಜರಿ ಸಿದ್ಧತೆ ಕೈಗೊಳ್ಳಲಾಗಿದೆ. ಶುದ್ಧ ಭಕ್ತಿ ಹಾಗೂ ನಿಷ್ಟೆ ಕಾಯುವ ಮೂಲಕ ವಿವಿಧ ರೀತಿಯ ಪೂಜೆ ಕಂಕೈರ್ಯಗಳೊಂದಿಗೆ ಶುದ್ಧ ಪುಷ್ಟಿ ಶುಭ ಮೇಷ ಅಭಿಜನ್ ಲಗ್ನ ಮಂಗಳವಾರ ಬೆಳಗ್ಗೆ 11ಗಂಟೆಗೆ ಶ್ರೀ ಸುಬ್ರಮಣ್ಯಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ಶಾಸಕ ಎಚ್.ವಿ.ವೆಂಕಟೇಶ್ ಚಾಲನೆ ನೀಡಲಿದ್ದು, ಬ್ರಹ್ಮರಥೋತ್ಸವದ ಅಂಗವಾಗಿ, ತಾಲೂಕು ಆಡಳಿತ ಹಾಗೂ ಸ್ಥಳೀಯ ಧಾರ್ಮಿಕ ಸಂಸ್ಥೆಗಳಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಇಲ್ಲಿನ ಶ್ರೀ ಸುಬ್ರಮಣ್ಯಸ್ವಾಮಿಗೆ ಆಪಾರ ಸಂಖ್ಯೆಯ ಭಕ್ತರಿದ್ದು, ಬೆಂಗಳೂರು, ತುಮಕೂರು, ಬಳ್ಳಾರಿ, ಹಾಸನ ಚಿತ್ರದುರ್ಗ ಬೀದರ್ ರಾಯಚೂರು ಚಿಕ್ಕಮಗಳೂರು, ಕೋಲಾರ, ಚಿಕ್ಕಬಳ್ಳಾಪುರ ಧಾರವಾಡ ಹಾಗೂ ರಾಜ್ಯದ ನಾನಾ ಜಿಲ್ಲೆ ಹಾಗೂ ಆಂಧ್ರದ ಆನಂತಪುರ ರಾಯದುರ್ಗ ಕಲ್ಯಾಣದುರ್ಗ, ರಾಜಮಂಡ್ರಿ, ತೆಲಂಗಾಣ, ತಮಿಳುನಾಡು ಇತರೆ ಹೊರರಾಜ್ಯಗಳಿಂದ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಆಗಮಿಸಲಿದ್ದು, ಜ.16ರಂದು ನಾಗಲಮಡಿಕೆ ಗ್ರಾಮದ ದೇವಸ್ಥಾನದ ಸುತ್ತ ಅಪಾರ ಸಂಖ್ಯೆಯ ಭಕ್ತರು ಹಾಗೂ ಜನಜಂಗುಳಿಯೇ ಸೇರಲಿದ್ದಾರೆ. ದೇವಸ್ಥಾನಕ್ಕೆ ಉಪವಾಸದೊಂದಿಗೆ ಹೆಚ್ಚಿನ ಸಂಖ್ಯೆಯ ಭಕ್ತರ ಆಗಮನ ಹಿನ್ನಲೆಯಲ್ಲಿ ತಾಲೂಕು ಆಡಳಿತ ವತಿಯಿಂದ ಬಿಗಿ ಬಂದೋಬಸ್ತ್ ಕೈಗೊಂಡಿದ್ದು ದೇವಸ್ಥಾನದ ಸುತ್ತ ಬ್ಯಾರಿಕೇಡ್‌ಗಳ ನಿರ್ಮಾಣ ಹಾಗೂ ಸರದಿ ಸಾಲಿನಲ್ಲಿ ದೇವಸ್ಥಾನಕ್ಕೆ ತೆರಳಿ ಶ್ರೀ ಸುಬ್ರಮಣ್ಯಸ್ವಾಮಿಯ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.ರಾಜ್ಯ ಹಾಗೂ ಹೊರರಾಜ್ಯದ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಿಂದ ಅಪಾರ ಸಂಖ್ಯೆಯ ಭಕ್ತರ ಆಗಮನದ ಹಿನ್ನಲೆಯಲ್ಲಿ ಇಲ್ಲಿನ ಸಾರಿಗೆ ಘಟಕದಿಂದ ಪಾವಗಡದಿಂದ 20 ಕಿ.ಮೀ ದೂರದ ನಾಗಲಮಡಿಕೆಗೆ ವಿಶೇಷ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಿದ್ದು, ಇಂದಿನಿಂದಲೇ ಖಾಸಗಿ ಬಸ್‌ಗಳು ಇಲ್ಲಿನ ಪಟ್ಟಣದ ಬಸ್ ನಿಲ್ದಾಣದಿಂದ ಸರದಿ ಸಾಲಿನಲ್ಲಿ ನಿಂತು ಚಾರ್ಚ್ ಪಿಕ್ಸ್ ಮಾಡುವ ಮೂಲಕ ನಾಗಲಮಡಿಕೆಯ ಶ್ರೀ ಸುಬ್ರಮಣ್ಯಸ್ವಾಮಿ ದೇವಸ್ಥಾನಕ್ಕೆ ಜನತೆಯನ್ನು ಕೊಂಡ್ಯೂಯುತ್ತಿರುವುದು ಸಾಮಾನ್ಯವಾಗಿದೆ.
ಇನ್ನೂ ನಾಗಲಮಡಿಕೆಯ ಸುಬ್ರಮಣ್ಯಸ್ವಾಮಿ ದೇವಸ್ಥಾನದಿಂದ ಅರ್ಧ ಕಿಮೀ ದೂರದಲ್ಲಿ ಹೆಡೆ ಎತ್ತಿ ನಿಂತ ಶ್ರೀ ನಾಗಪ್ಪ ದೇವಸ್ಥಾನವಿದ್ದು, ಭಕ್ತರ ಇಷ್ಟಾರ್ಥ ನೆರೆವೇರಿಸುವಲ್ಲಿ ಈ ದೇವಸ್ಥಾನ ಬಗ್ಗೆ ಭಕ್ತರು ಆಪಾರ ನಂಬಿಕೆಯಿಟ್ಟಿದ್ದು ಹೆಚ್ಚಿನ ಸಂಖ್ಯೆಯ ಭಕ್ತರ ಆಗಮನ ಹಿನ್ನಲೆಯಲ್ಲಿ ಶ್ರೀ ನಾಗಪ್ಪ ದೇವಸ್ಥಾನದ ಸುತ್ತ ಬಿಗಿ ಬಂದೋಬಸ್ತ್ ಸೌಲಭ್ಯ ಕಲ್ಪಿಸಲಾಗಿದೆ. ಸರ್ಕಾರ ಮಡೆಸ್ನಾನಕ್ಕೆ ನಿಷಿಧ್ಧ ಹೇರಿದ್ದು, ಶ್ರೀ ಸುಬ್ರಮಣ್ಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಹರಿಯುವ ಕೃಷ್ಣ ನದಿ ನೀರಿನಲ್ಲಿ ಸ್ನಾನ ಹಾಗೂ ಡ್ಯಾಂ ಬಳಿ ಹೋಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಕಸಕಟ್ಟಿ ವಿಲೇವಾರಿಗೆ ತಡೆ ಹಾಗೂ ಎಲ್ಲಂದರಲ್ಲಿಯೇ ಪ್ರಸಾದ ಸೇವನೆಯ ಊಟದ ಎಲೆ ಮತ್ತು ಇತರೆ ಸಾಮಗ್ರಿಗಳನ್ನು ಬಿಸಾಡುವುದಕ್ಕೆ ನಿಷೇಧ ಹೇರಲಾಗಿದೆ. ನಿಗದಿತ ಸ್ಥಳಗಳಲ್ಲಿ ಬಳಸಿದ ವಸ್ತುಗಳ ಶೇಖರಣೆಗೆ ಸೂಚಿಸಲಾಗಿದ್ದು, ದೇವಸ್ಥಾನದ ಸುತ್ತ ಸ್ವಚ್ಚತೆ ಕಾಪಾಡುಬೇಕು. ನದಿ ನೀರನ್ನು ಕಲುಷಿತಗೊಳಿಸದೇ ಸ್ನಾನ ಮಾಡುವ ವೇಳೆ ಹೆಚ್ಚು ಜಾಗೃತಿ ವಹಿಸಲು ತಾ,ಆಡಳಿತ ಈಗಾಗಲೇ ಜಾಗೃತಿ ಮೂಡಿಸಲಾಗಿದೆ. ಬ್ರಹ್ಮರಥೋತ್ಸದ ಬಳಿಕ ಇನ್ನೂ 9ದಿನಗಳ ಕಾಲ ಪ್ರತಿದಿನ ವಿವಿಧ ರೀತಿಯ ಪೂಜೆ ಕೈಂಕರ್ಯಗಳು ನೆರೆವೇರಲಿದ್ದು, ಕುಡಿವ ನೀರು, ಇತರೆ ಭಕ್ತರಿಗೆ ಅನುಕೂಲವಾಗುವಂತೆ ಅಗತ್ಯ ಸೌಲಭ್ಯ ಕಲ್ಪಿಸಿರುವುದಾಗಿ ತಹಸೀಲ್ದಾರ್ ತಿಳಿಸಿದ್ದು, ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನೆರೆವೇರಿಸುವಂತೆ ಭಕ್ತರಲ್ಲಿ ತಾ,ಆಡಳಿತ ಮನವಿ ಮಾಡಿದೆ. ಅಪಾರ ಸಂಖ್ಯೆಯ ಭಕ್ತರಿದ್ದು ನಿತ್ಯ ದೇವಸ್ಥಾನಕ್ಕೆ ಬರುವವರ ಸಂಖ್ಯೆ ಹೆಚ್ಚಿದ್ದರೂ ಮುಜರಾಯಿ ಇಲಾಖೆಯ ನಿರ್ಲಕ್ಷ್ಯದಿಂದ ಇಲ್ಲಿನ ಶ್ರಿಸುಬ್ರಣ್ಯಸ್ವಾಮಿ ದೇವಸ್ಥಾನ ಅಭಿವೃದ್ದಿ ಹಾಗೂ ದೇವಸ್ಥಾನದ ಕಟ್ಟದ ನವೀಕರಣಗೊಳಿಸದ ಬಗ್ಗೆ ಭಕ್ತರಲ್ಲಿ ತೀವೃ ಬೇಸರ ವ್ಯಕ್ತವಾಗಿದೆ.