ಹರಿಹರ: ಇಂದು ಹಿಂದೂ ಮಹಾಗಣಪತಿ ಅದ್ಧೂರಿ ಶೋಭಾಯಾತ್ರೆ

KannadaprabhaNewsNetwork |  
Published : Sep 14, 2025, 01:04 AM IST
೧೩ಎಚ್‌ಆರ್‌ಆರ್೧ ಹರಿಹರದ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಹಿನ್ನೆಲೆಯಲ್ಲಿರಾಣಿ ಚೆನ್ನಮ್ಮ ವೃತ್ತದಲ್ಲಿ ಸಮುದ್ರ ಮಂಥನ ಸ್ವರೂಪದ ಕಲಾಕೃತಿ(ಟ್ಯಾಬ್ಲೋ) ೧೩ಎಚ್‌ಆರ್‌ಆರ್೧ಎ ಹರಿಹರದ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಹಿನ್ನಲೆಯಲ್ಲಿ ಗಾಂಧಿ ವೃತ್ತದಲ್ಲಿ ಕೇಸರಿ ಬಂಟಿಗ್ಸ್ ನಿಂದ ಕಂಗೋಳಿಸುತ್ತಿರುವುದು.೧೩ಎಚ್‌ಆರ್‌ಆರ್೧ಬಿ ಹರಿಹರ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಹಿನ್ನಲೆಯಲ್ಲಿ ವಿದ್ಯುತ್ ದೀಪದಿಂದ ಆಲಂಕಾರ ಕಾಣಬಹುದು. | Kannada Prabha

ಸಾರಾಂಶ

ನಗರದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆ ತಯಾರಿಗಳು ಅದ್ಧೂರಿಯಾಗಿ ನಡೆದಿದ್ದು, ಸೆ.14ರ ಭಾನುವಾರ ನಡೆಯಲಿರುವ ಬೃಹತ್ ಶೋಭಾಯಾತ್ರೆ ಹಿನ್ನೆಲೆ ನಗರ ಸಂಪೂರ್ಣ ಕೇಸರಿಯಿಂದ ಕಂಗೊಳಿಸುತ್ತಿದೆ.

- ಹರಿಹರ ನಗರ ಪ್ರಮುಖ ರಸ್ತೆ, ವೃತ್ತಗಳಲ್ಲಿ ಕೇಸರಿ ಬಂಟಿಂಗ್ಸ್‌ ಭರಾಟೆ

- ಮಧ್ಯಾಹ್ನ ೨ ಗಂಟೆಗೆ ಮೆರವಣಿಗೆ, 25 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆ

- - -

ಕನ್ನಡಪ್ರಭ ವಾರ್ತೆ ಹರಿಹರ

ನಗರದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆ ತಯಾರಿಗಳು ಅದ್ಧೂರಿಯಾಗಿ ನಡೆದಿದ್ದು, ಸೆ.14ರ ಭಾನುವಾರ ನಡೆಯಲಿರುವ ಬೃಹತ್ ಶೋಭಾಯಾತ್ರೆ ಹಿನ್ನೆಲೆ ನಗರ ಸಂಪೂರ್ಣ ಕೇಸರಿಯಿಂದ ಕಂಗೊಳಿಸುತ್ತಿದೆ.

ಹಿಂದೂ ಜಾಗರಣ ವೇದಿಕೆಯಿಂದ ನಗರದ ಪೇಟೆ ಆಂಜನೇಯ ದೇವಸ್ಥಾನ ಆವರಣದಲ್ಲಿ ಪ್ರತಿಷ್ಠಾಪನೆಗೊಂಡಿರುವ ೬ನೇ ವರ್ಷದ ಗಣೇಶ ಮೂರ್ತಿಯನ್ನು ಶೋಭಾಯಾತ್ರೆ ನಡೆಸಿ, ವಿಸರ್ಜಿಸಲಾಗುವುದು. ಕಾರ್ಯಕ್ರಮ ಅಂಗವಾಗಿ ಹರಿಹರದ ಪ್ರಮುಖ ರಸ್ತೆಗಳು, ವೃತ್ತಗಳು ಕೇಸರಿ ಬಂಟಿಂಗ್ಸ್‌ಗಳಿಂದ ಆವೃತಗೊಂಡು ನೋಡುಗರ ಕಣ್ಮನ ಸೆಳೆಯುತ್ತಿವೆ.

ಹಳೇ ಪಿ.ಬಿ. ರಸ್ತೆ, ಗಾಂಧಿ ವೃತ್ತ, ಮುಖ್ಯರಸ್ತೆ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಶಿವಮೊಗ್ಗ ರಸ್ತೆ, ಕೇಸರಿ ಬಾವುಟಗಳು ಹಾಗೂ ಬಂಟಿಂಗ್ಸ್ ಮತ್ತು ವಿದ್ಯುತ್ ದೀಪಗಳಿಂದ ರಾರಾಜಿಸುತ್ತಿವೆ. ಹಿಂದೂ ಜಾಗರಣಾ ವೇದಿಕೆ ಹಾಗೂ ಹಿಂದೂ ಮಹಾಗಣಪತಿ ಸಮಿತಿ ಕಾರ್ಯಕರ್ತರು ಅದ್ಧೂರಿ ಗಣೇಶ ವಿಸರ್ಜನಾ ಕಾರ್ಯಕ್ರಮ ಎಂಬುದಕ್ಕೆ ಈ ಸಿದ್ಧತೆಗಳೇ ಸಾಕ್ಷಿಯಾಗಿವೆ.

ಶೋಭಾಯಾತ್ರೆ ಸಾಗುವ ಮಾರ್ಗ ರಾಣಿ ಚೆನ್ನಮ್ಮ ವೃತ್ತದಲ್ಲಿ ಸಮುದ್ರ ಮಂಥನ ಸ್ವರೂಪದ ಕಲಾಕೃತಿ (ಟ್ಯಾಬ್ಲೋ) ಸಾರ್ವಜನಿಕರ ಆಕರ್ಷಣಿಯ ಕೇಂದ್ರವಾಗಿದೆ. ಮಧ್ಯಾಹ್ನ ೨ ಗಂಟೆಯಿಂದ ರಾತ್ರಿ ೧೦:೩೦ ರವರೆಗೂ ನಡೆಯಲಿರುವ ಶೋಭಾಯಾತ್ರೆಯಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ಆದಕಾರಣ ಪೇಟೆ ಆಂಜನೇಯ ದೇವಸ್ಥಾನ ಆವರಣದಲ್ಲಿ ಸಮಿತಿಯಿಂದ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ.

ಪ್ರಸಾದ ವಿತರಣೆ:

ನವರತ್ನ ಬೆಳ್ಳಿ ಬಂಗಾರದ ಅಂಗಡಿ ಮಾಲೀಕರು ಸೇರಿದಂತೆ ವಿವಿಧ ಸಂಘ ಸಂಸ್ಥೆಯವರು ಮಾರ್ಗದುದ್ದಕ್ಕೂ ಪ್ರಸಾದ ಹಾಗೂ ಪಾನೀಯ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮೆರವಣಿಗೆ:

ಮಧ್ಯಾಹ್ನ ೨ ಗಂಟೆಯಿಂದ ಆರಂಭವಾಗುವ ಗಣತಪಿ ಮೆರವಣಿಗೆಯು ಪೇಟೆ ಆಂಜನೇಯ ದೇವಸ್ಥಾನದಿಂದ ಶೋಭಾ ಟಾಕೀಸ್ ರಸ್ತೆಯ ಮುಖಾಂತರ ನಗರಸಭೆ ಮುಂಭಾಗದ ಹಳೇ ಪಿ.ಬಿ ರಸ್ತೆಯ ಮೂಲಕ ಗಾಂಧಿ ವೃತ್ತ, ಮುಖ್ಯ ರಸ್ತೆ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಶಿವಮೊಗ್ಗ ರಸ್ತೆ ನಂತರ ಪಕ್ಕಿರಸ್ವಾಮಿ ಮಠ, ಶಿವಮೊಗ್ಗ ರಸ್ತೆ ಬಲ ರಸ್ತೆಯಿಂದ ಪುನಃ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಹಳೆ ಪಿ.ಬಿ ರಸ್ತೆಯ ಮೂಲಕ ನಗರಸಭೆಯಿಂದ ವಿಸರ್ಜನೆಗಾಗಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಿರುವ ನೀರಿನ ಹೊಂಡದಲ್ಲಿ ರಾತ್ರಿ ೧೦ ಗಂಟೆ ಹೊತ್ತಿಗೆ ವಿಸರ್ಜನೆ ಮಾಡಲಾಗುವುದು.

- - -

(ಬಾಕ್ಸ್‌) * ಬಿಗಿ ಪೊಲೀಸ್ ಬಂದೊಬಸ್ತ್ ಗಣಪತಿ ಮೆರವಣಿಗೆ ಹಿನ್ನೆಲೆ ಸೂಕ್ತ ಭದ್ರತೆಗಾಗಿ ಡಿವೈಎಸ್‌ಪಿ-೧, ಸಿಪಿಐ-೬, ಪಿಎಸೈ-೧೧, ಎಎಸ್‌ಐ,ಮಹಿಳಾ ಪಿಸಿ- ಒಟ್ಟು ೧೪೦, ಗೃಹರಕ್ಷಕ ದಳ ಸಿಬ್ಬಂದಿ-೧೨೫, ಕೆಎಸ್‌ಆರ್‌ಪಿ-೧ ತುಕಡಿ, ಡಿಎಆರ್-೧ ತುಕಡಿ ಹಾಗೂ ೧೫ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಮತ್ತು ೪ಕ್ಕೂ ಹೆಚ್ಚು ವೀಡಿಯೋ ಚಿತ್ರೀಕರಣ ಮಾಡುವ ವ್ಯವಸ್ಥೆ ಮಾಡಲಾಗಿದೆ.

- - -

-೧೩ಎಚ್‌ಆರ್‌ಆರ್೧: ಹರಿಹರದ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಹಿನ್ನೆಲೆ ರಾಣಿ ಚೆನ್ನಮ್ಮ ವೃತ್ತದಲ್ಲಿ ನಿರ್ಮಿಸಿರುವ ಸಮುದ್ರ ಮಂಥನ ಸ್ವರೂಪದ ಕಲಾಕೃತಿ ಎಲ್ಲರ ಗಮನ ಸೆಳೆಯುತ್ತಿದೆ.-೧೩ಎಚ್‌ಆರ್‌ಆರ್೧ಎ: ಹರಿಹರದ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಹಿನ್ನೆಲೆ ಕೇಸರಿ ಬಂಟಿಗ್ಸ್‌ಗಳಿಂದ ಶೃಂಗಾರಗೊಂಡಿರುವ ಗಾಂಧಿ ವೃತ್ತ. -೧೩ಎಚ್‌ಆರ್‌ಆರ್೧ಬಿ: ಹರಿಹರ ಹಿಂದೂ ಮಹಾಗಣಪತಿ ಶೋಭಾಯಾತ್ರೆ ವಿದ್ಯುತ್ ದೀಪದಿಂದ ಆಲಂಕಾರ ಮಾಡಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ