ಇಂದು ರಾಜ್ಯೋತ್ಸವ-ನಿತ್ಯೋತ್ಸವ, ಭಾವನಮನ

KannadaprabhaNewsNetwork |  
Published : Nov 27, 2025, 02:45 AM IST
ಪೊಟೋ25ಎಸ್.ಆರ್‌.ಎಸ್‌6  | Kannada Prabha

ಸಾರಾಂಶ

ಸಂಗೀತ ಸಾಹಿತ್ಯದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲೂ ಕನ್ನಡ ಡಿಂಡಿಮ ಮೊಳಗಿಸಿದ ದೇಸಿ ಪ್ರತಿಭೆಗಳ ಕಲಾ ತಂಡ ಕದಂಬ ಕಲಾ ಸಾಂಸ್ಕೃತಿಕ ಪರಿಷತ್ತಿನಿಂದ ನ.27ರಂದು ನಗರದ ಭಾರತ ಸೇವಾದಳದ ಸಭಾಭವನದಲ್ಲಿ ಸುಗಮ ಸಂಗೀತ ಪರಿಷತ್ತಿನ ಸಹಭಾಗಿತ್ವದಲ್ಲಿ ರಾಜ್ಯೋತ್ಸವ-ನಿತ್ಯೋತ್ಸವ, ಸಾಲುಮರದ ತಿಮ್ಮಕ್ಕನವರಿಗೆ ಭಾವನಮನ ಎನ್ನುವ ಭಾವನಾತ್ಮಕ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಶಿರಸಿ

ಸಂಗೀತ ಸಾಹಿತ್ಯದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲೂ ಕನ್ನಡ ಡಿಂಡಿಮ ಮೊಳಗಿಸಿದ ದೇಸಿ ಪ್ರತಿಭೆಗಳ ಕಲಾ ತಂಡ ಕದಂಬ ಕಲಾ ಸಾಂಸ್ಕೃತಿಕ ಪರಿಷತ್ತಿನಿಂದ ನ.27ರಂದು ನಗರದ ಭಾರತ ಸೇವಾದಳದ ಸಭಾಭವನದಲ್ಲಿ ಸುಗಮ ಸಂಗೀತ ಪರಿಷತ್ತಿನ ಸಹಭಾಗಿತ್ವದಲ್ಲಿ ರಾಜ್ಯೋತ್ಸವ-ನಿತ್ಯೋತ್ಸವ, ಸಾಲುಮರದ ತಿಮ್ಮಕ್ಕನವರಿಗೆ ಭಾವನಮನ ಎನ್ನುವ ಭಾವನಾತ್ಮಕ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

ನಾಡು ನುಡಿ ಪರಿಸರ ಗೀತೆಗಳ ಗಾಯನ ಹಾಗೂ ಸ್ಪರ್ಧೆ, ಧ್ವನಿಸುರುಳಿ ಬಿಡುಗಡೆ, ಸಾಲುಮರದ ತಿಮ್ಮಕ್ಕನವರಿಗೆ ಭಾವ ಪುಷ್ಪ ನಮನ ಹಾಗೂ ನಿಶಾ ನಾಯ್ಕರಿಂದ ಯಕ್ಷಹೆಜ್ಜೆ ಹಾಗೂ ವಿವಿಧ ಇಲಾಖಾ ಸಿಬ್ಬಂದಿಗಳಿಂದ ಸಾಂಸ್ಕೃತಿಕ ಸೌರಭ ನೆರವೇರಲಿದೆ.

ಶಾಸಕ ಭೀಮಣ್ಣ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ ಉದ್ಘಾಟಿಸುವರು. ಸ್ಥಳೀಯ ಗಾಯಕರ ದನಿಯಲ್ಲಿ ಮೂಡಿದ ನಿತ್ಯೋತ್ಸವ ಗಾನ ಧ್ವನಿಸುರುಳಿಯನ್ನ ಕದಂಬ ಪರಿಷತ್ತಿನ ಅಧ್ಯಕ್ಷ ಕದಂಬ ರತ್ನಾಕರ ಬಿಡುಗಡೆಗೊಳಿಸುವರು. ಡಿವೈಎಸ್‌ಪಿ ಗೀತಾ ಪಾಟೀಲ್, ತಹಸೀಲ್ದಾರ ಪಟ್ಟರಾಜ ಗೌಡ, ತಾಪಂ ಇಒ ಚನ್ನಬಸಪ್ಪ ಹಾವಣಗಿ, ಪೌರಾಯುಕ್ತ ಪ್ರಕಾಶ್ ಚನ್ನಪ್ಪನವರ, ಪಂಡಿತ ಸಾರ್ವಜನಿಕ ಆಸ್ಪತ್ರೆಯ ಆಡಳಿಯಾಧಿಕಾರಿ ಡಾ. ನೇತ್ರಾವತಿ ಸಿರ್ಸಿಕರ, ಸಿಡಿಪಿಓ ನಂದಕುಮಾರ ಎಂ., ವಲಯಾರಣ್ಯಾಧಿಕಾರಿ ಗಿರೀಶ ನಾಯ್ಕ, ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ರವೀಂದ್ರ ನಾಯ್ಕ, ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ್ ಭಟ್ಟ ಬೆಳಖಂಡ, ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಸೇವಾದಳದ ಅಶೋಕ ಭಜಂತ್ರಿ ಹಾಗೂ ಕದಂಬ ವೇದಿಕೆಯ ಉಮಾಕಾಂತ ಗೌಡ ಮತ್ತಿತರರಿರಲಿದ್ದಾರೆ. ಸಂಪೂರ್ಣ ಕಾರ್ಯಕ್ರಮ ಶ್ರೀ ಮಾರಿಕಾಂಬಾ ಎಂದು ಡಿಜಿಟಲ್ ಟಿವಿಯಲ್ಲಿ ನೇರಪ್ರಸಾರವಾಗಲಿದೆ.

ನಾಡಿನ ವಿವಿಧ ರಂಗದ ವಿಶೇಷ ಸಾಧಕರಾದ ಪ್ರೊ. ಕೆ.ಎನ್. ಹೊಸ್ಮನಿ, ಖ್ಯಾತ ಮುಳುಗು ತಜ್ಞ ಗೋಪಾಲ ಗೌಡ ಹಾಗೂ ಪ್ರಾಣಿ ಪಕ್ಷಿ ತಜ್ಞ ಬಿ.ಎಸ್. ರಾಜೇಂದ್ರಗೆ ರಾಜ್ಯೋತ್ಸವ ವಿಶೇಷ ಗೌರವ ಸನ್ಮಾನ ನಡೆಯಲಿದೆ ಎಂದು ಕದಂಬ ಪರಿಷತ್ತಿನ ಕಾರ್ಯದರ್ಶಿ ದಿವ್ಯಾ ಶೇಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕಗಳಲ್ಲಿ ಬೆಂಗಳೂರು ನಗರಕ್ಕೆ ಬರೋಬ್ಬರಿ ₹38 ಕೋಟಿ ಡ್ರಗ್ಸ್‌ ಸಾಗಾಟ
ಸರ್ಕಾರದಿಂದ ಗೋಬ್ಯಾಕ್‌ ಗೌರ್ನರ್‌ ಅಭಿಯಾನ ಚಿಂತನೆ