ಕನ್ನಡಪ್ರಭ ವಾರ್ತೆ ಮಡಿಕೇರಿ
ಕನ್ನಡ ಭಾಷೆ ಮತ್ತು ಐಚ್ಛಿಕ ವಿಷಯಗಳಲ್ಲಿ ಅತೀ ಹೆಚ್ಚು ಅಂಕಗಳಿಸಿ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳಿಗೆ ಕಥೆಗಾರ್ತಿ ಕೊಡಗಿನ ಗೌರಮ್ಮ ದತ್ತಿ ಚಿನ್ನದ ಪದಕ ಮತ್ತು ಸಾಹಿತಿ ಭಾರತೀಸುತ ದತ್ತಿ ನಗದು ಪುರಸ್ಕಾರವನ್ನು ಜೂ. 11ರಂದು ನಡೆಯುವ ಕಾಲೇಜು ವಾರ್ಷಿಕೋತ್ಸವದಲ್ಲಿ ನೀಡಲಾಗುವುದು ಎಂದು ಪ್ರಾಂಶುಪಾಲರಾದ ಮೇಜರ್ ರಾಘವ ಬಿ ಅವರು ತಿಳಿಸಿದರು.ಮೂರು ವರ್ಷಗಳ ಬಿ ಎ ಪದವಿ ಪರೀಕ್ಷೆಯ ಕನ್ನಡ ಐಚ್ಛಿಕ ವಿಷಯದಲ್ಲಿ ಅತೀ ಹೆಚ್ಚು ಅಂಕಗಳಿಸಿದ ಓರ್ವ ವಿದ್ಯಾರ್ಥಿಗೆ ಕಥೆಗಾರ್ತಿ ಕೊಡಗಿನ ಗೌರಮ್ಮನವರ ಕುಟುಂಬದವರು ನೀಡಿರುವ ದತ್ತಿ ಹಣದಿಂದ ಪ್ರತೀ ವರ್ಷ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಕನ್ನಡ ವಿಭಾಗವು ಚಿನ್ನದ ಪದಕವನ್ನು ನೀಡುತ್ತಾ ಬಂದಿದೆ.
ಅದೇ ರೀತಿ ಕಾಲೇಜಿನ ಬಿಎ, ಬಿಕಾಂ, ಬಿಬಿಎ, ಬಿಎಸ್ಸಿ, ಬಿಎಸ್ ಡಬ್ಲೂ, ಬಿಎಚ್.ಆರ್.ಡಿ, ಬಿಎ ಟೂರಿಸಂನಲ್ಲಿ ವ್ಯಾಸಂಗ ಮಾಡುತ್ತಿರುವ ಎರಡನೇ ವರ್ಷದ ಮೂರು ಮತ್ತು ನಾಲ್ಕನೇ ಸೆಮಿಸ್ಟರ್ ನಲ್ಲಿ ಕನ್ನಡ ವಿಷಯದಲ್ಲಿ ಅತೀ ಹೆಚ್ಚು ಅಂಕಗಳಿಸಿದ ಇಬ್ಬರು ವಿದ್ಯಾರ್ಥಿಗಳಿಗೆ ಸಾಹಿತಿ ಭಾರತೀಸುತರ ಕುಟುಂಬದವರು ಇಟ್ಟಿರುವ ದತ್ತಿ ಪುರಸ್ಕಾರವನ್ನು ನಗದು ರೂಪದಲ್ಲಿ ನೀಡುತ್ತಾ ಬರಲಾಗಿದೆ.ಕರೋನಾ ಮಹಾಮಾರಿಯ ಕಾರಣ ಕಳೆದ ಮೂರು ಶೈಕ್ಷಣಿಕ ವರ್ಷಗಳಿಂದ ಈ ಪುರಸ್ಕಾರವನ್ನು ನೀಡಲು ಸಾಧ್ಯವಾಗಿರಲಿಲ್ಲ. ಪ್ರಸ್ತುತ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಪ್ರೊ. ರಾಘವ ಬಿ, ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ತಿಪ್ಪೇಸ್ವಾಮಿ ಈ ಮತ್ತು ಕನ್ನಡ ವಿಭಾಗದ ಅಧ್ಯಾಪಕರ ಮುತುವರ್ಜಿಯ ಕಾರಣದಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಕನ್ನಡ ಐಚ್ಛಿಕ ಮತ್ತು ಕನ್ನಡ ಭಾಷೆ ವಿಷಯದಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಜೂನ್ 11ರಂದು ನಡೆಯುವ ಕಾಲೇಜು ವಾರ್ಷಿಕೋತ್ಸವದಲ್ಲಿ ಚಿನ್ನದ ಪದಕ ಮತ್ತು ದತ್ತಿ ಪುರಸ್ಕಾರವನ್ನು ವಿತರಿಸಲಾಗುವುದು.
ಕಥೆಗಾರ್ತಿ ಕೊಡಗಿನ ಗೌರಮ್ಮ ದತ್ತಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು: ಚಂದನ ಎಂ ಆರ್ (2022- 23), ಮೋಹನ್ ಎಂ ಎಚ್ (2021-20), ಶ್ರುತಿ ಬಿ ಎ (2020-21)ಸಾಹಿತಿ ಭಾರತೀಸುತ ದತ್ತಿ ನಗದು ಪುರಸ್ಕಾರ ಪಡೆದ ವಿದ್ಯಾರ್ಥಿಗಳು: 2022-23ನೇ ಸಾಲು ಸಂಜನಾ ಸಿ ಎಂ (ತೃತೀಯ ಬಿಕಾಂ ಸಿಎ), ಮೋನಿಶಾ ರೈ (ತೃತೀಯ ಬಿಎಸ್ಸಿ) ಮತ್ತು ಕಾವ್ಯ ಪಿ ಕೆ ( ತೃತೀಯ ಬಿ ಎ), 2021-22ನೇ ಸಾಲು - ರಚನ ಎಸ್ ಎಂ (ಬಿಎ), ಹಿಬಾತುಲ್ ಬಾರಿ ( ಬಿಎಸ್ಸಿ), 2020-21ನೇ ಸಾಲು-ಸ್ಪೂರ್ತಿ ಬಿ ಎಸ್, ಅಪೂರ್ವ ಎಂ ಬಿ
ಇದರೊಂದಿಗೆ ಕಾಲೇಜಿನ ಅಂತಿಮ ವರ್ಷದ ನಾಲ್ಕು ಮಂದಿ ಅತ್ಯುತ್ತಮ ಸಾಧಕ ವಿದ್ಯಾರ್ಥಿಗಳಿಗೆ ದಯಾನಂದ ಪೈ ದತ್ತಿ ಪುರಸ್ಕಾರವನ್ನು, ಕ್ರೀಡಾ ವಿಭಾಗದ ಅತ್ಯುತ್ತಮ ಇಬ್ಬರು ವಿದ್ಯಾರ್ಥಿ ಸಾಧಕರಿಗೆ ಡಾ. ಪುಷ್ಪಾ ಕುಟ್ಟಣ್ಣ ಮಂಡೇಪಂಡ ದತ್ತಿ ಪುರಸ್ಕಾರವನ್ನು ಸಮಾಜಶಾಸ್ತ್ರ ವಿಷಯದಲ್ಲಿ ಅತೀ ಹೆಚ್ಚು ಅಂಕ ಪಡೆದವರಿಗೆ ಡಾ. ಪುಷ್ಪಾ ಕುಟ್ಟಣ್ಣ ಮಂಡೇಪಂಡ ದತ್ತಿ ಪುರಸ್ಕಾರವನ್ನು, ಜಸ್ಟಿಸ್ ಎಂ ಪಿ ಚಿನ್ನಪ್ಪ ಮೆಮೋರಿಯಲ್ ದತ್ತಿ ಪುರಸ್ಕಾರವನ್ನು ಅತ್ಯುತ್ತಮ ನಿರ್ವಣೆಗಾಗಿ, ಪ್ರಥಮ ಬಿಎ ಮತ್ತು ಬಿಎಸ್ಸಿ ವಿಷಯದಲ್ಲಿ ಅತೀ ಹೆಚ್ಚು ಅಂಕಗಳಿಸಿದವರಿಗೆ ಕಡ್ಲೇರ ತಂಗಮ್ಮ ನಂಜಪ್ಪ ಕಡ್ಲೇರ ಸೀತಮ್ಮ ಮುದ್ದಪ್ಪ ದತ್ತಿ ಪುರಸ್ಕಾರವನ್ನು, ಅಪ್ಪಚ್ಚ ಕವಿ ಎಜುಕೇಶನಲ್ ಎಂಡೋಮೆಟ್ ಪುರಸ್ಕಾರ, ಮಾಳೇಟಿರ ಎಂಡೋಮೆಂಟ್ ಫಂಡ್ ಹಾಗೂ ಅರುಣ್ ಕಾರ್ಯಪ್ಪ ದತ್ತಿ ಪುರಸ್ಕಾರವನ್ನು ಜೂನ್ 11ರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.