ಕನ್ನಡಪ್ರಭ ವಾರ್ತೆ ತರೀಕೆರೆ
ಇಂದಿನ ಮಕ್ಕಳೇ ಭವ್ಯ ಭಾರತದ ನಿರ್ಮಾತೃಗಳು ಎಂದು ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆ ಗಣಿತ ಶಿಕ್ಷಕ ಖಿಜರ್ ಖಾನ್ ಎಂ. ಹೇಳಿದರು.ಮಂಗಳವಾರ ಸಮೀಪದ ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಿಂದ ಶಾಲೆಯಲ್ಲಿ ಏರ್ಪಡಿಸಿದ್ದ ಮಕ್ಕಳ ದಿನಾಚರಣೆಯಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನಾಡಿದ್ದರು.
ಮಕ್ಕಳ ದಿನಾಚರಣೆ ಔಚಿತ್ಯವನ್ನು ನೆಹರು ವೈಯಕ್ತಿಕ ಜೀವನದ ಸಾಧನೆಗಳನ್ನು ವಿವರಿಸಿದರು, ಅಲ್ಲದೆ ಮಕ್ಕಳ ನಿಷ್ಕಲ್ಮಶ ಮನಸ್ಸು, ನಿಷ್ಕಪಟತೆ, ನಿಸ್ವಾರ್ಥ ಇತ್ಯಾದಿ ಗುಣಗಳ ಬಗ್ಗೆ ತಿಳಿಸಿದರು, ಮಕ್ಕಳು ಚೆನ್ನಾಗಿ ಓದಿ ತಮ್ಮ ಭವಿಷ್ಠ ಕಟ್ಟಿಕೊಳ್ಳಲು ತಿಳಿಹೇಳಿ, ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡಿಆ ಹಕ್ಕುಗಳ ಮೂಲಕ ತಮ್ಮ ವೈಯಕ್ತಿಕ ಜೀವನ ಅರ್ಥಪೂರ್ಣವಾಗಿ ಕಟ್ಟಿಕೊಳ್ಳುವಂತೆ ಮಾರ್ಗದರ್ಶನ ಮಾಡಿದರು, ಮಕ್ಕಳು ಚೆನ್ನಾಗಿ ಓದಿ ತಮ್ಮ ಸುಂದರ ಜೀವನ ರೂಪಿಸಿಕೊಳ್ಳಲು ಸಲಹೆ ನೀಡಿದರು.
ಜಯಶ್ರೀ ಯು ನಾಯ್ಕ್ ಮಾತನಾಡಿ ನೆಹರುಗೆ ಮಕ್ಕಳ ಬಗ್ಗೆ ಇದ್ದ ಅತೀವ ಕಾಳಜಿ ಮತ್ತು ಪ್ರೀತಿಯನ್ನು ಹಲವಾರು ನಿದರ್ಶನಗಳ ಮೂಲಕ ಹೇಳಿದರು. ಅಲ್ಲದೆ ನೆಹರು ಹೇಗೆ ಬಲಿಷ್ಠ ಭಾರತ ಕಟ್ಟಲು ಶ್ರಮಿಸಿದರು ಎಂಬುದನ್ನು ತಿಳಿಸುತ್ತಾ ಅಂತಹ ಭವ್ಯ ಭಾರತದ ಭವಿಷ್ಯವನ್ನು ನಾವು ಇನ್ನೂ ಹೇಗೆ ಉತ್ತಮವಾಗಿ ನಿರ್ಮಿಸಲು ಸಾಧ್ಯ ಎಂಬ ಬಗ್ಗೆ ಹೇಳಿದರು, ನೆಹರು ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶವನ್ನು ಹೇಗೆ ಬಲಾಢ್ಯ ರಾಷ್ಟ್ರವನ್ನಾಗಿ ಕಟ್ಟಿದರು ಎಂಬುದನ್ನು ತಿಳಿಸಿದರು. ವಿದ್ಯಾರ್ಥಿ ಮಹ್ಮದ್ ನಿಹಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನೆಹರು ಹಲವಾರು ಅಣೆಕಟ್ಟುಗಳು, ಸೇತುವೆಗಳು, ಕೈಗಾರಿಕೆಗಳನ್ನು ನಿರ್ಮಿಸುವ ಮೂಲಕ ದೇಶದ ಅಸ್ತಿತ್ವಕ್ಕೆ ಭದ್ರ ಬುನಾದಿ ಹಾಕಿದರು, ನೆಹರೂ ಅನುಸರಿಸಿದ ವಿದೇಶಾಂಗ ನೀತಿ, ಅಲಿಪ್ತ ನೀತಿ, ಅನ್ಯ ದೇಶಗಳೊಂದಿಗಿನ ಉತ್ತಮ ಬಾಂಧವ್ಯ, ದೇಶಕ್ಕಾಗಿ ಅವರು ತಮ್ಮನ್ನು ತಾವು ಮುಡಿಪಾಗಿಟ್ಟ ನಿದರ್ಶನಗಳ ಬಗ್ಗೆ ಅವರು ಮಾತನಾಡಿದರು. ದೀಕ್ಷಿತ ಆರ್, ಸ್ಪೂರ್ತಿ, ಉಮಾ, ಅಕ್ಷತಾ ಮತ್ತಿತರ ಮಕ್ಕಳು ಕೂಡ ಈ ಸಂದರ್ಭದಲ್ಲಿ ಮಾತನಾಡಿದರು.ಶಾಲಾ ಸಂಸತ್‌ನ ಪದಾಧಿಕಾರಿಗಳಾದ ನಯನ, ಅಮೂಲ್ಯ, ನವೀನ್‌ಕುಮಾರ್, ಮಂಜುನಾಥ ಹುಗ್ಗೇರ, ವರ್ಷಾ, ಪ್ರಕೃತಿ, ದೀಪಿಕಾ, ಮುಖ್ಯೋಪಾಧ್ಯಾಯ ಹಾಲೇಶ್ ಕೆ ಟಿ, ಶಿಕ್ಷಕ-ಶಿಕ್ಷಕಿಯರು, ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕುಮಾರಿ ದೀಕ್ಷಿತ ಸ್ವಾಗತಿಸಿದರು. ಕುಮಾರಿ ಸಹನ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರಿಯಾಂಕ ಮತ್ತು ಅಕ್ಷತಾ ಕಾರ್ಯಕ್ರಮವನ್ನು ನಿರೂಪಿಸಿದರು. ದರ್ಶನ್ ಬಿ. ವಂದಿಸಿದರು.21ಕೆಟಿಆರ್.ಕೆ.2ಃ
ತರೀಕೆರೆ ಸಮೀಪದ ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆ ವತಿಯಿಂದ ಮಕ್ಕಳ ದಿನಾಚರಣೆ ಆಚರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.