ಕನ್ನಡಪ್ರಭ ವಾರ್ತೆ ಮಂಡ್ಯ
ನಗರದಲ್ಲಿರುವ ಗಾಂಧಿ ಭವನದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕ ಆಯೋಜಿಸಿದ್ದ ರಾಜ್ಯ ಮಟ್ಟದ ಕವಿ ಕಾವ್ಯ ಮೇಳ ಹಾಗೂ ಕೋಲ್ಮಿಂಚು ಕವನ ಸಂಕಲನ ಬಿಡುಗಡೆ- ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ೭೦ನೇ ಕನ್ನಡ ರಾಜ್ಯೋತ್ಸವ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ದೇಶದಲ್ಲಿ ಅಸಹಿಷ್ಣತೆ ಇಲ್ಲ ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ, ರಾಷ್ಟಕವಿ ಕುವೆಂಪು ಸಾರಿದ ವಿಶ್ವಮಾನವ ಸಂದೇಶವನ್ನು ಇಂದಿನವರು ಅಳವಡಿಸಿಕೊಳ್ಳಬೇಕಿದೆ, ಇಂದಿನ ಸಾಹಿತಿಗಳು ಸಹಿಷ್ಣತೆ ಸಾರುವ ಸಾಹಿತ್ಯ, ಕೃತಿಗಳನ್ನು ರಚಿಸಲಿ, ಸಮಾಜವನ್ನು ಜಾತಿ ಹೆಸರಿನಲ್ಲಿ ಒಡೆಯುವ, ತುಂಡು ಮಾಡುವಂತಹ ಕೆಟ್ಟ ರಾಜಕೀಯ ವ್ಯವಸ್ಥೆಯನ್ನು ಎತ್ತಿ ತೋರಲಿ ಎಂದರು.ಸಮಾಜವನ್ನು ತಿದ್ದುವ ತಾಕತ್ತಿರುವುದು ಸಾಹಿತಿಗಳು, ಕವಿಗಳಿಗಿದೆ. ಅಂತಹ ಕವಿಗಳು, ಬರಹಗಾರರು ಸಮಾಜವನ್ನು ಸುಧಾರಣೆಗೆ ತರಲು ಪ್ರಯತ್ನಿಸಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಯುವ ಸಾಹಿತಿಗಳು, ಹೊಸತಲೆ ಮಾರಿನ ಬರಹಗಾರರು ಚಿಂತನೆ ನಡೆಬೇಕು. ಬದಲಾವಣೆಯ ದಿಕ್ಸೂಚಿಗಳಾಗಿ ಹೊರಹೊಮ್ಮಬೇಕು ಎಂದರು.
ಇದೇ ಸಂದರ್ಭದಲ್ಲಿ ಕೋಲ್ಮಿಂಚು ಕವನ ಸಂಕಲನ ಬಿಡುಗಡೆಯಾಯಿತು. ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ೭೦ನೇ ಕನ್ನಡ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಲಾಯಿತು. ಕವಿಗಳು ಕವನ ವಾಚಿಸಿದರು.
ಗುರುದೇವ ಲಲಿತಾ ಕಲಾ ಅಕಾಡೆಮಿಗೆ ಗಂಧರ್ವ ಮಹಾ ವಿದ್ಯಾಲಯ ಮಾನ್ಯತೆ
ನಗರದ ಗುರುದೇವ ಲಲಿತಕಲಾ ಅಕಾಡೆಮಿ ಪುಣೆಯ ಗಂಧರ್ವ ಮಹಾ ವಿದ್ಯಾಲಯ ಮಾನ್ಯತೆಯನ್ನು ಪಡೆದುಕೊಂಡಿದೆ. ಅದರಂತೆ ದೇಶಾದ್ಯಂತ ನಡೆಯುವ ಗಂಧರ್ವ ಮಹಾವಿದ್ಯಾಲಯದ ಭರತನಾಟ್ಯ ಪರೀಕ್ಷೆಗಳಾದ
ಈ ಬಾರಿ ಲಿಖಿತ ಪರೀಕ್ಷೆಗೆ ಸುಮಾರು 192 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದರು. ಪ್ರಾಯೋಗಿಕ ಪರೀಕ್ಷೆಯಲ್ಲಿ ಸೇರಿ ಒಟ್ಟು 594 ವಿದ್ಯಾರ್ಥಿಗಳು ವಿವಿಧ ತರಬೇತಿ ಕೇಂದ್ರಗಳಿಂದ ಹಾಗೂ ಗುರುದೇವ ಕೇಂದ್ರದಿಂದ ಪರೀಕ್ಷೆಗೆ ಹಾಜರಾಗುತ್ತಿರುವುದು ವಿಶೇಷ. ಪ್ರಾಯೋಗಿಕ ಪರೀಕ್ಷೆಗಳು ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಕ್ರಮವಾಗಿ ನಡೆಯಲಿವೆ.