ಕನ್ನಡಪ್ರಭ ವಾರ್ತೆ ಯಮಕನಮರಡಿ
ಇಂದು ಜನರಿಗೆ ಧರ್ಮ, ಸಂಸ್ಕಾರದ ಅವಶ್ಯಕತೆ ಇದೆ. ಇಂದಿನ ಯುವಪೀಳಿಗೆ ದುಶ್ಚಟಗಳಿಗೆ ಅಂಟಿಕೊಂಡು ದೈಹಿಕ, ಮಾನಸಿಕ, ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದಾರೆ. ಯುವಕರಿಗೆ ಒಳ್ಳೆಯ ಸಂಸ್ಕಾರ ನೀಡಬೇಕಿದೆ ಎಂದು ಭೂತರಾಮನಹಟ್ಟಿ ಮುಕ್ತಿಮಠದ ಶಿವಸಿದ್ಧ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಸಮೀಪದ ಶಹಾಬಂದರ ಗ್ರಾಮದಲ್ಲಿ ಈಚೆಗೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕರುನಾಡ ರಕ್ಷಣಾ ವೇದಿಕೆ ಸಂಯುಕ್ತಾಶ್ರಯದಲ್ಲಿ ಆಚರಿಸಿದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಿಕ್ಕಲದಿನ್ನಿ-ತೊಲಗಿಯ ಅದೃಶ್ಯಾನಂದ ಸ್ವಾಮೀಜಿ ಮಾತನಾಡಿ, ಕನ್ನಡ ನಾಡಲ್ಲಿ ಅನೇಕ ರಾಜಮಹಾರಾಜರು ಆಳಿ ಕನ್ನಡ ಭಾಷೆ ನೆಲ, ಜಲ, ರಕ್ಷಣೆ ಮಾಡಿದ್ದಾರೆ. ರಾಜ್ಯೋತ್ಸವ ಕನ್ನಡದ ಒಂದು ದಿನದ ಉತ್ಸವವಾಗದೇ ಮನೆ, ಮನಗಳಲ್ಲಿ ಕನ್ನಡಭಾಷೆ ನಿತ್ಯೋತ್ಸವ ಆಗಬೇಕು. ಕನ್ನಡ ಶಬ್ಧಗಳು ನಿತ್ಯ ಜೀವನದಲ್ಲಿ ಬಳಕೆ ಮಾಡಿ ಕನ್ನಡ ಭಾಷೆ ಉಳಿಸಿ, ಬೆಳಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಗುಡದರಿ ಭಾಗದ ಜನರಲ್ಲಿರುವ ಕನ್ನಡಾಭಿಮಾನ ಮೆಚ್ಚುವಂತದ್ದು, ಕನ್ನಡ ಉತ್ಸವ ಮುಂದಿನ ದಿನಗಳಲ್ಲಿ ಇನ್ನೂ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಹೇಳಿದರು.ಸಚಿವ ಜಮೀರಹ್ಮದ್ ಅವರ ಆಪ್ತಸಹಾಯಕ, ಅಸಿಸ್ಟಂಟ್ ಕಮೀಷನರ್ ಹಸನಸಾಬ ತಹಶೀಲ್ದಾರ, ಬೆಳಗಾವಿ ಜಿಲ್ಲಾ ಕರವೇ ಅಧ್ಯಕ್ಷ ದೀಪಕ ಗುಡಗನಟ್ಟಿ, ಉಪನ್ಯಾಸಕ ಪ್ರಕಾಶ ಕಮತಿ ಮಾತನಾಡಿದರು. ಹುಕ್ಕೇರಿ ಕಸಾಪ ಅಧ್ಯಕ್ಷ ಪ್ರಕಾಶ ಅವಲಕ್ಕಿ, ಜಿಪಂ ಮಾಜಿ ಸದಸ್ಯ ಮಂಜುನಾಥ ಪಾಟೀಲ, ಶಹಾಬಂದರ ಪಿಡಿಒ ರಮೇಶ ತೇಲಿ, ಸುರೇಶ ಗವನ್ನವರ, ಕರವೇ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ರಾಜು ನಾಶಿಪುಡಿ, ವಿನೋದ ಜಗಜಂಪಿ, ಉತ್ಸವ ಸಮಿತಿ ಅಧ್ಯಕ್ಷ ಮಾರುತಿ ನಡಗಡ್ಡಿ, ಉಪಾಧ್ಯಕ್ಷ ಪ್ರಕಾಶ ಮಠದವರ, ಉತ್ಸವ ಸಮಿತಿ ಗೌರವ ಅಧ್ಯಕ್ಷ ಆರ್.ಎಸ್. ಪಂಗನ್ನವರ, ಶರಣರಾದ ಸದಾಶಿವ ಹಗೇದಾಳ, ಮಾರುತಿ ಬಿರಂಜಿ, ಮಲ್ಲಿಕಾರ್ಜುನ ಹಗ್ಗೆದಾಳ, ಕರವೇ ಕಾರ್ಯಕರ್ತರು, ಗ್ರಾಮಸ್ಥರು ಇದ್ದರು. ಸಾಹಿತಿ ಮಾರುತಿ ಬುಕನಟ್ಟಿ ಸ್ವಾಗತಿಸಿದರು. ಗ್ರಾಮ ಅಢಳಿತಾಧಿಕಾರಿ ವಿಠ್ಠಲ ಬುಕನಟ್ಟಿ ನಿರೂಪಿಸಿದರು. ಬೀರನೊಳಿ ವಂದಿಸಿದರು.
ಇದೇ ಸಂದರ್ಭದಲ್ಲಿ ಪ್ರಗತಿಪರ ರೈತರಿಗೆ, ಗ್ರಾಮದ ಹಿರಿಯರಿಗೆ ಎಸ್ಸೆಸ್ಸೆಲ್ಸಿ. ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಸರ್ಕಾರದ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಸಾಧಕರಿಗೆ, ನಿವೃತ್ತ ನೌಕರರಿಗೆ, ಪದೋನ್ನತಿ ಪಡೆದವರಿಗೆ ಸತ್ಕರಿಸಲಾಯಿತು.