ಸೊರಬ: ತಾಲೂಕಿನ ವರದಾ ಮತ್ತು ದಂಡಾವತಿ ನದಿಗಳ ಸಂಗಮ ಕ್ಷೇತ್ರ ಬಂಕಸಾಣ ಗ್ರಾಮದಲ್ಲಿ ಶ್ರೀ ಸದ್ಗುರು ಸೇವಾ ಟ್ರಸ್ಟ್ ವತಿಯಿಂದ ನೂತನವಾಗಿ ನಿರ್ಮಿಸಿರುವ “ಸಮಾಧಾನ” ಕಟ್ಟಡದ ಗುರುಪ್ರವೇಶ ಸಮಾರಂಭ ಫೆ.11ರಂದು ಜರುಗಲಿದೆ ಎಂದು ಜಡೆ ಹಿರೇಮಠ ಮತ್ತು ಕಾನುಕೇರಿ ಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.
ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ತೊಗರ್ಸಿ ಮಠದ ಮಹಾಂತ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿ, ಮೂಡಿ ತುರಬಿಗುಡ್ಡ ವಿರಕ್ತ ಮಠದ ಸದಾಶಿವ ಸ್ವಾಮೀಜಿ, ಕ್ಯಾಸನೂರು ಮಠದ ಗುರುಬಸವ ಪಂಡಿತಾರಾಧ್ಯ ಮಹಾಸ್ವಾಮೀಜಿ, ಲಕ್ಕವಳ್ಳಿ ಜೈನ ಮಠದ ವೃಷಭಸೇನ ಭಟ್ಟಾರಕ ಸ್ವಾಮೀಜಿಗಳು ಭಾವಹಿಸುವರು ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ತು ಸದಸ್ಯರಾದ ಭಾರತಿ ಶೆಟ್ಟಿ, ರುದ್ರೇಗೌಡ, ಮಾಜಿ ಸದಚಿವ ಅಲ್ಲಂ ವೀರಭದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ ಮೊದಲಾದವರು ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.ಟೌನ್ ವೀರಶೈವ ಸಮಾಜದ ಅಧ್ಯಕ್ಷ ಎಚ್. ಮಲ್ಲಿಕಾರ್ಜುನಪ್ಪ, ಕಾರ್ಯದರ್ಶಿ ನಾಗರಾಜ ಗುತ್ತಿ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಮಧ್ಯ ಕರ್ನಾಟಕದ ಅಧ್ಯಕ್ಷ ಸಿ.ಪಿ. ಈರೇಶಗೌಡ, ಉದ್ಯಮಿ ಚಂದ್ರಶೇಖರ ನಿಜಗುಣ, ಲಿಂಗರಾಜ ದೂಪದಮಠ ಮೊದಲಾದವರು ಉಪಸ್ಥಿತರಿದ್ದರು.
- - --10ಕೆಪಿಸೊರಬ01:
ಸೊರಬ ಪಟ್ಟಣದ ನಿಜಗುಣ ರೆಸಿಡೆಸ್ಸಿ ಹಾಲ್‌ನಲ್ಲಿ “ಸಮಾಧಾನ” ಕಟ್ಟಡ ಗುರು ಪ್ರವೇಶ ಸಮಾರಂಭ ಕುರಿತು ಜಡೆ ಹಿರೇಮಠದ ಅಮರೇಶ್ವರ ಶಿವಾಚಾರ್ಯ ಶ್ರೀ ಮಾಹಿತಿ ನೀಡಿದರು.