ಇಂದು ಕಾಲೇಜಿನ ಸಂಜನಾಬಾಯಿ ರಾಜ್ಯಕ್ಕೇ ಟಾಪರ್‌, 13 ವಿದ್ಯಾರ್ಥಿಗಳಿಗೂ ಕಲಾ ವಿಭಾಗದಲ್ಲಿ ರ್‍ಯಾಂಕ್‌

KannadaprabhaNewsNetwork |  
Published : Apr 09, 2025, 12:31 AM IST
 ಈ ಸಾಲಿನ ಪಿಯುಸಿ ದ್ವಿತೀಯ ಕಲಾ ವಿಭಾಗದ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ೧ನೇ ಟಾಪರ್ ಆಗಿ ಹೊರ ಹೊಮ್ಮಿರುವ ಕೊಟ್ಟೂರಿನ ಇಂದು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸಂಜನಾ ಬಾಯಿ ಮತ್ತು ಇತರ ಟಾಪರ್‌ಗಳು. | Kannada Prabha

ಸಾರಾಂಶ

ಇಲ್ಲಿಯ ಇಂದು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಂಜನಾ ಬಾಯಿ 600 ಕ್ಕೆ 597 ಅಂಕ ಗಳಿಸಿ ಕಲಾ ವಿಭಾಗಕ್ಕೆ ರಾಜ್ಯಕ್ಕೇ ಟಾಪರ್‌ ಆಗಿದ್ದು, ಇಂದು ಕಾಲೇಜು ಸತತವಾಗಿ 2015 ರಿಂದ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುತ್ತಿದ್ದು, ಆ ಪರಂಪರೆಯನ್ನು ಈಗಲೂ ಮುಂದುವರಿಸಿದೆ.

ಕನ್ನಡಪ್ರಭ ವಾರ್ತೆ ಕೊಟ್ಟೂರು

ಇಲ್ಲಿಯ ಇಂದು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಂಜನಾ ಬಾಯಿ 600 ಕ್ಕೆ 597 ಅಂಕ ಗಳಿಸಿ ಕಲಾ ವಿಭಾಗಕ್ಕೆ ರಾಜ್ಯಕ್ಕೇ ಟಾಪರ್‌ ಆಗಿದ್ದು, ಇಂದು ಕಾಲೇಜು ಸತತವಾಗಿ 2015 ರಿಂದ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುತ್ತಿದ್ದು, ಆ ಪರಂಪರೆಯನ್ನು ಈಗಲೂ ಮುಂದುವರಿಸಿದೆ.

ಇಂದು ಮಹಾವಿದ್ಯಾಲಯದ 13 ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್‌ ಆಗಿದ್ದು, ಸಂಜನಾ ಬಾಯಿ ರಾಜ್ಯಕ್ಕೇ ಟಾಪರ್‌ ಆಗಿದ್ದರೆ, 7ನೇ ರ‍್ಯಾಂಕ್‌ನಲ್ಲಿ ಗೌತಮಿ ಬಿ.( ೫೯೧ ಅಂಕ), ಜಡೆಲಾಲಿ ಯಾದವ್, ನಾಗಲಕ್ಷ್ಮಿ ಒಡೆಯರ ಮತ್ತು ಯಲ್ಲಮ್ಮ ೫೯೦ ಅಂಕ ಪಡೆದು ೮ನೇ ಟಾಪರ್ ಆಗಿದ್ದಾರೆ. ಲಕ್ಷ್ಮಿ ಮತ್ತು ರಘುಪತಿ ಗೌಡ 588 ಅಂಕ ಪಡೆದು ೯ನೇ ಟಾಪರ್‌ ಆಗಿದ್ದಾರೆ. ಅರುಣ, ಈ. ರಾಜೇಶ್ವರ, ಗುರುರಾಜ್ ಕುರಿಯವರ, ಜ್ಯೋತಿ ಸಂಕಲ್ಪ, ಪಿ.ಲತಾ ಮತ್ತು ಪ್ರವೀಣ ೫೮೬ ಅಂಕ ಪಡೆದು ೧೦ನೇ ರ್‍ಯಾಂಕ್‌ ಆಗಿದ್ದಾರೆ.

ಟಾಪರ್‌ಗಳ ಸಂಭ್ರಮಾಚರಣೆ:

ಪಟ್ಟಣದ ಇಂದು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಂಜನಾ ಬಾಯಿ ಮತ್ತು ಇತರ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಟಾಪ್ ೧೦ರ ಸ್ಥಾನ ಪಡೆದು ಟಾಪರ್‌ಗಳಾಗಿ ಹೊರಹೊಮ್ಮಿರುವ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಇಂದು ಮಹಾವಿದ್ಯಾಲಯದಲ್ಲಿ ಸಂಭ್ರಮೋತ್ಸವ ಮೇರೆ ಮೀರಿತು.

ಇಂದು ಪದವಿ ಪೂರ್ವ ಕಾಲೇಜಿನ 13 ವಿದ್ಯಾರ್ಥಿಗಳು, ಟಾಪರ್ ಸ್ಥಾನ ಪಡೆದಿದ್ದಾರೆ ಎಂಬ ಫಲಿತಾಂಶ ಹೊರಬೀಳುತ್ತಿದ್ದಂತೆ ಮಂಗಳವಾರ ಇಂದು ಕಾಲೇಜು ಆವರಣದಲ್ಲಿ ಸಂಭ್ರಮ ಎದ್ದು ಕಾಣುತ್ತಿತ್ತು. ವಿದ್ಯಾರ್ಥಿಗಳು ಪ್ರಾಧ್ಯಾಪಕರು ಮತ್ತಿತರ ಕಾಲೇಜಿನ ಬಳಗದವರು ಹೊರ ಆವರಣದಲ್ಲಿ ಜಮಾವಣೆಗೊಂಡು ಕೇಕೆ ಹಾಕಿ ಪಟಾಕಿಗಳನ್ನು ಸಿಡಿಸಿ ಕುಣಿದಾಡಿದರು. ಪ್ರಥಮ ಟಾಪರ್ ಆಗಿರುವ ಸಂಜನಾ ಬಾಯಿ ಮತ್ತು ಇತರ ಟಾಪರ್‌ಗಳಾದ ಗೌತಮಿ, ಜಡಿಲಾಲ್ ಯಾದವ್, ನಾಗಲಕ್ಷ್ಮೀ ಒಡೆಯರ್, ಯಲ್ಲಮ್ಮ, ಲಕ್ಷ್ಮೀ ಪತಿ, ಮತ್ತಿತರರು ಆಗಮಿಸುತ್ತಿದ್ದಂತೆ ಮಹಿಳಾ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಆತ್ಮೀಯವಾಗಿ ಬರಮಾಡಿಕೊಂಡು ಆರತಿ ಬೆಳಗಿ ಘೋಷಣೆಗಳನ್ನು ಕೂಗಿ ದೃಷ್ಟಿತೆಗೆದು ವಿಜಯೋತ್ಸವಗೈದರು.

ಇಂದು ಪದವಿ ಪೂರ್ವ ಮಹಾವಿದ್ಯಾಲಯ ಕಳೆದ ೧೦ ವರ್ಷಗಳಿಂದ ರಾಜ್ಯದ ಟಾಪರ್ ಸ್ಥಾನವನ್ನು ದ್ವಿತೀಯ ಪಿಯುಸಿಯಲ್ಲಿ ಪಡೆದುಕೊಂಡು ಬರುತ್ತಿರುವುದು ನಮಗೆ ಮತ್ತಷ್ಟು ಉತ್ತೇಜನ ತಂದಿದೆ. ಈ ವರ್ಷವೂ ನಿರೀಕ್ಷೆ ಇಟ್ಟುಕೊಂಡಿದ್ದೆವು. ಅದರಂತೆ ಫಲಿತಾಂಶ ಬಂದಿರುವುದು ಹೆಮ್ಮೆ ಎನಿಸಿದೆ. ಇದಕ್ಕೆ ಕಾಲೇಜಿನಲ್ಲಿನ ಅಧ್ಯಾಪಕ ವರ್ಗದವರ ಟೀಮ್ ವರ್ಕ್‌ ಕಾರಣ ಎನ್ನುತ್ತಾರೆ ಪ್ರಾಚಾರ್ಯ ಎಚ್.ಎನ್. ವೀರಭದ್ರಪ್ಪ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...