ಇಂದು, ನಾಳೆ ದೇವನಗರಿ ಪ್ರೋ ಇಮೇಜ್-2025

KannadaprabhaNewsNetwork |  
Published : Aug 05, 2025, 12:30 AM IST
ಕ್ಯಾಪ್ಷನ4ಕೆಡಿವಿಜಿ34 ದಾವಣಗೆರೆಯಲ್ಲಿ ದೇವನಗರಿ ಪ್ರೋ ಇಮೇಜ್ 2025, 186ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ  ಆಯೋಜಿಸಿರುವ ಕುರಿತು ಶ್ರೀನಾಥ್ ಪಿ.ಅಗಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. | Kannada Prabha

ಸಾರಾಂಶ

ದಾವಣಗೆರೆ ಜಿಲ್ಲಾ ಫೋಟೋಗ್ರಾಫರ್ ಅಂಡ್ ವೀಡಿಯೋಗ್ರಾಫರ್ಸ್, ಫೋಟೋಗ್ರಾಫರ್ಸ್ ಯೂತ್ ವೆಲ್ ಫೇರ್ ಅಸೋಸಿಯೇಷನ್ ವತಿಯಿಂದ ದೇವನಗರಿ ಪ್ರೋ ಇಮೇಜ್-2025, 186ನೇ ವಿಶ್ವ ಛಾಯಾಗ್ರಹಣ ದಿನಾಚರಣೆ-2025 ಕಾರ್ಯಕ್ರಮವನ್ನು ಆ.5 ಮತ್ತು 6ರಂದು ನಗರದ ಶಾಮನೂರು ರಸ್ತೆಯ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಫೋಟೋಗ್ರಾಫರ್ಸ್ ಯೂತ್ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಶ್ರೀನಾಥ್ ಪಿ. ಅಗಡಿ ಹೇಳಿದ್ದಾರೆ.

- 186ನೇ ವಿಶ್ವ ಛಾಯಾಗ್ರಹಣ ದಿನಾಚರಣೆ: ಅಧ್ಯಕ್ಷ ಶ್ರೀನಾಥ್‌ ಅಗಡಿ ಮಾಹಿತಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಜಿಲ್ಲಾ ಫೋಟೋಗ್ರಾಫರ್ ಅಂಡ್ ವೀಡಿಯೋಗ್ರಾಫರ್ಸ್, ಫೋಟೋಗ್ರಾಫರ್ಸ್ ಯೂತ್ ವೆಲ್ ಫೇರ್ ಅಸೋಸಿಯೇಷನ್ ವತಿಯಿಂದ ದೇವನಗರಿ ಪ್ರೋ ಇಮೇಜ್-2025, 186ನೇ ವಿಶ್ವ ಛಾಯಾಗ್ರಹಣ ದಿನಾಚರಣೆ-2025 ಕಾರ್ಯಕ್ರಮವನ್ನು ಆ.5 ಮತ್ತು 6ರಂದು ನಗರದ ಶಾಮನೂರು ರಸ್ತೆಯ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಫೋಟೋಗ್ರಾಫರ್ಸ್ ಯೂತ್ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಶ್ರೀನಾಥ್ ಪಿ. ಅಗಡಿ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಆ.5ರಂದು ಬೆಳಗ್ಗೆ 11.30 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಶ್ರೀನಾಥ್ ಪಿ. ಅಗಡಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ದಾವಣಗೆರೆ- ಹರಿಹರ ನಗರಾಭಿವೃದ್ಧಿ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ, ಸಹಾಯಕ ಕಾರ್ಮಿಕ ಆಯುಕ್ತ ಡಾ.ಅವಿನಾಶ್ ನಾಯ್ಕ, ಕಾರ್ಮಿಕ ಅಧಿಕಾರಿ ಎಸ್.ಅರ್. ಅರವಿಂದ ಭಾಗವಹಿಸುವರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ ಸಂಘದ ದಾವಣಗೆರೆ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಜಾಧವ್, ಶಿವಮೊಗ್ಗದ ಕೆ.ಬಿ.ಶ್ರೀನಿವಾಸ್, ಹಾವೇರಿಯ ರಾಜೇಂದ್ರ ರಿತ್ತಿ, ಗದಗದ ಅಧ್ಯಕ್ಷ ಪವನ್ ಕೆ.ಮೆಹರವಾಡೆ, ಚಿತ್ರದುರ್ಗದ ಸಯ್ಯದ್ ರಹಮತ್ ಉಲ್ಲಾ, ವಿಜಯನಗರದ ಕರಿಬಸವರಾಜ್, ಕೊಪ್ಪಳದ ಅಧ್ಯಕ್ಷ ವಿಜಯ್ ಕುಮಾರ್ ವಸ್ತ್ರದ್, ರಾಯಚೂರಿನ ರಾಜು ಇಲ್ಲೂರ್, ಬಳ್ಳಾರಿಯ ಚಂದ್ರಮೋಹನ್, ಹುಬ್ಬಳ್ಳಿ ಸಂಘದ ಅಧ್ಯಕ್ಷ ಕಿರಣ ಬಾಕಳೆ, ಧಾರವಾಡ ಸಂಘದ ಅಧ್ಯಕ್ಷ ರಾಹುಲ್ ದತ್ತ ಪ್ರಸಾದ್, ದಾವಣಗೆರೆ ಛಾಯಾಗ್ರಾಹಕರ ಸಹಕಾರ ಸಂಘದ ಅಧ್ಯಕ್ಷ ಎಸ್.ಆರ್. ತಿಪ್ಪೇಸ್ವಾಮಿ, ದೇವನಗರಿ ಪ್ರೋ ಇಮೇಜಿನ ಖಜಾಂಚಿ ಎಸ್.ದುಗ್ಗಪ್ಪ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ವಿಜಯ್ ಕುಮಾರ್ ಜಾಧವ್, ಎಸ್.ಆರ್.ತಿಪ್ಪೇಸ್ವಾಮಿ, ಕೆ.ಪಿ.ನಾಗರಾಜ್, ಬಸವರಾಜ್, ಎಸ್.ದುಗ್ಗಪ್ಪ, ನಿರ್ಮಲಾ, ಲಿಂಗರಾಜ, ಶಶಿಕುಮಾರ್, ಅರುಣ್ ಇತರರು ಇದ್ದರು.

- - -

-4ಕೆಡಿವಿಜಿ34:

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ