ನಗರದ 3 ಟೋಲ್‌ಗಳಲ್ಲಿ ದರ ಏರಿಕೆ

KannadaprabhaNewsNetwork |  
Published : Jul 02, 2026, 03:45 AM ISTUpdated : Jul 02, 2026, 04:26 AM IST
  Toll Collection

ಸಾರಾಂಶ

ರಾಜಧಾನಿ ಬೆಂಗಳೂರಿನ ಅತಿ ದೊಡ್ಡ ಟೋಲ್‌ ಕಾರಿಡಾರ್‌ಗಳಾದ ನೈಸ್ ರಸ್ತೆ, ಎಲೆಕ್ಟ್ರಾನಿಕ್ಸ್ ಸಿಟಿ ಎಕ್ಸ್‌ಪ್ರೆಸ್‌ವೇ ಮತ್ತು ಹೊಸೂರು ರಸ್ತೆ ಮಾರ್ಗಗಳಲ್ಲಿ ಜು.1ರ ಬುಧವಾರದಿಂದ ಟೋಲ್‌ ದರ ಹೆಚ್ಚಿಸಲಾಗಿದೆ.

  ಬೆಂಗಳೂರು :  ರಾಜಧಾನಿ ಬೆಂಗಳೂರಿನ ಅತಿ ದೊಡ್ಡ ಟೋಲ್‌ ಕಾರಿಡಾರ್‌ಗಳಾದ ನೈಸ್ ರಸ್ತೆ, ಎಲೆಕ್ಟ್ರಾನಿಕ್ಸ್ ಸಿಟಿ ಎಕ್ಸ್‌ಪ್ರೆಸ್‌ವೇ ಮತ್ತು ಹೊಸೂರು ರಸ್ತೆ ಮಾರ್ಗಗಳಲ್ಲಿ ಜು.1ರ ಬುಧವಾರದಿಂದ ಟೋಲ್‌ ದರ ಹೆಚ್ಚಿಸಲಾಗಿದೆ.

ಬೈಕ್‌ ಸೇರಿದಂತೆ ವಿವಿಧ ಮಾದರಿ ವಾಹನಗಳಿಗೆ ದೂರದ ಮಿತಿಯ ಆಧಾರದಲ್ಲಿ ಶೇ.10ರಿಂದ 13ರಷ್ಟು ಟೋಲ್‌ ಶುಲ್ಕ ಹೆಚ್ಚಿಸಲಾಗಿದೆ. ಇದರಿಂದ ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಬೆಲೆ ಏರಿಕೆ ನಂತರ ವಾಹನ ಸವಾರರಿಗೆ ಟೋಲ್‌ ದರ ಏರಿಕೆ ಬಿಸಿ ತಟ್ಟಿದೆ. ರಸ್ತೆ ನಿರ್ವಾಹಣಾ ವೆಚ್ಚ ಸೇರಿದಂತೆ ವಿವಿಧ ದರ ಏರಿಕೆ ಹಿನ್ನೆಲೆಯಲ್ಲಿ ಟೋಲ್‌ ದರ ಹೆಚ್ಚಿಸಿರುವುದಾಗಿ ಈ ರಸ್ತೆಗಳ ನಿರ್ವಹಣಾ ಪ್ರಾಧಿಕಾರಗಳಾದ ನಂದಿ ಎಕನಾಮಿಕ್‌ ಕಾರಿಡಾರ್‌ ಎಂಟರ್‌ಪ್ರೈಸಸ್‌ ಲಿ(ನೈಸ್‌), ಬೆಂಗಳೂರು-ಮೈಸೂರು ಮೂಲ ಸೌಕರ್ಯ ಕಾರಿಡಾರ್ (ಬಿಎಐಸಿ) ಮತ್ತು ಬೆಂಗಳೂರು ಎಲಿವೇಟೆಡ್ ಟೋಲ್‌ವೇ ಪ್ರೈವೇಟ್ ಲಿಮಿಟೆಡ್ (ಬಿಇಟಿಪಿಎಲ್‌) ಅಧಿಕೃತ ಪ್ರಕಟಣೆ ಹೊರಡಿಸಿವೆ. ಈ ದರ ಹೆಚ್ಚಳ 2027ರ ಜೂ.30ರವರೆಗೆ ಅನ್ವಯಿಸಲಿದೆ ಎಂದು ತಿಳಿಸಿವೆ.

ನೈಸ್‌ ರಸ್ತೆಯಲ್ಲಿ ಎಷ್ಟು:  

ನೈಸ್‌ ರಸ್ತೆ ನಿರ್ಮಿಸಿ ನಿರ್ವಹಣೆ ಮಾಡುತ್ತಿರುವ ನಂದಿ ಎಕನಾಮಿಕ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್ (ನೈಸ್) ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆಗೆ ಸಂಚರಿಸುವ ಕಾರುಗಳಿಗೆ ಈ ವರೆಗೆ ಇದ್ದ 65 ರು. ಟೋಲ್ ಶುಲ್ಕ 72 ರು.ಗೆ, ಬಸ್‌ಗಳಿಗೆ 195 ರು. ಇದ್ದ ಟೋಲ್‌ ಶುಲ್ಕ 215 ರು.ಗೆ, ಟ್ರಕ್‌ಗಳಿಗೆ 128 ರು. ಇದ್ದ ಶುಲ್ಕವನ್ನು 141 ರು.ಗೆ ಏರಿಕೆ ಮಾಡಲಾಗಿದೆ. ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆ, ಮಾಗಡಿ ರಸ್ತೆಯಿಂದ ತುಮಕೂರು ರಸ್ತೆ, ಬನ್ನೇರುಘಟ್ಟದಿಂದ ಕನಕಪುರ, ಕನಕಪುರದಿಂದ ಕ್ಲೋವರ್ ಲೀಫ್ ಜಂಕ್ಷನ್, ಕ್ಲೋವರ ಲೀಫ್ನಿಂದ ಮೈಸೂರು ರೋಡ್, ಲಿಂಕ್ ರೋಡ್‌ ಟೋಲ್‌ ದರವನ್ನು ಹೆಚ್ಚಳ ಮಾಡಲಾಗಿದೆ.

ಎಲೆಕ್ಟ್ರಾನಿಕ್‌ ಸಿಟಿ- ಹೊಸೂರು ಎಕ್ಸ್‌ಪ್ರೆಸ್‌ವೇ: 

 ಎಲೆಕ್ಟ್ರಾನಿಕ್‌ ಸಿಟಿ ಹಾಗೂ ಹೊಸೂರು ರಸ್ತೆಯ ಮೂಲಕ ಸಂಚರಿಸುವ ಟೋಲ್‌ ಮಾರ್ಗದಲ್ಲೂ ಬೆಂಗಳೂರು ಎಲಿವೇಟೆಡ್ ಟೋಲ್‌ವೇ ಪ್ರೈವೇಟ್ ಲಿಮಿಟೆಡ್ (ಬಿಇಟಿಪಿಎಲ್‌) ಟೋಲ್‌ ಶುಲ್ಕ ಏರಿಕೆ ಮಾಡಿದೆ. ಇದರನ್ವಯ, ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಎಲೆಕ್ಟ್ರಾನಿಕ್ಸ್ ಸಿಟಿಗೆ ಸಂಪರ್ಕಿಸುವ 9.98 ಕಿ.ಮೀ ಉದ್ದದ ಎಕ್ಸ್‌ಪ್ರೆಸ್‌ವೇ ಬೆಂಗಳೂರಿನ ಅತಿ ಉದ್ದದ ಫ್ಲೈಓವರ್. ಈ ಫ್ಲೈಓವರ್‌ನಲ್ಲಿ ಕಾರು, ಜೀಪ್, ವ್ಯಾನ್ ಚಾಲಕರು ಬಹು ಪ್ರಯಾಣಗಳಿಗೆ ದಿನಕ್ಕೆ 95 ರು. ಹಾಗೂ ಮಾಸಿಕ ಪಾಸ್‌ ಮೂಲಕ 1,885 ರು. ಟೋಲ್‌ ಶುಲ್ಕ ಕಟ್ಟುತ್ತಿದ್ದರು. ಈಗ ಆ ಶುಲ್ಕವನ್ನು ಕ್ರಮವಾಗಿ ಬಹುಪ್ರಯಾಣಗಳಿಗೆ ದಿನಕ್ಕೆ 100 ರು. ಹಾಗೂ ಮಾಸಿಕ ಪಾಸ್‌ 1,960 ರು.ಗೆ ಹೆಚ್ಚಿಸಿ ಪರಿಷ್ಕರಿಸಲಾಗಿದೆ. ದ್ವಿಚಕ್ರ ವಾಹನ ಸವಾರರು ಮಾಸಿಕ ಪಾಸ್‌ಗೆ ಮೊದಲು ಪಾವತಿಸುತ್ತಿದ್ದ 755 ರು.ಗಳ ಬದಲಿಗೆ ಈಗ 785 ರು. ಪಾವತಿಸಬೇಕಾಗುತ್ತದೆ. ಆದರೆ, ಒಂದೇ ಪ್ರಯಾಣದ ಶುಲ್ಕದಲ್ಲಿ ಯಾವುದೇ ಬದಲಾವಣೆ ಇಲ್ಲ. ಅತ್ತಿಬೆಲೆ ಟೋಲ್ ಪ್ಲಾಜಾದಲ್ಲಿ, ಕಾರು,ಜೀಪ್‌, ವ್ಯಾನ್‌ ಬಹು ಪ್ರಯಾಣಕ್ಕೆ ಮೊದಲು ಪಾವತಿಸುತ್ತಿದ್ದ 55 ರು. ಶುಲ್ಕವನ್ನು 60 ರು.ಗೆ ಹೆಚ್ಚಿಸಲಾಗಿದೆ. 

 ನೈಸ್‌ ರಸ್ತೆಯ ಪರಿಷ್ಕೃತ ಟೋಲ್‌ ದರ(ರು.ಗಳಲ್ಲಿ) 

ಎಲ್ಲಿಂದ ಎಲ್ಲಿಗೆ ಕಾರು ಬಸ್ಸು ಬೈಕ್‌ ಟ್ರಕ್‌

ಹೊಸುರು-ಬನ್ನೇರುಘಟ್ಟ72 21 53 31 41

ಬನ್ನೇರುಘಟ್ಟ-ಕನಕಪುರ 53 17 11 71 08

ಕನಕಪುರು-ಕ್ಲೋವರ್ ಲೀಫ್ ಜಂಕ್ಷನ್ 

39 10 51 166 

ಕ್ಲೋವರ ಲೀಫ್-ಮೈಸೂರು ರೋಡ್  36 94 11 55 

ಮೈಸೂರು ರೋಡ್-ಮಾಗಡಿ ರೋಡ್ 77 22 63 31 54 

ಮಾಗಡಿ ರಸ್ತೆ-ತುಮಕೂರು ರೋಡ್ 61 17 61 71 16 

ಲಿಂಕ್ ರೋಡ್ 83 22 02 51 46 

ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್ ಹೊಸ ದರ (ರು.ಗಳಲ್ಲಿ)

ವಾಹನ 1ಬಾರಿ ಸಂಚಾರ - ಹಲವು ಬಾರಿ ಸಂಚಾರ - ಮಾಸಿಕ ಪಾಸ್‌

ದ್ವಿಚಕ್ರ ವಾಹನ 25 40 785 

ಕಾರು, ಜೀಪು 65 10 01, 960 

ಲಘು ವಾಣಿಜ್ಯ ವಾಹನ/ಮಿನಿ ಬಸ್ 

90 13 52, 745 

ಬಸ್‌/ಟ್ರಕ್ 18 52 755, 495 

ಮಲ್ಟಿ-ಆಕ್ಸಲ್ ವಾಹನ 36 55 50 10,985 

ಅತ್ತಿಬೆಲೆ ಟೋಲ್‌ ಫ್ಲಾಜಾ ಪರಿಷ್ಕೃತ ದರ(ರು.ಗಳಲ್ಲಿ)

ವಾಹನ ಒಂದು ಬಾರಿ ಸಂಚಾರ ಹಲವು ಬಾರಿಗೆ ಮಾಸಿಕ 

ಕಾರು/ಜೀಪ್/ವ್ಯಾನ್ 40 601,175 

ಲಘು ವಾಣಿಜ್ಯ ವಾಹನ/ಮಿನಿ ಬಸ್ 65 1001,960ಬಸ್ಸು/ಟ್ರಕ್ 130.195 3,925

ಮಲ್ಟಿ-ಆಕ್ಸಲ್ ವಾಹನ 275 410 8,240

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಗ್ರಂಥಾಲಯ ಸಂಘದ ಚಟುವಟಿಕೆ ವಿಸ್ತರಣೆಯಲ್ಲಿ ಒಗ್ಗೂಡಿ ಕಾರ್ಯನಿರ್ವಹಿಸಿ
ಜು.6ಕ್ಕೆ ಬೆಳಗಾವಿಗೆ ಡಾ.ಭಾಗವತರ ಆಗಮನ