ಟೊಮೊಟೊ ದರ ಪಾತಾಳಕ್ಕೆ : ಬೆಳೆ ಕಟಾವು ಕೈಬಿಟ್ಟ ರೈತ

KannadaprabhaNewsNetwork |  
Published : May 11, 2025, 11:50 PM ISTUpdated : May 12, 2025, 12:47 PM IST
ಸಿಕೆಬಿ-7   ತೋಟದಲ್ಲೇ ಗಿಡಗಳಲ್ಲಿ ತುಂಬಿ ತುಳುಕುತ್ತಿರುವ ಟೊಮೊಟೊ ಫಸಲು | Kannada Prabha

ಸಾರಾಂಶ

  ಚಿಕ್ಕಬಳ್ಳಾಪುರ ಮತ್ತು ಕೋಲಾರ ಅವಳಿ ಜಿಲ್ಲೆಗಳ ರೈತರು, ಎಥೇಚ್ಛವಾಗಿ ಟೊಮೊಟೊ ಬೆಳೆ ಬೆಳೆದಿದ್ದಾರೆ. ಅದರಲ್ಲೂ ಈ ಭಾರಿ ಫಸಲು ಗುಣಮಟ್ಟ ಚೆನ್ನಾಗಿ ಬಂದಿದೆ. ಆದರೆ ದರ ಕುಸಿದು ರೈತರಿಗೆ ಶಾಪವಾಗಿದೆ.

 ಚಿಕ್ಕಬಳ್ಳಾಪುರ : ಈ ಬಾರಿ ಏರುಗತಿಯಲ್ಲಿ ಸಾಗಿದ್ದ ಟೊಮೊಟೊ ದರ ದಿಢೀರನೇ ಪಾತಾಳಕ್ಕೆ ಕುಸಿದಿದೆ. ಇದರಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಟೊಮೆಟೋ ಬೆಳೆಯುವ ರೈತರು ಕಂಗಾಲಾಗಿದ್ದು, ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಡಿಮೆ ಬೇಡಿಕೆಯಿಂದಾಗಿ ಟೊಮೊಟೋ ಬೆಲೆ ಕುಸಿದಿದೆ. ಟೊಮೆಟೋಗೆ ಸೂಕ್ತ ಬೆಲೆ ಸಿಗದೆ ತೊಂದರೆ ಅನುಭವಿಸುವಂತಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಟೊಮೊಟೊ ಬೆಳಗೆ ಖ್ಯಾತಿ ಪಡೆದಿದೆ. ಚಿಕ್ಕಬಳ್ಳಾಪುರದಲ್ಲಿ ಬೆಳೆದ ಟೊಮೊಟೊ ಬೆಳೆ ವಿದೇಶಕ್ಕೆ ರವಾನೆಯಾಗುತ್ತದೆ. ಆದರೆ, ದೇಶ-ವಿದೇಶಗಳಲ್ಲಿ ಟೊಮೊಟೊಗೆ ಬೇಡಿಕೆ ಕಡಿಮೆಯಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಟೊಮೆಟೋ ದರ ಕುಸಿತ ಕಂಡಿದೆ.ತೋಟದಲ್ಲೇ ಕೊಳೆಯುತ್ತಿರುವ ಬೆಳೆ

ಕಳೆದ ವರ್ಷ ಬೇಸಿಗೆಯಲ್ಲಿ ಟೊಮೊಟೊ ಬೆಲೆ ಗಗನಕ್ಕೆ ಏರಿತ್ತು. ರೈತರು ಕೋಟಿ ಕೋಟಿ ರೂಪಾಯಿ ಲಾಭ ಪಡೆದಿದ್ದರು. ಹೀಗಾಗಿ, ಈ ಬಾರಿಯೂ ಚಿಕ್ಕಬಳ್ಳಾಪುರ ಮತ್ತು ಕೋಲಾರ ಅವಳಿ ಜಿಲ್ಲೆಗಳ ರೈತರು, ಎಥೇಚ್ಛವಾಗಿ ಟೊಮೊಟೊ ಬೆಳೆ ಬೆಳೆದಿದ್ದಾರೆ. ಅದರಲ್ಲೂ ಈ ಭಾರಿ ಫಸಲು ಗುಣಮಟ್ಟ ಚೆನ್ನಾಗಿ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಕೆಂಪು ಸುಂದರಿ ಟೊಮೊಟೊ ಕೇಳುವವರಿಲ್ಲದೆ ತೋಟಗಳಲ್ಲಿ ಕೊಳೆಯುತ್ತಿವೆ.

ಪ್ರತಿ ಎಕರೆಗೆ ₹50 ಸಾವಿರ ವೆಚ್ಚ

ಕಳೆದ ವರ್ಷ ಬೇಸಿಗೆಯಲ್ಲಿ ಟೊಮೊಟೊ ಬೆಲೆ ಗಗನಕ್ಕೆ ಏರಿತ್ತು. ರೈತರು ಕೋಟಿ ಕೋಟಿ ರೂಪಾಯಿ ಲಾಭ ಪಡೆದಿದ್ದರು. ಹೀಗಾಗಿ, ಈ ಬಾರಿಯೂ ಚಿಕ್ಕಬಳ್ಳಾಪುರ ಮತ್ತು ಕೋಲಾರ ಅವಳಿ ಜಿಲ್ಲೆಗಳ ರೈತರು, ಎಥೇಚ್ಛವಾಗಿ ಟೊಮೊಟೊ ಬೆಳೆ ಬೆಳೆದಿದ್ದಾರೆ. ಅದರಲ್ಲೂ ಈ ಭಾರಿ ಫಸಲು ಗುಣಮಟ್ಟ ಚೆನ್ನಾಗಿ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಕೆಂಪು ಸುಂದರಿ ಟೊಮೊಟೊ ಕೇಳುವವರಿಲ್ಲದೆ ತೋಟಗಳಲ್ಲಿ ಕೊಳೆಯುತ್ತಿವೆ. ಒಂದು ಎಕರೆ ಟೊಮೊಟೊ ಬೆಳೆಯಲು 50 ಸಾವಿರ ರುಪಾಯಿಗೂ ಹೆಚ್ಚು ಖರ್ಚು ಬರುತ್ತದೆ. ಟೊಮೊಟೊ ನಾರು ಖರೀದಿ, ಗೊಬ್ಬರ, ಕೀಟನಾಶಕ, ಕೂಲಿ, ಸಾಗಾಟ, ಉಳುಮೆ ಅಂತ ರೈತರು ಸಾಲ ಮಾಡಿ ತೋಟ ಮಾಡುತ್ತಾರೆ. ಆದರೆ, ಈಗ ಬೆಳೆದ ಟೊಮೊಟೊ ಬೆಳೆಗೆ ಬೆಲೆ ಕುಸಿತವಾಗಿದೆ.

15 ಕೆಜಿ ಬಾಕ್ಸ್‌ಗೆ 50 ರಿಂದ 100 ರು.

ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಯಥೇಚ್ಚವಾಗಿ ಟೊಮೆಟೋ ಬೆಳೆಯಲಾಗುತ್ತದೆ. ಚಿಕ್ಕಬಳ್ಳಾಪುರ-ಚಿಂತಾಮಣಿ, ಬಾಗೇಪಲ್ಲಿ ಕೋಲಾರದ ಟೊಮೆಟೋ ಮಾರುಕಟ್ಟೆಯಿಂದ ದೇಶದಲ್ಲಿ ಅಷ್ಟೇ ಅಲ್ಲದೆ ವಿದೇಶಗಳಿಗೂ ಟೊಮೆಟೋ ರಫ್ತು ಮಾಡಲಾಗುತ್ತದೆ. ಪ್ರತಿವರ್ಷ ಚಿಕ್ಕಬಳ್ಳಾಪುರದ ಟೊಮೊಟೊ ಮಾರುಕಟ್ಟೆಯಿಂದ ಎರಡೇರಡು ಕಂಟೈನರ್​ಗಳಷ್ಟು ರಪ್ತು ಆಗುತ್ತಿತ್ತು. ಆದರೆ, ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ರಪ್ತು ನಿಷೇಧದ ಕರಿ ನೆರಳು ಸಹಾ ಬಿದ್ದಿದ್ದು, ಈ ಬಾರಿ 15 ಕೆಜಿಯ ಒಂದು ಕ್ರೇಟ್ ಟೊಮೊಟೊ ಬೆಲೆ 50 ರಿಂದ 100 ರೂಪಾಯಿಗೆ ಮಾತ್ರ ಹರಾಜಾಗುತ್ತಿದೆ. ಒಂದು ಕೆಜಿ ಟೊಮೆಟೋ ಬೆಲೆ ಕೇವಲ ಮೂರರಿಂದ ನಾಲ್ಕು ರುಪಾಯಿ. ಇದರಿಂದ ಟೊಮೊಟೊ ಕೇಳುವವರಿಲ್ಲದೆ ವ್ಯಾಪಾರಸ್ಥರು ಮೌನಕ್ಕೆ ಜಾರಿದ್ದಾರೆ.

ಟೊಮೆಟೋ ಕಟಾವು ಮಾಡುತ್ತಿಲ್ಲ

ಕಷ್ಟ ಪಟ್ಟು ಬೆಳೆದ ಟೊಮೊಟೊಗೆ ಬೆಲೆಯಿಲ್ಲದ ಕಾರಣ, ರೈತರು ತೋಟದಲ್ಲಿ ಟೊಮೊಟೊ ಬೆಳೆಯನ್ನು ಹಾಗೆ ಬಿಟ್ಟಿದ್ದಾರೆ. ಕೆಲವು ರೈತರು ಟೊಮೊಟೊ ತೋಟ ನಾಶ ಮಾಡಿದ್ದಾರೆ. ಹೀಗಾಗಿ, ರಾಜ್ಯ ಸರ್ಕಾರ ಅನ್ನದಾತರ ನೆರವಿಗೆ ಧಾವಿಸುವಂತೆ ರೈತರು ಆಗ್ರಹಿಸಿದ್ದಾರೆ.

PREV

Recommended Stories

ಪಕ್ಷ ಭೇದ ಮರೆತು ಅಭಿವೃದ್ಧಿ ಕೆಲಸ ಮಾಡಿ
ಮುತ್ತೂರು ನಡುಗಡ್ಡೆಯಿಂದ 7 ಕುಟುಂಬಗಳ ಸ್ಥಳಾಂತರ