ಕಾಲವನ್ನು ತಡೆಯೋರು ಯಾರೂ ಇಲ್ಲ..., ದ್ವಾರಕೀಶ ಬಗ್ಗೆ ನಿರ್ದೇಶಕ, ನಿರ್ಮಾಪಕ ಎಚ್.ಆರ್.ಭಾರ್ಗವ ಮೆಲಕುಕನ್ನಡಪ್ರಭ ವಾರ್ತೆ, ದಾವಣಗೆರೆಕನ್ನಡ ಚಿತ್ರರಂಗದ ಪ್ರಸಿದ್ಧ ನಟ, ನಿರ್ದೇಶಕ, ನಿರ್ಮಾಪಕ, ಬಹುಮುಖ ಪ್ರತಿಭೆಯ ದಿ. ದ್ವಾರಕೀಶ್‌ರ ನುಡಿ ನಮನ "ಕಾಲವನ್ನು ತಡೆಯೋರು ಯಾರೂ ಇಲ್ಲ... ಕಾರ್ಯಕ್ರಮ ಜೂ.8ರಂದು ನಗರದ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಸಿನಿಮಾ ಸಿರಿ ಸಂಸ್ಥೆ ಸುರಭಿ ಶಿವಮೂರ್ತಿ ತಿಳಿಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಸಂಜೆ 6ಕ್ಕೆ ಸಿನಿಮಾ ಸಿರಿ ಅಧ್ಯಕ್ಷ, ಹಿರಿಯ ಉದ್ಯಮಿ ಅಂದನೂರು ಮುಪ್ಪಣ್ಣ ಅಧ್ಯಕ್ಷತೆಯಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸಮಾರಂಭ ಉದ್ಘಾಟಿಸಲಿದ್ದು, ಹಿರಿಯ ನಿರ್ಮಾಪಕ, ನಿರ್ದೇಶಕ ಎಚ್.ಆರ್.ಭಾರ್ಗವ ಮುಖ್ಯ ಅತಿಥಿಯಾಗಿ ಭಾಗವಹಿಸಿ, ದ್ವಾರಕೀಶ್ ಕುರಿತು ಮಾತನಾಡುವರು.
ಅವರು ನಟಿಸಿದ, ನಿರ್ದೇಶಿಸಿ, ನಿರ್ಮಿಸಿದ ಚಿತ್ರಗಳ ಆಯ್ದ 25 ಹಾಡುಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿದ ದ್ವಾರಕೀಶರಿಗೆ ಗೌರವ ಸಲ್ಲಿಸಲಾಗುವುದು. ಟಿ.ಎಂ.ಪಂಚಾಕ್ಷರಯ್ಯ, ಡಾ.ಬಿ.ಎಸ್. ನಾಗ ಪ್ರಕಾಶ, ಆರ್.ಟಿ.ಮೃತ್ಯುಂಜಯ, ಎನ್.ವಿ.ಬಂಡಿವಾಡ, ಎಚ್.ವಿ.ಮಂಜುನಾಥ ಸ್ವಾಮಿ ಇತರರು ಭಾಗವಹಿಸುವರು ಎಂದರು.ದಾವಣಗೆರೆ ಕಲಾವಿದರಾದ ಎಂ.ಜಿ.ಜಗದೀಶ, ಆರ್.ಟಿ.ಮೃತ್ಯುಂಜಯ, ವಿ.ಶಶಿ, ಹೇಮಂತ್, ಜಗದೀಶ ಬೇತೂರು, ಸಂಗೀತಾ ರಾಘವೇಂದ್ರ, ಟಿ.ಶೋಭಾ ಹಾಡುಗಳ ಪ್ರಸ್ತುತಪಡಿಸುವರು. ಸಾರ್ವಜನಿಕರಿಗೆ ಉಚಿತ ಪ್ರವೇಶ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ದ್ವಾರಕೀಶರ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ದ್ವಾರಕೀಶ್‌ಗೆ ಕೃತಜ್ಞತೆ ಸಲ್ಲಿಸೋಣ ಎಂದು ಕರೆ ನೀಡಿದರು.
ಕನ್ನಡ ಚಿತ್ರರಂಗದಲ್ಲಿ ಕುಳ್ಳ ಅಂತಲೇ ಖ್ಯಾತರಾದ ದ್ವಾರಕೀಶ ಸಿನಿಮಾಗಳಲ್ಲಿ ಅಭಿನಯಿಸಿ, ನಿರ್ದೇಶನ ಮಾಡಿ, ಚಿತ್ರಗಳನ್ನೂ ನಿರ್ಮಿಸಿದ್ದಾರೆ. ಅನೇಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ, ಸ್ಟಾರ್‌ಗಳಾಗಿ, ಮಾಡಿದ್ದಾರೆ. ನೀ ಬರೆದ ಕಾದಂಬರಿ ಸೇರಿ ಅನೇಕ ಸಿನಿಮಾಗಳ ನಿರ್ದೇಶನದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ ಎಂದು ಸುರಭಿ ಶಿವಮೂರ್ತಿ ತಿಳಿಸಿದರು. ಸಂಸ್ಥೆ ಪ್ರಧಾನ ಕಾರ್ಯದರ್ಶಿ, ಗಾಯಕ ಆರ್.ಟಿ.ಮೃತುಂಜಯ ಮಾತನಾಡಿ, ವರನಟ ಡಾ. ರಾಜ ಕುಮಾರ, ಸಾಹಸ ಸಿಂಹ ವಿಷ್ಣುವರ್ಧನ, ಅಂಬರೀಶ್ ಸೇರಿದಂತೆ ಅನೇಕ ಕಲಾವಿದರೊಂದಿಗೆ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ದ್ವಾರಕೀಶ ತಮ್ಮ ಜೀವನವನ್ನೇ ಚಿತ್ರರಂಗಕ್ಕಾಗಿ ಮುಡುಪಿಟ್ಟಿದ್ದವರು. ಅವರ ಸಾಧನೆ ಅವಿಸ್ಮರಣೀಯ.ಸಂಸ್ಥೆ ಅಧ್ಯಕ್ಷ, ಹಿರಿಯ ಉದ್ಯಮಿ ಅಂದನೂರು ಮುಪ್ಪಣ್ಣ, ಸಂಸ್ಥೆ ಸಾಲಿಗ್ರಾಮ ಗಣೇಶ ಶೆಣೈ, ಡಾ.ಬಿ.ಎಸ್. ನಾಗಪ್ರಕಾಶ, ಆರ್.ಟಿ.ಮೃತ್ಯುಂಜಯ, ಎನ್.ವಿ.ಬಂಡಿವಾಡ, ಸಾಲಿಗ್ರಾಮ ಗಣೇಶ ಶೆಣೈ, ಎಚ್.ವಿ. ಮಂಜುನಾಥ ಸ್ವಾಮಿ ಇತರರು ಇದ್ದರು.
....--ಬಾಕ್ಸ್ಸ್--
ಸಿನಿಮಾ ಸಿರಿ ಸಂಸ್ಥೆ 1998ರಲ್ಲಿ ಸ್ಥಾಪನೆಯಾಗಿದ್ದು, ಇದೀಗ 25ನೇ ವರ್ಷಕ್ಕೆ ಕಾಲಿಡುತ್ತಿದೆ. ಸಂಸ್ಥೆಯ 51ನೇ ಕಾರ್ಯಕ್ರಮವಾಗಿ ದ್ವಾರಕೀಶ್ ಅವರಿಗೆ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಅಂದನೂರು ಮುಪ್ಪಣ್ಣ,
ಅಧ್ಯಕ್ಷರು, ಸಿನಿಮಾ ಸಿರಿ ಸಂಸ್ಥೆ 6ಕೆಡಿವಿಜಿ4-ದಾವಣಗೆರೆಯಲ್ಲಿ ಗುರುವಾರ ಸಿನಿಮಾ ಸಿರಿ ಸಂಸ್ಥೆಯ ಅಂದನೂರು ಮುಪ್ಪಣ್ಣ, ಸುರಭಿ ಶಿವಮೂರ್ತಿ, ಆರ್.ಟಿ,ಮೃತ್ಯುಂಜಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.