ನಾಳೆ ಡಿಕೆಶಿ 65ನೇ ಜನ್ಮದಿನ ಸಂಭ್ರಮಾಚರಣೆ

KannadaprabhaNewsNetwork | Published : May 13, 2025 11:48 PM
Follow Us

ಸಾರಾಂಶ

ಶಿವಮೊಗ್ಗ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ 65ನೇ ವರ್ಷದ ಜನ್ಮದಿನ ಸಂಭ್ರಮಾಚರಣೆಯ ಅಂಗವಾಗಿ ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಮೇ 15ರಂದು ಬೆಳಗ್ಗೆ 11ಕ್ಕೆ ಭಾರತೀಯ ಯೋಧರಿಗೆ ಗೌರವ ಸಮರ್ಪಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಆರ್.ಮೋಹನ್ ಹೇಳಿದರು.

ಶಿವಮೊಗ್ಗ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ 65ನೇ ವರ್ಷದ ಜನ್ಮದಿನ ಸಂಭ್ರಮಾಚರಣೆಯ ಅಂಗವಾಗಿ ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಮೇ 15ರಂದು ಬೆಳಗ್ಗೆ 11ಕ್ಕೆ ಭಾರತೀಯ ಯೋಧರಿಗೆ ಗೌರವ ಸಮರ್ಪಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಆರ್.ಮೋಹನ್ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾರ್ಯಕ್ರಮವನ್ನು ಸಚಿವ ಮಧುಬಂಗಾರಪ್ಪ ಉದ್ಘಾಟಿಸುವರು. ಕುಣಿಗಲ್ ಶಾಸಕ ಡಾ.ರಂಗನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಉಮಾಶ್ರೀ, ಶಾಸಕರಾದ ಬಿ.ಕೆ.ಸಂಗಮೇಶ್ವರ್‌, ಗೋಪಾಲಕೃಷ್ಣ ಬೇಳೂರು ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು, ಗಣ್ಯರು, ನಿಗಮ ಮಂಡಳಿಗಳ ಅಧ್ಯಕ್ಷರು, ಭಾಗವಹಿಸುವರು ಎಂದು ಮಾಹಿತಿ ನೀಡಿದರು.

ನಮ್ಮ ಯೋಧರು ನಮ್ಮ ಹೆಮ್ಮೆ. ಯೋಧರಿಗೆ ಗೌರವ ಸಮರ್ಪಣೆ ಮಾಡುವುದು ನಮ್ಮ ಕರ್ತವ್ಯ ಕೂಡ. ಡಿ.ಕೆ. ಶಿವಕುಮಾರ್‌ ಅವರ ಜನ್ಮದಿನದ ಅಂಗವಾಗಿ ಭಾರತೀಯ ಯೋಧರಿಗೆ ಗೌರವ ಸಮರ್ಪಣೆ ಮಾಡುತ್ತೇವೆ. ಈ ಸಮಾರಂಭದಲ್ಲಿ ಕರ್ನಲ್ ಮಾಣಿಕ್ಯ ಪಥಾನಿಯ, ಲೆ. ಕರ್ನಲ್ ಆರ್. ವಿಷ್ಣುಶಂಕರ್, ಮೇಜರ್ ಮೊಹಮದ್ ಇಕ್ಬಾಲ್, ಸುದರ್ಶನ್ ಸಿಂಗ್, ಪರಮ್‍ಜಿತ್ ಸಿಂಗ್, ಅಫ್ಜಲ್‍ಖಾನ್, ಜಗ್‍ಜಿತ್ ರಾಜ್, ಸ್ಕಾಲ್‍ಝಂಗ್ ರಂಗಧೋಳ್, ಟಿಕಾ ರಾಮ್‍ರಾಯ್, ಕಾಶೀನಾಥ್.ಕೆ. ಚಿರಂಜೀವಿ, ಸುದೀಪ್ ಜಾಧವ್, ಸಜೇಶ್ ಸಸಿ, ಸತ್ನಾಮ್ ಸಿಂಗ್, ಆನಂದ್ ಬಡಕುಂದ್ರಿ, ಕಾಳಗೌಡ ಹಾಲಪ್ಪ ಘಂಟಿ, ಈರಪ್ಪ ನಿರ್ವಾಣಿ ಪಾಟೀಲ್, ಮಕರಂದ್ ಉತ್ತಮ್ ಕೇಸರ್‍ಕರ್, ರಮೇಶ್.ಎಸ್.ಕೆ, ನಾಯಕ್ ಮಹೇಂದ್ರ ಸಿಂಗ್ ನೇಗಿ ಅವರನ್ನು ಸನ್ಮಾನಿಸಲಾಗುವುದು ಎಂದು ವಿವರಿಸಿದರು.

ಹೆಮ್ಮೆಯ ಯೋಧರಿಗೆ ಯಕ್ಷಗಾನ ಕಲಾವಿದ ಹಾಗೂ ಉಪನ್ಯಾಸಕ ವಿ.ದತ್ತಮೂರ್ತಿ ಭಟ್ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಗಿರೀಶ್ ಮತ್ತು ವೃಂದದವರಿಂದ ದೇಶಭಕ್ತಿಗೀತೆಗಳನ್ನು ಆಯೋಜಿಸಲಾಗಿದೆ . ಹಾಗೆಯೇ ಜೀವಮಾನ ಸಾಧನೆಗಾಗಿ ಪಿ.ಲಂಕೇಶ್‌ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಗೋಪಾಲ್ ಯಡಗೆರೆ, ಎಸ್.ಚಂದ್ರಕಾಂತ್, ಕೆ.ತಿಮ್ಮಪ್ಪ ಅವರಿಗೆ ಗೌರವಾರ್ಪಣೆ ಹಾಗೂ ಪತತ್ರಕರ್ತರಾದ ಎನ್.ಮಂಜುನಾಥ್, ಸೂರ್ಯನಾರಾಯಣ್, ಶಿ.ಜು.ಪಾಷ, ಸಂತೋಷ್‌ ಯಲಿಗಾರ್‌, ಸೋಮನಾಥ್‌, ಯೋಗರಾಜ್‌, ಸ್ಪಂದನಚಂದ್ರು, ಶೆಣೈ, ಆರುಂಡಿ ಶ್ರೀನಿವಾಸಮೂರ್ತಿ, ನಾಗರಾಜ್‌ ನೇರಿಗೆ, ಆರ್‌.ಹಾಲೇಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್‌.ಮೋಹನ್‌ಕುಮಾರ್‌, ನಿವೃತ್ತ ಸರ್ಕಲ್ ಇನ್ಸ್‌ಪೆಕ್ಟರ್‌ ಗಣೇಶಪ್ಪ, ನಿವೃತ್ತ ಇನ್ಸ್‌ಪೆಕ್ಟರ್‌ ರಾಮಚಂದ್ರನಾಯ್ಕ್‌, ಏಕಲವ್ಯ ಪ್ರಶಸ್ತಿ ವಿಜೇತ, ಅಂತಾರಾಷ್ಟ್ರೀಯ ವಾಲಿಬಾಲ್‌ ಕ್ರೀಡಾಪಟು ಎಸ್‌.ಆರ್‌.ಅಶೋಕ್‌ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪ್ರಕಾಶ್, ರಾಮಚಂದ್ರಪ್ಪ, ಹನುಮೇಶ್, ತಂಗರಾಜ್, ಮಂಜುನಾಥ್, ಸಿದ್ದಪ್ಪ, ಗಣೇಶಪ್ಪ ಮುಂತಾದವರಿದ್ದರು.