ನಾಳೆ ಕನಕದಾಸರ 537ನೇ ಜಯಂತ್ಯುತ್ಸವ: ರಾಮಪ್ಪ

KannadaprabhaNewsNetwork | Published : Jan 4, 2025 12:33 AM

ಸಾರಾಂಶ

ನಗರದ ಹೈಸ್ಕೂಲ್ ಮೈದಾನದಲ್ಲಿ ಕುರುಬ ಸಮಾಜ ಹಾಗೂ ಸಿದ್ದರಾಮಯ್ಯ ಅಭಿಮಾನಿಗಳ ಬಳಗದಿಂದ ಜ.5ರಂದು ದಾಸಶ್ರೇಷ್ಠ ಶ್ರೀ ಕನಕದಾಸರ 537ನೇ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಮುಖಂಡ, ಮಾಜಿ ಶಾಸಕ ಎಸ್.ರಾಮಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಸಿಎಂ ಸಿದ್ದರಾಮಯ್ಯ ಉದ್ಘಾಟನೆ, ಸಚಿವ ಎಸ್ಸೆಸ್ಸೆಂರಿಂದ ಕನಕ ಪುತ್ಥಳಿ ಅನಾವರಣ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ನಗರದ ಹೈಸ್ಕೂಲ್ ಮೈದಾನದಲ್ಲಿ ಕುರುಬ ಸಮಾಜ ಹಾಗೂ ಸಿದ್ದರಾಮಯ್ಯ ಅಭಿಮಾನಿಗಳ ಬಳಗದಿಂದ ಜ.5ರಂದು ದಾಸಶ್ರೇಷ್ಠ ಶ್ರೀ ಕನಕದಾಸರ 537ನೇ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಮುಖಂಡ, ಮಾಜಿ ಶಾಸಕ ಎಸ್.ರಾಮಪ್ಪ ಹೇಳಿದರು.

ಹೈಸ್ಕೂಲ್ ಮೈದಾನದಲ್ಲಿ ಸಮಾರಂಭದ ಪೂರ್ವಸಿದ್ಧತೆ ವೀಕ್ಷಿಸಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಕ ಜಯಂತಿ ಅಂಗವಾಗಿ ಜ.4ರಂದು ಬೆಳಗ್ಗೆ 9.30ಕ್ಕೆ ಎಸ್‌.ಎಸ್‌. ಹೈಟೆಕ್ ಆಸ್ಪತ್ರೆ ರಸ್ತೆಯ ಶ್ರೀ ಬೀರೇಶ್ವರ ಬಡಾವಣೆ ಸಮೀಪದ ಶ್ರೀ ಕಾಳಿದಾಸ ವೃತ್ತದಿಂದ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಬೈಕ್ ರ್ಯಾಲಿಯಲ್ಲಿ ನಾಯಕ ಸಮಾಜದ ಮುಖಂಡ ಆರ್.ಎಸ್. ಶೇಖರಪ್ಪ, ಅಹಲ್ಯಾ ಮಹಿಳಾ ಸಂಘದ ಅಧ್ಯಕ್ಷೆ ಪುಷ್ಪಾ ಆನಂದ, ಕುರುಬ ಸಮಾಜದ ಮುಖಂಡ ನಿಟುವಳ್ಳಿ ಕೆ.ಪುಟ್ಟಪ್ಪ, ಸಹಕಾರ ಇಲಾಖೆ ನಿವೃತ್ತ ಸಹಾಯಕ ನಿಬಂಧಕ ಎನ್.ಜಿ.ರುದ್ರಪ್ಪ, ನಗರಸಭೆ ಮಾಜಿ ಅಧ್ಯಕ್ಷ ಆರ್.ಎಚ್‌.ನಾಗಭೂಷಣ ಭಾಗವಹಿಸುವರು. ಜ.5ರಂದು ಬೆಳಗ್ಗೆ 9.30ಕ್ಕೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಬಳಿಯಿಂದ ಹೈಸ್ಕೂಲ್ ಮೈದಾನದವರೆಗೆ ಮೆರವಣಿಗೆಗೆ ಸಂಸದೆ ಡಾ.ಪ್ರಭಾ ಚಾಲನೆ ನೀಡುವರು. ಡಿಸಿ ಗಂಗಾಧರಸ್ವಾಮಿ, ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ, ಪಾಲಿಕೆ ಆಯುಕ್ತೆ ರೇಣುಕಾ, ಮಾಜಿ ಶಾಸಕ ಎಸ್.ರಾಮಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಪಾಲ್ಗೊಳ್ಳುವರು ಎಂದು ಹೇಳಿದರು.

ಅನಂತರ ಬೆಳಗ್ಗೆ 11.30ಕ್ಕೆ ಕನಕ ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ಹೊಸದುರ್ಗ ಪೀಠದ ಈಶ್ವರಾನಂದ ಪುರಿ ಶ್ರೀ, ತಿಂಥಣಿ ಶಾಖಾಮಠದ ಸಿದ್ದರಾಮನಂದ ಪುರಿ ಶ್ರೀ, ಹದಡಿ ಚಂದ್ರಗಿರಿ ಮಠದ ಮುರಳೀಧರ ಶ್ರೀ, ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿ ಶ್ರೀ, ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀ, ಚಿತ್ರದುರ್ಗ ಭೋವಿ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀ, ಮಾದಾರ ಚೆನ್ನಯ್ಯ ಪೀಠದ ಮಾದರ ಚನ್ನಯ್ಯ ಶ್ರೀ, ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಶ್ರೀ, ಮುಸ್ಲಿಂ ಧರ್ಮಗುರು ಮೌಲಾನ ಬಿ.ಎ. ಇಬ್ರಾಹಿಂ ಸಖಾಫಿ, ಕ್ರೈಸ್ತ ಧರ್ಮಗುರು ಫಾದರ್ ಯರಿಕ್ ಮ್ಯಾಥ್ಯೂಸ್, ಡಾ.ಉದಯ ಶಂಕರ್ ಒಡೆಯರ್, ಅಲ್ಲಮಾ ಇಲಿಯಾಸ್ ಖಾದ್ರಿ ಸಾನಿಧ್ಯದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.

ಸಿಎಂ ಸಿದ್ದರಾಮಯ್ಯ ಕನಕ ಜಯಂತಿ ಸಮಾರಂಭ ಉದ್ಘಾಟಿಸಲಿದ್ದಾರೆ. ಕನಕದಾಸ ಪುತ್ಥಳಿಯನ್ನು ಜಿಲ್ಲಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಉದ್ಘಾಟಿಸುವರು. ಸಚಿವರಾದ ಡಾ. ಜಿ.ಪರಮೇಶ್ವರ್, ಭೈರತಿ ಸುರೇಶ್, ಡಾ. ಎಚ್.ಸಿ. ಮಹದೇವಪ್ಪ, ಸತೀಶ ಜಾರಕಿಹೊಳಿ, ಬಿ.ಝೆಡ್. ಜಮೀರ್ ಅಹಮದ್ ಖಾನ್, ಸಂತೋಷ್‌ ಎಸ್. ಲಾಡ್, ಶಿವರಾಜ ಎಸ್. ತಂಗಡಗಿ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಮಾಜಿ ಸಚಿವ ಎಚ್.ಎಂ. ರೇವಣ್ಣ, ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ, ಬಿ.ಪಿ.ಹರೀಶ, ಡಿ.ಜಿ. ಶಾಂತನಗೌಡ, ಬಸವರಾಜ ವಿ.ಶಿವಗಂಗಾ, ಕೆ.ಎಸ್. ಬಸವಂತಪ್ಪ, ಜಗಳೂರಿನ ಚಿಕ್ಕಮ್ಮನಟ್ಟಿ ಬಿ.ದೇವೇಂದ್ರಪ್ಪ ಇತರರು ಭಾಗವಹಿಸುವರು. ಮಾಜಿ ಮೇಯರ್ ಎಚ್.ಬಿ. ಗೋಣೆಪ್ಪ ಅಧ್ಯಕ್ಷತೆ ವಹಿಸುವರು ಎಂದು ಮಾಹಿತಿ ನೀಡಿದರು.

ಸಮಾಜದ ಯುವ ಮುಖಂಡ, ಪಾಲಿಕೆ ಸದಸ್ಯ ಜೆ.ಎನ್. ಶ್ರೀನಿವಾಸ, ಮುಖಂಡರಾದ ಮಾಜಿ ಮೇಯರ್ ಎಚ್.ಬಿ.ಗೋಣೆಪ್ಪ, ಹರಿಹರ ಬಿ.ರೇವಣಸಿದ್ದಪ್ಪ, ಶ್ರೀನಿವಾಸ ನಂದಿಗಾವಿ, ನಾಯಕ ಸಮಾಜದ ಮುಖಂಡ ಬಿ.ವೀರಣ್ಣ, ಭೋವಿ ಸಮಾಜದ ಮುಖಂಡ ಡಿ.ಬಸವರಾಜ ಇತರರು ಇದ್ದರು.

- - - -3ಕೆಡಿವಿಜಿ5.ಜೆಪಿಜಿ:

ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ಕುರುಬ ಸಮಾಜದ ಮುಖಂಡ, ಮಾಜಿ ಶಾಸಕ ಎಸ್.ರಾಮಪ್ಪ, ಪಾಲಿಕೆ ಸದಸ್ಯ ಜೆ.ಎನ್. ಶ್ರೀನಿವಾಸ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Share this article