ನಾಳೆ ಕರುನಾಡ ಜಾನಪದ ಕಲಾ ಮಹೋತ್ಸವ - 2026

KannadaprabhaNewsNetwork |  
Published : May 15, 2026, 01:45 AM IST
13ಕೆಆರ್ ಎಂಎನ್ 1.ಜೆಪಿಜಿಕಲಾಜ್ಯೋತಿ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಎಸ್ .ರೇಣುಕಾ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಮನಗರ: ಕಲಾಜ್ಯೋತಿ ಚಾರಿಟಬಲ್ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಮೇ 16ರಂದು ನಗರದ ಅಂಬೇಡ್ಕರ್ ಭವನದಲ್ಲಿ ಎಬಿಸಿಡಿ ಡ್ಯಾನ್ಸ್ ಅಕಾಡೆಮಿ ವಾರ್ಷಿಕೋತ್ಸವ ಅಂಗವಾಗಿ ಕರುನಾಡ ಜಾನಪದ ಕಲಾ ಮಹೋತ್ಸವ - 2026 ಮತ್ತು ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾಂಭ ಆಯೋಜಿಸಿದೆ ಎಂದು ಟ್ರಸ್ಟ್ ಸಂಸ್ಥಾಪಕ ಎಸ್.ರೇಣುಕಾಪ್ರಸಾದ್ ತಿಳಿಸಿದರು

ರಾಮನಗರ: ಕಲಾಜ್ಯೋತಿ ಚಾರಿಟಬಲ್ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಮೇ 16ರಂದು ನಗರದ ಅಂಬೇಡ್ಕರ್ ಭವನದಲ್ಲಿ ಎಬಿಸಿಡಿ ಡ್ಯಾನ್ಸ್ ಅಕಾಡೆಮಿ ವಾರ್ಷಿಕೋತ್ಸವ ಅಂಗವಾಗಿ ಕರುನಾಡ ಜಾನಪದ ಕಲಾ ಮಹೋತ್ಸವ - 2026 ಮತ್ತು ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾಂಭ ಆಯೋಜಿಸಿದೆ ಎಂದು ಟ್ರಸ್ಟ್ ಸಂಸ್ಥಾಪಕ ಎಸ್.ರೇಣುಕಾಪ್ರಸಾದ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾರ್ಷಿಕೋತ್ಸವ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಹಿರಿಯ ಕಲಾವಿದರಿಗೆ ಕಲಾಜ್ಯೋತಿ ಜಾನಪದ ರತ್ನ ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಕಲಾಜ್ಯೋತಿ ಕನ್ನಡರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಬೆಳಗ್ಗೆ ಶ್ರೀ ರೇವಣಸಿದ್ದೇಶ್ವರಸ್ವಾಮಿ ದಾಸೋಹ ಮಠದ ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಶಾಸಕ ಇಕ್ಬಾಲ್ ಹುಸೇನ್ ಸಮಾರಂಭ ಉದ್ಘಾಟಿಸಲಿದ್ದು, ಪದ್ಮಶ್ರೀ ಪುರಸ್ಕೃತ ಡಾ.ಹಾಸನ ರಘು ಅಧ್ಯಕ್ಷತೆ ವಹಿಸಲಿದ್ದಾರೆ.

ಅತಿಥಿಗಳಾಗಿ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್, ಎಸ್ಪಿ ಶ್ರೀನಿವಾಸಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸತೀಶ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಚೇತನ್ ಕುಮಾರ್, ಜಾನಪದ ವಿದ್ವಾಂಸ ಡಾ.ಕಾಳಯ್ಯ, ಉಪನ್ಯಾಸಕ ಡಾ.ಅಂಕನಹಳ್ಳಿ ಪಾರ್ಥ, ಎಂಐನ ಸಿಟಿಸಿ ಹೇಮಂತ್ ಕುಮಾರ್, ಪತ್ರಕರ್ತೆ ಸುಧಾರಣಿ, ವಿಶೇಷ ಆಹ್ವಾನಿತರಾಗಿ ಡ್ಯಾನ್ಸ್ ಮಾಸ್ಟರ್ ರವಿಕುಮಾರ್, ರುದ್ರ ಮಾಸ್ಟರ್, ಶಶಿ ಮಾಸ್ಟರ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಂಜೆ 4 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅಧ್ಯಕ್ಷತೆಯಲ್ಲಿ ಜಾನಪದ ವಿದ್ವಾಂಸ ಎಂ.ಬೈರೇಗೌಡ ಉದ್ಘಾಟಿಸುವರು. ಸಮಾಜ ಸೇವಕ ಮಹೇಂದ್ರ ಮುನ್ನೂತ್, ಶ್ರೀ ಗಣೇಶ್ ಜ್ಯುವೆಲರ್ಸ್ ಮಾಲೀಕ ಲಕ್ಷ್ಮಣ್, ವಕೀಲ ದರ್ಶನ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರಾಜು, ಪತ್ರಕರ್ತರಾದ ಸೂರ್ಯಪ್ರಕಾಶ್, ರಾಜು ಪಾದರಹಳ್ಳಿ, ಸಾಹಿತಿ ಪೂರ್ಣಚಂದ್ರ ಮತ್ತಿತರರು ಪಾಲ್ಗೊಳ್ಳುವರು ಎಂದು ಹೇಳಿದರು.

ಚನ್ನಪಟ್ಟಣದ ಸರ್ವೋತ್ತಮ ಮತ್ತು ತಂಡ ಸುಗಮ ಸಂಗೀತ ಗಾಯನ ಹಾಗೂ ಹೊನ್ನಿಗಾನಹಳ್ಳಿ ಸಿದ್ದರಾಜಯ್ಯ ಮತ್ತು ತಂಡ ಜಾನಪದ ಗೀತ ಗಾಯನ ನಡೆಸಿಕೊಡುವರು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳು ಪ್ರದರ್ಶನ ನೀಡಲಿವೆ ಎಂದು ರೇಣುಕಾ ಪ್ರಸಾದ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಶಶಿಕಲಾ, ಎನ್.ವಿ.ಲೋಕೇಶ್, ಗೋವಿಂದಯ್ಯ, ಚಂದನ್ ಇದ್ದರು.

ಬಾಕ್ಸ್ ....

ಕಲಾಜ್ಯೋತಿ ಜಾನಪದ ರತ್ನ ಪ್ರಶಸ್ತಿ ಪುರಸ್ಕೃತರು:

ಅಂತರಾಷ್ಟ್ರೀಯ ಜಾನಪದ ಕಲಾವಿದ ಎಸ್.ಪ್ರದೀಪ್, ಡೊಳ್ಳು ಕುಣಿತ ಕಲಾವಿದ ರಮೇಶ್, ಪೂಜಾ ಕುಣಿತ ಕಲಾವಿದ ಪಾರ್ಥಸಾರಥಿ, ತಂಬೂರಿ ಕಲಾವಿದ ತಂಬೂರಿ ಶಿವಣ್ಣ, ತಮಟೆ ಕಲಾವಿದ ಮಲ್ಲೇಶ್, ಕೋಲಾಟ ಕಲಾವಿದ ಜಿ.ಚನ್ನಪ್ಪ, ಭರತನಾಟ್ಯ ಕಲಾವಿದ ವಿದುಷಿ ಹೇಮಾ, ಯಕ್ಷಗಾನ ಕಲಾವಿದೆ ಪಂಚಮಿ, ಗಾಯಕ ಕೆಂಗಲ್ ವಿನಯ್ ಕುಮಾರ್ , ರಂಗಭೂಮಿ ಕಲಾವಿದ ಎಚ್.ವಿ.ಮೂರ್ತಿ.

ಬಾಕ್ಸ್ ...

ಕಲಾಜ್ಯೋತಿ ಕನ್ನಡರತ್ನ ಪ್ರಶಸ್ತಿ ಪುರಸ್ಕೃತರು:

ಪತ್ರಕರ್ತರಾದ ಸು.ತಾ.ರಾಮೇಗೌಡ, ಚೆಲುವರಾಜು, ರುದ್ರೇಶ್ , ಕೆ.ಅರುಣ್ , ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಜಗದೀಶ್ , ಕನ್ನಡಪರ ಹೋರಾಟಗಾರ ಗೋವಿಂದರಾಜು, ಆರ್ ಬಿಎಲ್ ಮಾಲೀಕ ಲೋಕೇಶ್ , ಭರತನಾಟ್ಯ ಕಲಾವಿದೆ ಕಾವ್ಯಶ್ರೀ, ಗಾಯಕ ರಘುನಂದನ್ , ರೇಣುಕಾ ಟಿಫಾನಿಸ್ ಮಾಲೀಕ ನಾಗರಾಜ್ .

13ಕೆಆರ್ ಎಂಎನ್ 1.ಜೆಪಿಜಿ

ಕಲಾಜ್ಯೋತಿ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಎಸ್ .ರೇಣುಕಾಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಲೆ ಮುಚ್ಚುವ ಪ್ರಕ್ರಿಯೆ ವಿರೋಧಿಸಿ ಪ್ರತಿಭಟನೆ
ಸಾಂಸ್ಕೃತಿಕ ಮೌಲ್ಯದೊಂದಿಗೆ ಇನ್ಫೋಸಿಸ್‌ ಕಾರ್ಯನಿರ್ವಹಣೆ