ನಾಳೆ ನಿಡಗಲ್ಲು ಉತ್ಸವ

KannadaprabhaNewsNetwork |  
Published : Sep 01, 2024, 01:51 AM IST
ಫೋಟೋ 31ಪಿವಿಡಿ10ಶ್ರಾವಣಮಾಸದ ಕಡೇ ಸೋಮವಾರದ ಹಿನ್ನಲೆ ತಾ,ಐತಿಹಾಸಿಕ ನಿಡಗಲ್ಲು ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಇಲ್ಲಿನ ಶ್ರೀ ವಾಲ್ಮೀಕಿ ಸಂಸ್ಥಾನದ ಸಂಜಯ್ ಕುಮಾರ್ ಸ್ವಾಮೀಜಿ ಕರೆ ನೀಡಿದರು. | Kannada Prabha

ಸಾರಾಂಶ

ಸೆ.2ರಂದು ಹಮ್ಮಿಕೊಂಡಿರುವ ನಿಡಗಲ್ಲು ಉತ್ಸವಕ್ಕೆ ಎಲ್ಲರೂ ಭಾಗವಹಿಸಬೇಕು ಎಂದು ಶ್ರೀ ವಾಲ್ಮೀಕಿ ಸಂಸ್ಥಾನದ ಶ್ರೀ ಸಂಜಯ್ ಕುಮಾರ್ ಸ್ವಾಮೀಜಿ ಕರೆ ನೀಡಿದರು.

ಪಾವಗಡ: ಸೆ.2ರಂದು ಹಮ್ಮಿಕೊಂಡಿರುವ ನಿಡಗಲ್ಲು ಉತ್ಸವಕ್ಕೆ ಎಲ್ಲರೂ ಭಾಗವಹಿಸಬೇಕು ಎಂದು ಶ್ರೀ ವಾಲ್ಮೀಕಿ ಸಂಸ್ಥಾನದ ಶ್ರೀ ಸಂಜಯ್ ಕುಮಾರ್ ಸ್ವಾಮೀಜಿ ಕರೆ ನೀಡಿದರು.

ತಾಲೂಕಿನ ನಿಡಗಲ್‌ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಆಶ್ರಮ ನಿಡಗಲ್ಲು ಸಂಸ್ಥಾನದ ಆಶ್ರಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿ ಮಾತನಾಡಿ, ಸೆ,2 ರಂದು ಗ್ರಾಮಸ್ಥರ ಸಹಕಾರ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಆಶ್ರಮ, ವಾಲ್ಮೀಕಿ ಜಾಗೃತಿ ವೇದಿಕೆ ವತಿಯಿಂದ ನಿಡಗಲ್ಲು ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ವಾಲ್ಮೀಕಿ ಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ದೇವಲಕರೆ ಲೋಕೇಶ್‌ ಮಾತನಾಡಿ, ನಿಡಗಲ್‌ ಗ್ರಾಮದಲ್ಲಿ ಐತಿಹಾಸಿಕ ನಿಡುಗಲ್ಲು ದುರ್ಗದ ಉತ್ಸವವನ್ನು ಸರ್ಕಾರದ ವತಿಯಿಂದ ಆಚರಣೆ ಮಾಡಲು ಒತ್ತಾಯಿಸುತ್ತಿದ್ದು, ಬಾರಿ ಅದ್ದೂರಿಯಾಗಿ ಆಚರಿಸುತ್ತಿದ್ದು, ಉತ್ಸವಕ್ಕೆ ಶಾಸಕರು, ಸಂಸದರು ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು, ಮಾಜಿ ಶಾಸಕರು ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಲಿದ್ದಾರೆ. ನಿಡಗಲ್ಲು ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ಆಶ್ರಮದಿಂದ ಗ್ರಾಮದ ಪ್ರಮುಖ ರಾಜ ಬೀದಿಯಲ್ಲಿ ಮೆರವಣಿಗೆಯೊಂದಿಗೆ ಸಾಗಿ ವಿವಿಧ ಕಲಾತಂಡಗಳೊಂದಿಗೆ ವಾದ್ಯ ಮೇಳಗಳೊಂದಿಗೆ ಉತ್ಸವದ ಮೆರವಣಿಗೆ ನಡೆಯುತ್ತದೆ ಎಂದರು.

ಗಿರಿಜಮ್ಮ ಶಿವಣ್ಣ ,ಕರವೇ ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದ್ದಲದ ನಡುವೆ, ಚರ್ಚೆಯೇ ಇಲ್ಲದೆ ದ್ವೇಷ ಭಾಷಣ ತಡೆ ಮಸೂದೆ ಪಾಸ್‌
ನಗರದ 75 ಜಂಕ್ಷನ್‌ ಅಭಿವೃದ್ಧಿಗೆ ಗ್ರಹಣ!