ಆನಂದಪುರ: ಮಾಜಿ ಸಚಿವ ಹರತಾಳು ಹಾಲಪ್ಪ ಅವರ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಗುವುದು ಎಂದು ಮಾಜಿ ಜಿಪಂ ಸದಸ್ಯ ರತ್ನಾಕರ ಹೊನಗೋಡ್ ತಿಳಿಸಿದರು.
ಆದ್ದರಿಂದ ಆನಂದಪುರ ಮಹಾಶಕ್ತಿ ಕೇಂದ್ರ ಹಾಗೂ ಕೋಟೆ ಕೊಪ್ಪ ಮಹಾಶಕ್ತಿ ಕೇಂದ್ರ ಇವರ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಸ್ಥಳೀಯ ಲಕ್ಷ್ಮಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಹೊಸನಗರ ತಾಲೂಕಿನ ಮೂಲೆ ಗದ್ದೆ ಮಠ, ರಾಮಚಂದ್ರಪುರ ಮಠ, ತೀರ್ಥಹಳ್ಳಿ ತಾಲೂಕಿನ ಗರ್ತಿ ಕೆರೆ ಮಠದ ಗೋಶಾಲೆಗಳಿಗೆ ಮೇವನ್ನು (ಹುಲ್ಲು) ನೀಡಲಾಗುವುದು. ಹಾಗೆ ಕ್ಷೇತ್ರದ ಅನೇಕ ಭಾಗಗಳಲ್ಲಿ ರಕ್ತದಾನ ಶಿಬಿರವನ್ನು ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಆನಂದಪುರ ಗ್ರಾಪಂ ಅಧ್ಯಕ್ಷ ಕೆ.ಗುರುರಾಜ್, ಉಪಾಧ್ಯಕ್ಷೆ ರೂಪಕಲಾ ನಾಗರಾಜ್, ಆನಂದಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಾಂತಪ್ಪ ಗೌಡ, ಕೋಟೆ ಕೊಪ್ಪ ಮಹಾಶಕ್ತಿ ಕೇಂದ್ರದ ಶ್ರೀಧರ ಸಂಪಳ್ಳಿ, ಮಾಮ್ಕೋಸ್ ನಿರ್ದೇಶಕ ಭರ್ಮಪ್ಪ, ಗೌತಮ್ ಪುರ ಗ್ರಾಪಂ ಸದಸ್ಯ ಪರಮೇಶಿ ಕಣ್ಣೂರ್, ದೇವು ಬೀಸನ ಗದ್ದೆ ಉಪಸ್ಥಿತರಿದ್ದರು.