ನಾಳೆ ಶಿವರಣ ಮೇದಾರ ಕೇತಯ್ಯನವರ ಜಯಂತ್ಯುತ್ಸವ

KannadaprabhaNewsNetwork |  
Published : Nov 23, 2026, 01:15 AM IST
ಸುರಪುರ ನಗರದ ತಾಲೂಕು ಪತ್ರಕರ್ತರ ಭವದಲ್ಲಿ ಭಾನುವಾರ ಶಿವಶರಣ ಮೇದಾರ ಕೇತಯ್ಯನವರ ೮೯೬ನೇ ಜಯಂತ್ಯೋತ್ಸವದ ಆಮಂತ್ರಣ ಪತ್ರಿಕೆಯನ್ನು ಸಮುದಾಯದ ಮುಖಂಡರು ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಸತ್ಯಶುದ್ಧ ಕಾಯಕದ ಮೂಲಕ ಬಸವಾದಿ ಶರಣರ ಮೆಚ್ಚುಗೆಗೆ ಪಾತ್ರರಾದ 12ನೇ ಶತಮಾನದ ಶಿವಶರಣ ಮೇದಾರ ಕೇತಯ್ಯನವರ ೮೯೬ನೇ ಜಯಂತ್ಯೋತ್ಸ ನ.24 ರಂದು ನಗರದ ಗರುಡಾದ್ರಿ ಕಲಾಮಂದಿರದಲ್ಲಿ ವಿಜೃಂಭಣೆಯಿಂದ ಆಚರಿಸಲು ಶ್ರೀ ಗುರು ಮೇದಾರ ಕೇತೇಶ್ವರ ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ಸೇವಾ ಸಂಘ ವತಿಯಿಂದ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಸಮುದಾಯದ ಮುಖಂಡರು ತಿಳಿಸಿದರು.

-------------ಕನ್ನಡಪ್ರಭ ವಾರ್ತೆ ಸುರಪುರ

ಸತ್ಯಶುದ್ಧ ಕಾಯಕದ ಮೂಲಕ ಬಸವಾದಿ ಶರಣರ ಮೆಚ್ಚುಗೆಗೆ ಪಾತ್ರರಾದ 12ನೇ ಶತಮಾನದ ಶಿವಶರಣ ಮೇದಾರ ಕೇತಯ್ಯನವರ ೮೯೬ನೇ ಜಯಂತ್ಯೋತ್ಸ ನ.24 ರಂದು ನಗರದ ಗರುಡಾದ್ರಿ ಕಲಾಮಂದಿರದಲ್ಲಿ ವಿಜೃಂಭಣೆಯಿಂದ ಆಚರಿಸಲು ಶ್ರೀ ಗುರು ಮೇದಾರ ಕೇತೇಶ್ವರ ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ಸೇವಾ ಸಂಘ ವತಿಯಿಂದ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಸಮುದಾಯದ ಮುಖಂಡರು ತಿಳಿಸಿದರು.

ನಗರದ ತಾಲೂಕು ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೇದಾರ ಸಮುದಾಯದ ಮುಖಂಡರು, ಅಂದು ಬೆಳಗ್ಗೆ 9ಕ್ಕೆ ಮೇದಾಗಲ್ಲಿಯಲ್ಲಿ ಕೇತಯ್ಯನವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದ್ದು, ಶಾಸಕ ರಾಜಾ ವೇಣುಗೋಪಾಲ ನಾಯಕ ಮೆರವಣಿಗೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 12ಕ್ಕೆ ಗರುಡಾದ್ರಿ ಕಲಾಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಚಿತ್ರದುರ್ಗದ ಮೇದಾರ ಗುರುಪೀಠ ಪೂಜ್ಯ ಶ್ರೀ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಸುರಪುರದ ಬಲವಂತ ಬಹಾದ್ದೂರ ಸಂಸ್ಥಾನದ ಅರಸ ಡಾ.ರಾಜಾ ಕೃಷ್ಣಪ್ಪನಾಯಕ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಸಚಿವ ನರಸಿಂಹನಾಯಕ (ರಾಜೂಗೌಡ) ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ತಾಲೂಕು ಮೇದಾರ ಸಮಾಜದ ಅಧ್ಯಕ್ಷ ರಾಘವೇಂದ್ರ ಎಂ. ಪೊಲೀಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದರು.

ಜಿ.ಪಂ. ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ), ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಮಾಜಿ ಅಧ್ಯಕ್ಷ ರಾಜಾ ಮುಕುಂದ ನಾಯಕ, ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಅರವಿಂದ ಕುಮಾರ, ಕೆವೈಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠ್ಠಲ್ ವಿ. ಯಾದವ, ಮಾಜಿ ನಗರಸಭೆ ಸದಸ್ಯ ಸೋಮನಾಥ ಡೊಣ್ಣೆಗೇರಾ, ಬಿಜೆಪಿ ಯುವ ಮುಖಂಡ ಶಂಕರ ನಾಯಕ, ಕೆಂಭಾವಿ ಸ.ಪ್ರ.ದ. ಕಾಲೇಜಿನ ಪ್ರಾಂಶುಪಾಲ ಡಾ. ನಾಗಪ್ಪ ಚವಲಕರ್, ಸರೋಜಾ ಕೊಡೇಕಲ್, ಶರಣಗೌಡ ಪಾಟೀಲ, ಪರಶುರಾಮ ಪೊಲೀಸ್, ಪ್ರಕಾಶ ಪಾಟೀಲ, ಎಂ.ವಿ.ಭವಾನಿ ಬಾಳೆಹೊನ್ನೂರು, ಈರಪ್ಪ ಪಾನಪಟ್ಟಿ ಅತಿಥಿಗಳಾಗಿ ಭಾಗವಹಿಸುವರು.

ವಿವಿಧ ಇಲಾಖೆಗಳ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತೀರುವ ಸಮಾಜದ ಸುರೇಶ ಚವಲಕರ್, ಅಂಬ್ರೇಶ, ಆನಂದ ಬಿ. ಕಳ್ಳಿಮನಿ, ಬಿ.ಜಿ.ಮುಂಡರಗಿ, ರಾಘವೇಂದ್ರ ವಿ. ಕಳ್ಳಿಮನಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ೫೦೦ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ವಕೀಲ ನಾಗಪ್ಪ ಚವಲಕರ್ ಹಾಗೂ ಪ್ರಾಂಶುಪಾಲ ನಾಗಪ್ಪ ಚವಲಕರ್ ಅವರು ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ಶರಣಗೌಡ ಪಾಟೀಲ, ರಾಘವೇಂದ್ರ ಪೊಲೀಸ್, ಪರಶುರಾಮ ಪೊಲೀಸ್, ವಕೀಲ ಶ್ರೀನಿವಾಸ ಚಿನ್ನೂರು, ಗೋಪಾಲ ಚವಲಕರ್ ಗುತ್ತೇದಾರ, ಶಿವಪ್ಪ ಚವಲಕರ್, ಹಣಮಂತ ಕಳ್ಳಿಮನಿ, ಪರಶುರಾಮ ಚವಲಕರ್, ವೆಂಕಟೇಶ ಕಳ್ಳಿಮನಿ, ಯಂಕಪ್ಪ ಕುದರಿಮನಿ, ಪರಶುರಾಮ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

---ಫೋಟೊ-----

22ವೈಡಿಆರ್‌4 :

ಸುರಪುರ ನಗರದ ತಾಲೂಕು ಪತ್ರಕರ್ತರ ಭವದಲ್ಲಿ ಭಾನುವಾರ ಶಿವಶರಣ ಮೇದಾರ ಕೇತಯ್ಯನವರ ೮೯೬ನೇ ಜಯಂತ್ಯೋತ್ಸವದ ಆಮಂತ್ರಣ ಪತ್ರಿಕೆಯನ್ನು ಸಮುದಾಯದ ಮುಖಂಡರು ಬಿಡುಗಡೆಗೊಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಾರಾಷ್ಟ್ರೀಯ ಸಮ್ಮೇಳನ ಯಶಸ್ವಿ
ಸರ್ಕಾರದ ಅನುದಾನದ ಜೊತೆಗೆ ದಾನಿಗಳ ನೆರವು ಪಡೆಯಿರಿ: ವಿಜಯ ಮಾನೆ