ನಾಳೆ ದೇವರುಗಳ ಪುನಃ ಪ್ರಾಣ ಪ್ರತಿಷ್ಟಾಪನೆ: ಸಂಪನ್ನ ಹೇಳಿಕೆ

KannadaprabhaNewsNetwork |  
Published : Jan 18, 2025, 12:46 AM IST
17ಕೆಡಿವಿಜಿ11-ದಾವಣಗೆರೆಯಲ್ಲಿ ಶುಕ್ರವಾರ ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯ ಸಂಪನ್ನ ವಿ.ಮುತಾಲಿಕ್‌, ಮಾಗಾನಹಳ್ಳಿ ಬಿ.ಕೆ.ಪರಶುರಾಮ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ತಾಲೂಕಿನ ಮಾಳಗೊಂಡನಹಳ್ಳಿ (ಮಾಗನಹಳ್ಳಿ) ಗ್ರಾಮದ ಪುರಾತನ, ಐತಿಹಾಸಿಕ ಹಿನ್ನೆಲೆಯ ಶ್ರೀ ವೆಂಕಟೇಶ್ವರ ಸ್ವಾಮಿ, ಶ್ರೀ ಕೋಟೆ ಆಂಜನೇಯ ಸ್ವಾಮಿ, ಶ್ರೀ ಬೀರಲಿಂಗೇಶ್ವರ ದೇವಸ್ಥಾನಗಳಲ್ಲಿ ಜ.19ರಂದು ಪುನಃ ಪ್ರಾಣ ಪ್ರತಿಷ್ಟಾಪನೆ ಮಹೋತ್ಸವವನ್ನು ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಬಾಪೂಜಿ ವಿದ್ಯಾಸಂಸ್ಥೆ ನಿರ್ದೇಶಕ ಸಂಪನ್ನ ವಿ.ಮುತಾಲಿಕ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಶ್ರೀ ವೆಂಕಟೇಶ್ವರ, ಆಂಜನೇಯ, ಬೀರಲಿಂಗೇಶ್ವರ ದೇವರ ಕಾರ್ಯಕ್ರಮ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ತಾಲೂಕಿನ ಮಾಳಗೊಂಡನಹಳ್ಳಿ (ಮಾಗನಹಳ್ಳಿ) ಗ್ರಾಮದ ಪುರಾತನ, ಐತಿಹಾಸಿಕ ಹಿನ್ನೆಲೆಯ ಶ್ರೀ ವೆಂಕಟೇಶ್ವರ ಸ್ವಾಮಿ, ಶ್ರೀ ಕೋಟೆ ಆಂಜನೇಯ ಸ್ವಾಮಿ, ಶ್ರೀ ಬೀರಲಿಂಗೇಶ್ವರ ದೇವಸ್ಥಾನಗಳಲ್ಲಿ ಜ.19ರಂದು ಪುನಃ ಪ್ರಾಣ ಪ್ರತಿಷ್ಟಾಪನೆ ಮಹೋತ್ಸವವನ್ನು ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಬಾಪೂಜಿ ವಿದ್ಯಾಸಂಸ್ಥೆ ನಿರ್ದೇಶಕ ಸಂಪನ್ನ ವಿ.ಮುತಾಲಿಕ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಸುಕಿನಿಂದಲೇ ಶ್ರೀ ವೆಂಕಟೇಶ್ವರ ಸ್ವಾಮಿ, ಶ್ರೀ ಕೋಟೆ ಆಂಜನೇಯ ಪುನಃ ಪ್ರಾಣ ಪ್ರತಿಷ್ಟಾಪನೆ, ಕಳಸಾರೋಹಣ ಕಾರ್ಯವು ಶ್ರೀ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರ ಸಾನಿಧ್ಯದಲ್ಲಿ ನಡೆಯಲಿದೆ. ಶ್ರೀ ಬೀರಲಿಂಗೇಶ್ವರ ಸ್ವಾಮಿ ಮೂರ್ತಿಯ ಪ್ರಾಣ ಪ್ರತಿಷ್ಟಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮ ಕಾಗಿನೆಲೆಯ ಶ್ರೀ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯಲಿದೆ ಎಂದರು.

ಅನಂತರ ಬೆಳಗ್ಗೆ 10.30ಕ್ಕೆ ಉಭಯ ಶ್ರೀಗಳ ಸಾನಿಧ್ಯದ ವೇದಿಕೆ ಕಾರ್ಯಕ್ರಮದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ, ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ, ಜಿಪಂ ಸಿಇಒ ಸುರೇಶ ಇಟ್ನಾಳ್ ಪಾಲ್ಗೊಳ್ಳಲಿದ್ದಾರೆ. ಗ್ರಾಪಂ ಮಾಜಿ ಅಧ್ಯಕ್ಷ ಮಾಗಾನಹಳ್ಳಿ ಬಿ.ಕೆ. ಪರಶುರಾಮ ಅಧ್ಯಕ್ಷತೆ ವಹಿಸುವರು ಎಂದರು.

ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಮುದೇಗೌಡರ ಗಿರೀಶ, ಜಿಪಂ ಮಾಜಿ ಸದಸ್ಯ ಕಕ್ಕರಗೊಳ್ಳ ಕೆ.ಜಿ.ಬಸವನಗೌಡ, ಮೇಯರ್ ಕೆ.ಚಮನ್ ಸಾಬ್‌, ಉಪ ಮೇಯರ್ ಸೋಗಿ ಶಾಂತಕುಮಾರ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ನಿರ್ದೇಶಕ ವೈ.ರಂಗಪ್ಪ, ಸಂಪನ್ನ ವಿ.ಮುತಾಲಿಕ್, ರೇಣುಕಮ್ಮ ಕರಿಬಸಪ್ಪ, ಬಿ.ಪ್ರಭು, ರಾಘವೇಂದ್ರ ನಾಯ್ಕ, ಟಿ.ಅಂಜಿಬಾಬು, ಮೇಕಾ ಮುರಳಿಕೃಷ್ಣ, ವಿ.ಸತ್ಯನಾರಾಯಣ, ಕರೇಗೌಡರ ಹನುಮಂತಪ್ಪ, ಕೆ.ಜಿ.ಉಮೇಶ ದೊಡ್ಡಬಾತಿ, ಅನೇಕ ಗಣ್ಯರು ಭಾಗವಹಿಸುವರು. ಭಕ್ತರು ಪಾಲ್ಗೊಳ್ಳಲು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಸಂಪನ್ನ ಮುತಾಲಿಕ್ ಮನವಿ ಮಾಡಿದರು.

ಗ್ರಾಮದ ಹಿರಿಯ ಮುಖಂಡ ಎ.ಎನ್. ಮಾಧ್ವ ಪ್ರಸಾದ ಮಾತನಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಮಾಗಾನಹಳ್ಳಿ ಬಿ.ಕೆ. ಪರಶುರಾಮ, ಎ.ಬಿ.ಪ್ರಭಾಕರ, ಗ್ರಾಪಂ ಪಿಡಿಒ ಚಂದನ್‌ ಕುಮಾರ, ಮಂಜುನಾಥ, ಪುಟ್ಟರಾಜ ಇತರರು ಇದ್ದರು.

- - - -17ಕೆಡಿವಿಜಿ11.ಜೆಪಿಜಿ:

ದಾವಣಗೆರೆಯಲ್ಲಿ ಶುಕ್ರವಾರ ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯ ಸಂಪನ್ನ ವಿ.ಮುತಾಲಿಕ್‌, ಮಾಗಾನಹಳ್ಳಿ ಬಿ.ಕೆ.ಪರಶುರಾಮ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV

Recommended Stories

ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ
ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ