ನಾಳೆ ಮೇಸ್ತ್ರಿಗಳಿಗೆ ಗೌರವ, ವಿದ್ಯಾರ್ಥಿಗಳಿಗೆ ಪುರಸ್ಕಾರ

KannadaprabhaNewsNetwork |  
Published : Mar 22, 2025, 02:05 AM IST
20ಕೆಡಿವಿಜಿ2-ದಾವಣಗೆರೆಯಲ್ಲಿ ಗುರುವಾರ ಕಾವೇರಿ ಮಾತಾ ಫ್ಲಂಬರ್ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಡಿ.ಶೆಟ್ಟರ್, ಅಧ್ಯಕ್ಷ ಎಸ್.ಬಿ.ರುದ್ರೇಶ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಕಾವೇರಿ ಮಾತಾ ಫ್ಲಂಬರ್ ಕಾರ್ಮಿಕರ ಸಂಘದಿಂದ ವಿಶ್ವ ಫ್ಲಂಬರ್ ದಿನಾಚರಣೆ, ಸಂಘದ 13ನೇ ವಾರ್ಷಿಕೋತ್ಸವ ಹಾಗೂ ವಿಶ್ವ ಜಲ ದಿನಾಚರಣೆ ಅಂಗವಾಗಿ 60 ವರ್ಷ ಪೂರೈಸಿದ ಹಿರಿಯ ಫ್ಲಂಬರ್‌ ಮೇಸ್ತ್ರಿಗಳಿಗೆ ಗೌರವ ಪುರಸ್ಕಾರ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಮಾ.23ರಂದು ನಗರದ ಗಡಿಯಾರ ಕಂಬ ಸಮೀಪದ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಡಿ. ಶೆಟ್ಟರ್ ಹೇಳಿದ್ದಾರೆ.

- ಜಿಲ್ಲಾ ಎಸ್‌ಪಿ ಅವರಿಂದ ಬೈಕ್‌ ರ್ಯಾಲಿಗೆ ಚಾಲನೆ: ಶಿವಕುಮಾರ ಶೆಟ್ಟರ್‌ ಮಾಹಿತಿ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾವೇರಿ ಮಾತಾ ಫ್ಲಂಬರ್ ಕಾರ್ಮಿಕರ ಸಂಘದಿಂದ ವಿಶ್ವ ಫ್ಲಂಬರ್ ದಿನಾಚರಣೆ, ಸಂಘದ 13ನೇ ವಾರ್ಷಿಕೋತ್ಸವ ಹಾಗೂ ವಿಶ್ವ ಜಲ ದಿನಾಚರಣೆ ಅಂಗವಾಗಿ 60 ವರ್ಷ ಪೂರೈಸಿದ ಹಿರಿಯ ಫ್ಲಂಬರ್‌ ಮೇಸ್ತ್ರಿಗಳಿಗೆ ಗೌರವ ಪುರಸ್ಕಾರ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಮಾ.23ರಂದು ನಗರದ ಗಡಿಯಾರ ಕಂಬ ಸಮೀಪದ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಡಿ. ಶೆಟ್ಟರ್ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 8 ಗಂಟೆಗೆ ಶ್ರೀ ಜಯದೇವ ವೃತ್ತದಿಂದ ಗಡಿಯಾರ ಕಂಬದವರೆಗೆ ಬೈಕ್ ರ್ಯಾಲಿ ನಡೆಯಲಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಚಾಲನೆ ನೀಡುವರು. ರೇಣುಕಾ ಸಾಂಸ್ಕೃತಿಕ ಸಂಘ ಅಧ್ಯಕ್ಷ ದೇವರಮನೆ ಶಿವರಾಜ ಇತರರು ಭಾಗವಹಿಸುವರು ಎಂದರು.

ಬೆಳಗ್ಗೆ 10.30ಕ್ಕೆ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲೆಯಲ್ಲಿ ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಮಾರಂಭ ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷ ಬಿ.ರುದ್ರೇಶ ಅಧ್ಯಕ್ಷತೆ ವಹಿಸುವರು. ಪ್ರಧಾನ ಕಾರ್ಯದರ್ಶಿ ಶಿವಕುಮಾರ ಡಿ. ಶೆಟ್ಟರ್, ಉಪಾಧ್ಯಕ್ಷ ಎಸ್.ಎಂ. ಸಿದ್ದಲಿಂಗಪ್ಪ ಕಾರ್ಯಕ್ರಮದ ನೇತೃತ್ವ ವಹಿಸುವರು ಎಂದರು.

ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಮಾಜಿ ಅಧ್ಯಕ್ಷ ಎಂ.ಮಂಜುನಾಥ, ಶ್ರೀಮದ್ ವೀರಶೈ‍ವ ಸದ್ಭೋದನಾ ಸಂಸ್ಥೆ ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ, ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟು ಜೆ.ಎನ್.ಶ್ರೀನಿವಾಸ, ಕಟ್ಟಡ ಕಟ್ಟುವ, ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಆವರಗೆರೆ ಎಚ್‌.ಜಿ. ಉಮೇಶ, ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಆವರಗೆರೆ ಚಂದ್ರು, ಎಂಜಿನಿಯರ್ಸ್ ಅಸೋಸಿಯೇಷನ್‌ ಅಧ್ಯಕ್ಷ ದೇವೇಂದ್ರಪ್ಪ, ವಿ.ಎಂ.ಕರಿಬಸಯ್ಯ, ಎಸ್.ಕೆ.ಶ್ರೀಧರ, ಪಿ.ಎಚ್. ವೇಣುಗೋಪಾಲ, ಅಂದನೂರು ಅಕ್ಷಯ್, ಎಂ.ಎಸ್. ಮಾರುತಿ ಶೆಟ್ಟಿ, ಎಂ.ಜಿ.ಸಾಗರ್, ಕುಂಬಾರ ಶಿವಪ್ರಸಾದ ಇತರರು ಭಾಗವಹಿಸುವರು ಎಂದು ತಿಳಿಸಿದರು.

ಪಾಲಿಕೆ ಮಾಜಿ ಸದಸ್ಯ ಶಿವನಹಳ್ಳಿ ರಮೇಶ, ಕಾಸಲ್ ಪ್ರಕಾಶ,‌ ಸೋಮುಕೃಷ್ಣ,‌ ಎಸ್.ಎಸ್. ರಮೇಶ, ಆಕಾಶ ಬಾದಾಮಿ, ಆರ್.ಮಂಜುನಾಥ, ಅಂಬರೀಶ, ವೈ.ಜೆ. ಪವನಕುಮಾರ, ರಮೇಶ, ಮಹೇಶ ಇತರರು ಆಗಮಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಎಸ್.ಬಿ.ರುದ್ರೇಶ, ಎಸ್.ಎಂ.ಸಿದ್ದಲಿಂಗಪ್ಪ, ಕೆ.ಜಿ.ಡಿ.ಬಸವರಾಜ, ಎಸ್.ಹೊಳೆಬಸಪ್ಪ, ಎಸ್.ಶರಣಪ್ಪ, ಅಣ್ಣಪ್ಪ, ಎಚ್.ರಂಗಸ್ವಾಮಿ, ಎಸ್.ಚಂದ್ರಶೇಖರ, ವೀರೇಶ ಮುತ್ತಿಗೆ, ಎಚ್. ಚಂದ್ರಶೇಖರ ಮೀಸೆ ಇತರರು ಇದ್ದರು.

- - -

ಕೋಟ್‌ ದಾವಣಗೆರೆ ನಗರದಲ್ಲಿರುವ ಫ್ಲಂಬರ್‌ಗಳು ಕಾವೇರಿ ಮಾತಾ ಫ್ಲಂಬರ್ ಕಾರ್ಮಿಕರ ಸಂಘದಿಂದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪಡೆಯಬೇಕು. ಗುರುತಿನ ಚೀಟಿ ಇದ್ದರೆ ಸರ್ಕಾರದ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತದೆ. ನೀರು ನಮ್ಮೆಲ್ಲರ ಜೀವನಾಡಿ, ನೀರು ಉಳಿಸುವುದರಿಂದ ಜನ- ಜಾನುವಾರುಗಳ ಜೀವ ಉಳಿಸಿದಂತೆ, ನೀರನ್ನು ವ್ಯರ್ಥ ಮಾಡದಂತೆ ಬಳಕೆ ಮಾಡಬೇಕು

- ಎಸ್.ಬಿ.ರುದ್ರೇಶ, ಅಧ್ಯಕ್ಷ

- - -

-20ಕೆಡಿವಿಜಿ2.ಜೆಪಿಜಿ:

ದಾವಣಗೆರೆಯಲ್ಲಿ ಕಾವೇರಿ ಮಾತಾ ಫ್ಲಂಬರ್ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಡಿ.ಶೆಟ್ಟರ್, ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಅಧ್ಯಕ್ಷ ಎಸ್.ಬಿ.ರುದ್ರೇಶ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಗರಿಕ ಬಂದೂಕು ತರಬೇತಿ ನಿರಂತರವಾಗಬೇಕು
ನೈಸರ್ಗಿಕ ಕೃಷಿಯಲ್ಲಿ ವೆಚ್ಚ ಇಳಿಕೆ, ಮಣ್ಣಿನ ಆರೋಗ್ಯ ಏರಿಕೆ: ನಿತ್ಯಾನಂದ ನಾಯಕ್