ಕನ್ನಡಪ್ರಭ ವಾರ್ತೆ ಕೊಳ್ಳೇಗಾಲರೈತರ ಸಮಸ್ಯೆಗಳಿಗೆ ಹಾಗೂ ರೈತರ ಬೆಳೆ ಲೊಕ್ಕನಹಳ್ಳಿ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಹಾಳಾಗುತ್ತಿದ್ದು ಈಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮತ್ತು ಜಿಲ್ಲಾಡಳಿತ, ಅರಣ್ಯ ಇಲಾಖೆ ಕ್ರಮವಹಿಸುವಲ್ಲಿ ಮೆಧು ದೋರಣೆ ತಾಳಿರುವ ಹಿನ್ನೆಲೆ ಈ ಬೆಳವಣಿಗೆ ಖಂಡಿಸಿ ರೈತ ಸಂಘ ನಾಳೆಮಹದೇಶ್ವರ ಬೆಟ್ಟದಲ್ಲಿ ನಡೆಯುವ ಗಡಿನಾಡ ಉತ್ಸವಕ್ಕೆ ಅಡ್ಡಿಪಡಿಸಲಿದೆ, ಉತ್ಸವ ನಡೆಯಲು ಬಿಡಲ್ಲ ಎಂದು ರೈತ ಸಂಘ ಅಡ್ಡಿಪಡಿಸುತ್ತದೆ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಹೇಳಿದರು
ಕೊಳ್ಳೇಗಾಲ ಪಟ್ಟಣದ ಮುಡಿಗುಂಡನಲ್ಲಿ ಹೆದ್ದಾರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಲೊಕ್ಕನಹಳ್ಳಿ ಭಾಗದ ಗ್ರಾಮದ ಸುತ್ತಮುತ್ತಲು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ರೈತರ ಬೇಳೆ ಕೈಗೆ ಸಿಗದಾಗಿದೆ. ಈ ವಿಚಾರದಲ್ಲಿ ಡಿಸಿಎಫ್ ಸಂತೋಷ್ ಕುಮಾರ್ ರೈತರ ಸಮಸ್ಯೆಗೆ ಸ್ಪಂದಿಸದೆ ಉದ್ದಟವಾಗಿ ವರ್ತಿಸುತ್ತಿದ್ದಾರೆ, ಇದನ್ನ ಖಂಡಿಸಿ ರೈತ ಸಂಘ ನಿರಂತರ ಪ್ರತಿಭಟನೆ ನಡೆಸುತ್ತಿದ್ದರೂ ಸಹಾ ಮೆಧು ದೋರಣೆ ತಾಳಿದ್ದಾರೆ. ಜಿಲ್ಲಾಡಳಿತ ರೈತರ ಸಮಸ್ಯೆಗೆ ನಿರ್ಲಕ್ಷ್ಯತಾಳಿದೆ. ಇದಕ್ಕೆ ಸಂಬಂಧಿಸಿದ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಶಾಸಕರು ಸಹಾ ರೈತರ ಸಮಸ್ಯೆಗೆ ಧ್ವನಿಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ನಾಳೆ ಯಾವುದೆ ಕಾರಣಕ್ಕೂ ಗಡಿನಾಡ ಉತ್ಸವ ನಡೆಯಲು ಬಿಡಲ್ಲ ಎಂದು ಎಚ್ಚರಿಸಿದರು.ಪ್ರತಿಭಟನೆ ವೇಳೆ ರೈತರು ಸರ್ಕಾರ ಹಾಗೂ ಜಿಲ್ಲಾಡಳಿತ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಹೆದ್ದಾರಿ ತಡೆ ಬಳಿಕ ಸರ್ಕಾರಿ ಸಾರಿಗೆ ಡಿಪೋಗೆ ತೆರಳಿ ಮುಳ್ಳೂರು, ಕಲಿಯೂರು ಮಾರ್ಗವಾಗಿ ಮೈಸೂರು ಕಡೆಗೆ ಬಸ್ ವ್ಯವಸ್ಥೆ ಮಾಡಿ ಮಕ್ಕಳ ವಿದ್ಯಾಭ್ಯಾಸ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು.ಈ ವೇಳೆ ರೈತ ಸಂಘದ ಮುಳ್ಳೂರು ವಿರೂಪಾಕ್ಷ, ಕುಣಗಳ್ಳಿ ಶಂಕರ, ಮುಳ್ಳೂರು ಪವನ್, ಬಾನು ಹೊನ್ನೂರು, ನಂಜುಂಡಸ್ವಾಮಿ, ಮುಳ್ಳೂರು ಸೋಮಣ್ಣ, ಬಸವಣ್ಣ, ಮಾದಪ್ಪ, ದೀಪು, ವೀರಭದ್ರಸ್ವಾಮಿ ಇದ್ದರು.