ನಾಳೆ ದಾವಣಗೆರೆ ಜನರ ನಡಿಗೆ ಧರ್ಮಸ್ಥಳದ ಕಡೆಗೆ

KannadaprabhaNewsNetwork |  
Published : Sep 03, 2025, 01:00 AM IST
2ಕೆಡಿವಿಜಿ2-ದಾವಣಗೆರೆಯಲ್ಲಿ ಮಂಗಳವಾರ ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಮಾಜಿ ಉಪ ಮೇಯರ್ ಸೋಗಿ ಶಾಂತಕುಮಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಶ್ರೀಕ್ಷೇತ್ರ ಧರ್ಮಸ್ಥಳ ವಿರುದ್ಧ ನಡೆದ ಷಡ್ಯಂತ್ರ ಖಂಡಿಸಿ ಸೆ.4ರಂದು ದಾವಣಗೆರೆಯಿಂದ ಸುಮಾರು 2 ಸಾವಿರಕ್ಕೂ ಅಧಿಕ ಭಕ್ತಾದಿಗಳು ಶ್ರೀಕ್ಷೇತ್ರ ಧರ್ಮಸ್ಥಳದ ಕಡೆಗೆ ಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಭಕ್ತ ಮಂಡಳಿ ಮುಖಂಡ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳಿದ್ದಾರೆ.

- 2 ಸಾವಿರಕ್ಕೂ ಅಧಿಕ ಭಕ್ತರಿಂದ ಯಾತ್ರೆ: ದಿನೇಶ ಕೆ. ಶೆಟ್ಟಿ ಮಾಹಿತಿ । ಎಷ್ಟೇ ಜನ ಬಂದರೂ ಬಸ್‌ಗಳ ವ್ಯವಸ್ಥೆ ಭರವಸೆ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಶ್ರೀಕ್ಷೇತ್ರ ಧರ್ಮಸ್ಥಳ ವಿರುದ್ಧ ನಡೆದ ಷಡ್ಯಂತ್ರ ಖಂಡಿಸಿ ಸೆ.4ರಂದು ದಾವಣಗೆರೆಯಿಂದ ಸುಮಾರು 2 ಸಾವಿರಕ್ಕೂ ಅಧಿಕ ಭಕ್ತಾದಿಗಳು ಶ್ರೀಕ್ಷೇತ್ರ ಧರ್ಮಸ್ಥಳದ ಕಡೆಗೆ ಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಭಕ್ತ ಮಂಡಳಿ ಮುಖಂಡ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 6 ಗಂಟೆಗೆ ಶ್ರೀ ಜಯದೇವ ವೃತ್ತದಿಂದ ಯಾತ್ರೆ ಆರಂಭವಾಗಲಿದೆ. ದಾವಣಗೆರೆಯ ಶ್ರೀಕ್ಷೇತ್ರ ಧರ್ಮಸ್ಥಳದ ಸರ್ವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಬೇಕು. ಯಾತ್ರೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಯುವ ವರ್ತಕ ಜಯಪ್ರಕಾಶ ಮಾಗಿ (ಮೊ. 70221-51662) ಅಥವಾ ಮಾಜಿ ಉಪ ಮೇಯರ್ ಸೋಗಿ ಶಾಂತಕುಮಾರ (99804- 21712) ಅವರನ್ನು ಸಂರ್ಪಕಿಸಬೇಕು ಎಂದರು.

ಎಷ್ಟು ಜನರು ಯಾತ್ರೆಗೆ ಬರುತ್ತಾರೆ ಎಂಬುದನ್ನು ಆಧರಿಸಿ ಮತ್ತಷ್ಟು ವಾಹನಗಳನ್ನು ವ್ಯವಸ್ಥೆ ಮಾಡಲು ಅನುಕೂಲವಾಗಲಿದೆ. ಧರ್ಮಸ್ಥಳಕ್ಕೆ 2 ಸಾವಿರಕ್ಕೂ ಅಧಿಕ ಭಕ್ತರು ತೆರಳಲಿದ್ದಾರೆ. ಎಷ್ಟೇ ಜನ ಬಂದರೂ ಭಕ್ತ ಮಂಡಳಿಯಿಂದ ಅಗತ್ಯ ಬಸ್‌ಗಳ ವ್ಯವಸ್ಥೆ ಮಾಡಲಾಗುವುದು. ಶ್ರೀ ಕ್ಷೇತ್ರದ ವಿರುದ್ಧ ಮಾಡಿರುವ ಷಡ್ಯಂತ್ರದ ವಿರುದ್ಧ ನಮ್ಮ ಹೋರಾಟ ನಡೆಸುತ್ತಾ ಬಂದಿದ್ದೇವೆ. ಇದೀಗ ಸಮಸ್ತ ಭಕ್ತರ ಒತ್ತಾಸೆಯಂತೆ ಧರ್ಮಸ್ಥಳಕ್ಕೆ ಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ದಿನೇಶ ಶೆಟ್ಟಿ ಮಾಹಿತಿ ನೀಡಿದರು.

ಮಾಜಿ ಉಪ ಮೇಯರ್ ಸೋಗಿ ಶಾಂತಕುಮಾರ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಹಿಂದೂಗಳ ಪವಿತ್ರ, ಪುಣ್ಯಕ್ಷೇತ್ರಗಳಲ್ಲೊಂದು. ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳು ಧಾರ್ಮಿಕ ಕಾರ್ಯದ ಜೊತೆಗೆ ಲಕ್ಷಾಂತರ ಬಡವರ ಬದುಕಿಗೆ ಆಸರೆಯಾಗಿದ್ದಾರೆ. ಕ್ಷೇತ್ರದ ಹೆಸರಿನ ಸಂಸ್ಥೆಯಡಿ ರಾಜ್ಯದ ಲಕ್ಷಾಂತರ ಜನರಿಗೆ ಬದುಕಿನ ಭರವಸೆಯನ್ನು ಮೂಡಿಸಿದ್ದಾರೆ ಎಂದರು.

ಧರ್ಮಸ್ಥಳ ಕ್ಷೇತ್ರ ವಿರುದ್ಧ ನಡೆಸಿದ್ದ ಷಡ್ಯಂತ್ರ ವಿರುದ್ಧ ಸಮಸ್ತ ಭಕ್ತರೂ ರೋಸಿ ಹೋಗಿದ್ದಾರೆ. ಲಕ್ಷಾಂತರ ಕುಟುಂಬಗಳಿಗೆ ಜಾತ್ಯತೀತವಾಗಿ ಬದುಕಿಗೆ ಆಸರೆಯಾದ ಶ್ರೀಕ್ಷೇತ್ರದ ವಿರುದ್ಧವೇ ಮಸಲತ್ತು ನಡೆಸಿದ್ದವರ ಹಿಂದೆ ಯಾರಿದ್ದಾರೆ ಎಂಬುದು ಬಯಲಾಗಬೇಕು. ಈಗಾಗಲೇ ಎಸ್ಐಟಿ ತಂಡವೂ ತನಿಖೆ ಚುರುಕುಗೊಳಿಸಿದೆ. ಒಂದೊಂದೇ ಸತ್ಯಗಳೂ ಬಯಲಾಗುತ್ತಿವೆ ಎಂದು ಹೇಳಿದರು.

ಭಕ್ತರಾದ ಅಣಬೇರು ಮಂಜಣ್ಣ, ಜಯಪ್ರಕಾಶ ಮಾಗಿ, ಅಭಿಷೇಕ್ ಬೇತೂರು, ರಾಜು ಭಂಡಾರಿ, ಪದ್ಮಾ ಪ್ರಕಾಶ, ಉಳುವಯ್ಯ, ಡಿ.ಸುನಿಲಕುಮಾರ, ರಾಘವೇಂದ್ರ ಗೌಡ ಇತರರು ಇದ್ದರು.

- - -

-2ಕೆಡಿವಿಜಿ2.ಜೆಪಿಜಿ:

ದಾವಣಗೆರೆಯಲ್ಲಿ ಮಂಗಳವಾರ ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಮಾಜಿ ಉಪ ಮೇಯರ್ ಸೋಗಿ ಶಾಂತಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV

Recommended Stories

ಉತ್ಪನ್ನ ಗುಣಮಟ್ಟ ಹೆಚ್ಚಿಸಿ ರಫ್ತು ಏರಿಸಿ: ರೆಡ್ಡಿ
ಪ್ಯಾರಾ ಥ್ರೋ ಬಾಲ್: ರಾಜ್ಯ ಮಹಿಳಾ ತಂಡಕ್ಕೆ ಟ್ರೋಫಿ