ಕನ್ನಡಪ್ರಭ ವಾರ್ತೆ ಪಾಂಡವಪುರ
ದೇವಸ್ಥಾನವು ಬಹಳ ಪುರಾತನ, ಇತಿಹಾಸ ಹೊಂದಿದೆ. ಗ್ರಾಮದ ಎಲ್ಲಾ ಭಕ್ತಾದಿಗಳು, ಗ್ರಾಮದ ಮುಖಂಡರು ಸಹಕಾರದಿಂದ ಹಾಗೂ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಪರಿಶ್ರಮದಿಂದ 3 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಗ್ರಾಮಸ್ಥರು ಹಾಗೂ ಭಕ್ತಾದಿಗಳಿಂದ 2 ಕೋಟಿ ಹಾಗೂ ಮಾಜಿ ಸಚಿವ ಸಿ.ಎಸ್,ಪುಟ್ಟರಾಜು 1 ಕೋಟಿ ರು. ಸಹಾಯದಿಂದ ದೇವಸ್ಥಾನ ನಿರ್ಮಾಣಗೊಂಡಿದೆ.
ಪುನರ್ ನಿರ್ಮಿತ ದೇವಸ್ಥಾನವನ್ನು ದೊಡ್ಡದಾಗಿ ಕಟ್ಟಬೇಕು ಎಂದು ಗ್ರಾಮಸ್ಥರೆಲ್ಲ ತೀರ್ಮಾನ ಮಾಡಿ 2019ರಲ್ಲಿ ದೇವಸ್ಥಾನಕ್ಕೆ ಚಾಲನೆ ನೀಡಲಾಗಿತ್ತು. ಈಗ ಫೆ.1 ಮತ್ತು 2 ರಂದು ಲೋಕಾರ್ಪಣೆಯಾಗಲಿದೆ. ಊರ ಹೊರಗಿನಿಂದ ದೇವಸ್ಥಾನದ ವರೆಗೆ ರಸ್ತೆ ಅಭಿವೃದ್ಧಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಒತ್ತು ನೀಡಿದ್ದಾರೆ.ಜ.31ರಂದು ಹೋಮ, ಫೆ.1ರ ಬೆಳಗ್ಗೆ ದೇವತಾಕಾರ್ಯ, ಗಂಗೆಪೂಜೆ ಗೋಪೂಜೆ ಗ್ರಾಮದ ಪ್ರದಕ್ಷಿಣೆಯೊಂದಿಗೆ ಹಾಲರವಿ ಚಪ್ಪರದ ಪೂಜೆ, ಗೋಪುರಕ್ಕೆ ಕಲಶಸ್ಥಾಪನೆ ನಡೆಯಲಿದೆ. ಫೆ.2ರಂದು ಬೆಳಗ್ಗೆ ಗಣಪತಿ ಪೂಜೆ, ಕಳಸಪೂಜೆ, ದೇವರಿಗೆ ಪಂಚಾಮೃತ ಅಭಿಷೇಕ ಪುಪ್ಷ ಅಲಂಕಾರ ಮಹಾಮಂಗಳಾರತಿ ಅಶೀರ್ವಾದ ತೀರ್ಥಪ್ರಸಾದ ವಿನಿಯೋಗದ ನಂತರ ಮಧ್ಯಾಹ್ನ 12.30ಕ್ಕೆ ಅನ್ನಸಂತಪಣೆ ನಡೆಯಲಿದೆ.
ದೇವಸ್ಥಾನವನ್ನು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸುವರು. ಗರ್ಭಗುಡಿಯನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಉದ್ಘಾಟಿಸುವರು. ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭಾಗವಹಿಸಲಿದ್ದಾರೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸುವರು.
ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರು, ವಿವಿಧ ಪಕ್ಷದ ಮುಖಂಡರು, ಸಂಘಸಂಸ್ಥೆ ಅಧ್ಯಕ್ಷರುಗಳು, ಅಕ್ಕ ಪಕ್ಕ ಗ್ರಾಮಸ್ಥರು ದೇವಸ್ಥಾನದ ಸೇವಾಸಮಿತಿ ಪದಾಧಿಕಾರಿಗಳು, ಯಜಮಾನರುಗಳು ಭಾಗವಹಿಸಲಿದ್ದಾರೆ.