ಹಿಂದೂ ಜಾಗರಣ ವೇದಿಕೆಯಿಂದ ಪಂಜಿನ ಮೆರವಣಿಗೆ

KannadaprabhaNewsNetwork |  
Published : Aug 18, 2026, 02:15 AM IST
ಹಿರೇಕೆರೂರು ಹಿಂದೂ ಜಾಗರಣ ವೇದಿಕೆ ತಾಲೂಕು ಘಟಕ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜಿನ ಮೆರವಣಿಗೆಯನ್ನು ನಡೆಸಲಾಯಿತು. | Kannada Prabha

ಸಾರಾಂಶ

ಹಿಂದೂ ಜಾಗರಣ ವೇದಿಕೆ ತಾಲೂಕು ಘಟಕ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜಿನ ಮೆರವಣಿಗೆಯನ್ನು ನಡೆಸಲಾಯಿತು.

ಹಿರೇಕೆರೂರು: ಹಿಂದೂ ಜಾಗರಣ ವೇದಿಕೆ ತಾಲೂಕು ಘಟಕ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜಿನ ಮೆರವಣಿಗೆಯನ್ನು ನಡೆಸಲಾಯಿತು.

ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಮಾಜಿ ಸಚಿವ ಬಿ.ಸಿ. ಪಾಟೀಲ ಚಾಲನೆ ನೀಡಿದರು. ಪೇಟೆ ಬಸವೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಪಂಜಿನ ಮೆರವಣಿಗೆ ಚಾವಡಿ ವೃತ್ತದ ಮೂಲಕ ಸರ್ವಜ್ಞ ವೃತ್ತ ತಲುಪಿ ವಿಠ್ಠಲ ದೇವಸ್ಥಾನದಲ್ಲಿ ಸಭಾ ಕಾರ್ಯಕ್ರಮ ಪ್ರಾರಂಭವಾಯಿತು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಧಾರವಾಡ ವಿಭಾಗ ಸಂಪರ್ಕ ಪ್ರಮುಖ ಸುಧಾಕರ್ ಶೆಟ್ಟಿ ಮಾತನಾಡಿ, ಆಗಸ್ಟ್ 15ರ ಮಧ್ಯರಾತ್ರಿ ನಮಗೆ ಸ್ವಾತಂತ್ರ‍್ಯ ದೊರೆತರೆ ಆಗಸ್ಟ್ 14ರ ದಿನದಂದು ಭಾರತ ಇಬ್ಭಾಗವಾಗಿ ಅಖಂಡ ಭಾರತ ತುಂಡಾಯಿತು. ಆ ತುಂಡಾದ ಭಾರತವನ್ನು ಮತ್ತೆ ಅಖಂಡವಾಗಿ ಮಾಡುವಲ್ಲಿ ಹಿಂದೂ ಸಮಾಜ ಜಾತಿ ಭಾಷೆ ಭೇದವನ್ನು ಬಿಟ್ಟು ಟೊಂಕ ಕಟ್ಟಿ ನಿಲ್ಲಬೇಕು ಎಂದರು.ಸಭಾ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಸವರಾಜ ಸೊರಟೂರ, ಹಿಂದೂ ಜಾಗರಣ ವೇದಿಕೆ ತಾಲೂಕು ಸಂಯೋಜಕ ಚಂದ್ರಶೇಖರ್ ತೇರೆದಹಳ್ಳಿ, ಸಹ ಸಂಯೋಜಕ ಮಲ್ಲಿಕಾರ್ಜುನ ಕೋಡಿ, ಸಂಜೀವ್ ಚಿಂದಿ, ಸಾಗರ್ ಜಡೆಯಣ್ಣನವರ್ ಭೋಜೇಗೌಡ ತಾವರಗಿ, ನಂದೀಶ್ ತಿಪ್ಪಕ್ಕಳವರ, ಪುನೀತ್ ಮಡಿವಾಳ, ಮಹೇಶ್ ಡಾಂಗೆ, ಮಂಜು ಬುದ್ನಿ, ಮಂಜು ನಾಯ್ಕರ್, ಧೀರಜ್ ಕೊಲ್ಲಾಪುರ, ಶಿವಕುಮಾರ್ ಪ್ಯಾಟೆರ್, ಜಗದೀಶ್ ದೊಡ್ಡಗೌಡ್ರ, ಮಿಥುನ್ ಚಿಂದಿ, ರವಿ ಖಂಡಿಬಾಗೂರ, ಹಾಲೇಶ್ ಆರೀಕಟ್ಟ್ಳಿ, ನಾಗರಾಜ್ ಹುಲ್ಲತ್ತಿ, ಗುರು ಕಡದಕಟ್ಟಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶುದ್ಧ ನೀರು ಸೇವನೆಯಿಂದ ಉತ್ತಮ ಆರೋಗ್ಯ
ಕಾಂಗ್ರೆಸ್‌ನಿಂದ ವಂದೇ ಮಾತರಂ ಗೀತೆಗೆ ಅಗೌರವ, ಬಿಜೆಪಿ ಪ್ರತಿಭಟನೆ