ಜ.11ರಿಂದ ತೊರ್ನಹಳ್ಳಿ ರಾಸುಗಳ ಜಾತ್ರೆ: ಶಾಸಕ ಕೆ.ವೈ.ನಂಜೇಗೌಡ

KannadaprabhaNewsNetwork |  
Published : Dec 29, 2024, 01:16 AM IST
28 ಕ.ಟಿ.ಇ.ಕೆ ಚಿತ್ರ 1 : ಮಾಲೂರು ತಾಲ್ಲೂಕಿನ ತೊರ್‍ನಹಳ್ಳಿ ಗ್ರಾ.ಪಂ.ನ ತೊರ್‍ನಹಳ್ಳಿ ಗ್ರಾಮದ ಸಫಲಮ್ಮದೇವಿ ಮತ್ತು ಪ್ರಸನ್ನ ಬೀರೇಶ್ವರಸ್ವಾಮಿ ಜಾತ್ರಾ ಮಹೋತ್ಸವವು ಇತಿಹಾಸ ಪ್ರಸಿದ್ಧಿ ಪಡೆದ ಜಾತ್ರೆಯಾಗಿದ್ದು ಸುಮಾರು ವರ್ಷಗಳಿಂದ ತನ್ನದೇ ಪ್ರಾಮುಖ್ಯತೆ ಹೊಂದಿಕೊಂಡು ಜಾತ್ರೆ ನಡೆದುಕೊಂಡು ಬರುತ್ತಿದೆ ಈ ಬಾರಿಯು ಜನವರಿ 11 ರಿಂದ 20 ರವರೆಗೆ ನಡೆಸಲಾಗುತ್ತದೆ ಎಂದು ಶಾಸಕ ಕೆ.ವೈ.ನಂಜೇಗೌಡರು ತಿಳಿಸಿದರು. ಅವರು ಟೇಕಲ್‌ನ ತಮ್ಮ ಸ್ವಗ್ರಾಮ ಕೊಮ್ಮನಹಳ್ಳಿ ನಿವಾಸದಲ್ಲಿ ಮಾಹಿತಿ ನೀಡಿ ಮಾತನಾಡುತ್ತಿದ್ದರು. | Kannada Prabha

ಸಾರಾಂಶ

ತಿವರ್ಷದಂತೆ ಈ ವರ್ಷವೂ ಸಹ ಮಾಲೂರು ತಾಲೂಕಿನ ತೊರ್‍ನಹಳ್ಳಿ ಗ್ರಾಮ ವ್ಯಾಪ್ತಿಯ ಶ್ರೀ ಭೀಮೇಶ್ವರ, ಸಫಲಾಂಭದೇವಿ ರಾಸುಗಳ ಜಾತ್ರಾ ಮಹೋತ್ಸವ ಜನವರಿ 11 ರಿಂದ 20ವರೆಗೂ ನಡೆಯಲು ತಹಸೀಲ್ದಾರ್, ಪೊಲೀಸ್ ಇಲಾಖೆ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ದೇವಾಲಯ ಸಮಿತಿ, ಗ್ರಾಮಸ್ಥರು ಪೂರ್ವಭಾವಿ ಸಭೆ ಏರ್ಪಡಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.

ಟೇಕಲ್ : ತೊರ್ನಹಳ್ಳಿ ಗ್ರಾಪಂನ ತೊರ್‍ನಹಳ್ಳಿ ಗ್ರಾಮದಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಸಫಲಾಂಭದೇವಿ ಹಾಗೂ ಪ್ರಸನ್ನ ಬೀರೇಶ್ವರ ದೇವರ ರಾಸುಗಳ ಜಾತ್ರಾ ಮಹೋತ್ಸವವು ಜನವರಿ 11ರಿಂದ 20ರವರೆಗೆ ನಡೆಸಲು ತಾಲೂಕು ಆಡಳಿತ ಹಾಗೂ ಮುಜರಾಯಿ ಇಲಾಖೆಯ ಅಧಿಕಾರಿಗಳು ಪೂರ್ವಭಾವಿ ಸಭೆ ಸೇರಿ ತೀರ್ಮಾನಿಸಿದ್ದಾರೆ. ಅದರಂತೆಯೆ ಜಾತ್ರೆಗೆ ಆಗಮಿಸುವ ರಾಸುಗಳಿಗೆ ಹಾಗೂ ಜನರಿಗೆ ಅಗತ್ಯವಿರುವ ಮೂಲಭೂತ ಸೌಲತ್ತುಗಳನ್ನು ಒದಗಿಸಲು ಸೂಚಿಸಲಾಗಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು. ಟೇಕಲ್‌ನ ಕೊಮ್ಮನಹಳ್ಳಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಸಹ ಮಾಲೂರು ತಾಲೂಕಿನ ತೊರ್‍ನಹಳ್ಳಿ ಗ್ರಾಮ ವ್ಯಾಪ್ತಿಯ ಶ್ರೀ ಭೀಮೇಶ್ವರ, ಸಫಲಾಂಭದೇವಿ ರಾಸುಗಳ ಜಾತ್ರಾ ಮಹೋತ್ಸವ ಜನವರಿ 11 ರಿಂದ 20ವರೆಗೂ ನಡೆಯಲು ತಹಸೀಲ್ದಾರ್, ಪೊಲೀಸ್ ಇಲಾಖೆ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ದೇವಾಲಯ ಸಮಿತಿ, ಗ್ರಾಮಸ್ಥರು ಪೂರ್ವಭಾವಿ ಸಭೆ ಏರ್ಪಡಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ರಾಸುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಮೂಲಭೂತ ಸೌಕರ್ಯ, ಆರೋಗ್ಯ ದೃಷ್ಟಿಯಿಂದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ನಾನು ಮೊದಲೇ ತಿಳಿಸಿದ್ದು, ಅದರಂತೆಯೇ ತಾಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಹಾಗೂ ರೈತರು, ರಾಸುಗಳು ಆಗಮಿಸಲಿವೆ. ಇದಕ್ಕೆ ಎಲ್ಲಾ ಸವಲತ್ತುಗಳನ್ನು ನೀಡಲಾಗುತ್ತಿದೆ. ಜ. ೧೧ಕ್ಕೂ ಮೊದಲೇ ಜಾತ್ರೆಗೆ ರಾಸುಗಳು ಆಗಮಿಸಿದರೆ ಯಾವುದೇ ಮೂಲಭೂತ ಸವಲತ್ತುಗಳನ್ನು ಒದಗಿಸಲು ಆಗುವುದಿಲ್ಲ. ಜನರು ನಿಗದಿತ ದಿನಾಂಕದಂದು ಜಾತ್ರೆಗೆ ಆಗಮಿಸಿ ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌