ಸಾಮಾಜಿಕ ಬದುಕಿನಲ್ಲಿ ಕಟು ಅನುಭವಗಳು ಸಹಜ: ತರಳಬಾಳು ಶ್ರೀ

KannadaprabhaNewsNetwork |  
Published : Oct 11, 2026, 02:15 AM IST
ಸದಸ | Kannada Prabha

ಸಾರಾಂಶ

ಕಡೂರುಸಾಮಾಜಿಕ ಬದುಕಿನಲ್ಲಿ ತೊಡಗಿಸಿಕೊಳ್ಳುವವರಿಗೆ ಕಟು ಅನುಭವಗಳು ಸಹಜ. ಟೀಕೆ-ಟಿಪ್ಪಣಿಗಳಿಗೆ ತಲೆ ಕೆಡಿಸಿಕೊಳ್ಳದೆ ಪ್ರಾಮಾಣಿಕತೆ ಮತ್ತು ಆತ್ಮ ತೃಪ್ತಿ ಪಡುವಂತೆ ಕೆಲಸ ಮಾಡಿದರೆ ಯಶಸ್ಸು ಸಾಧ್ಯ ಎಂದು ಸಿರಿಗೆರೆ ಶ್ರೀ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಕೆ.ವಿ.ಕಾಲೊನಿಯಲ್ಲಿ ಶಿವ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಕಡೂರು

ಸಾಮಾಜಿಕ ಬದುಕಿನಲ್ಲಿ ತೊಡಗಿಸಿಕೊಳ್ಳುವವರಿಗೆ ಕಟು ಅನುಭವಗಳು ಸಹಜ. ಟೀಕೆ-ಟಿಪ್ಪಣಿಗಳಿಗೆ ತಲೆ ಕೆಡಿಸಿಕೊಳ್ಳದೆ ಪ್ರಾಮಾಣಿಕತೆ ಮತ್ತು ಆತ್ಮ ತೃಪ್ತಿ ಪಡುವಂತೆ ಕೆಲಸ ಮಾಡಿದರೆ ಯಶಸ್ಸು ಸಾಧ್ಯ ಎಂದು ಸಿರಿಗೆರೆ ಶ್ರೀ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಪಟ್ಟಣದ ಕೆ.ವಿ.ಕಾಲೊನಿಯಲ್ಲಿ ಶನಿವಾರ ಶಿವ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ, ವೇದಾವತಿ ಬಾಲಿಕಾ ಪ್ರೌಢಶಾಲೆ ಆವರಣದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ ಪರಸ್ಪರ ಸಹಕಾರವೇ ಜನರಿಗೆ ಹತ್ತಿರದ ಮಾರ್ಗ. ಎಲ್ಲಿ ಸಹಕಾರವಿದೆಯೋ ಅಲ್ಲಿ ಅಭಿವೃದ್ಧಿಯೂ ಇದೆ. ಶಿವ ಪತ್ತಿನ ಸಹಕಾರ ಸಂಘ ಕಡೂರಿನಂತಹ ತಾಲೂಕಿನಲ್ಲಿ ಜನರ ಬದುಕಿಗೆ ಭರವಸೆ ತುಂಬುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಬಸವಣ್ಣ ಹೇಳಿದಂತೆ ಆಚಾರವೇ ಸ್ವರ್ಗ ಎಂಬ ನಾಣ್ಣುಡಿಯಂತೆ ಷೇರುದಾರರು ಮತ್ತು ಠೇವಣಿದಾರರ ನಂಬಿಕೆಗೆ ಭಂಗ ಬಾರದಂತೆ ನೀವು ಮುಂದೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಬ್ಯಾಂಕಿನ ಕಟ್ಟಡದ ಸಭಾಂಗಣ ಉದ್ಘಾಟಿಸಿದ ಮುತ್ಸದ್ದಿ ರಾಜಕಾರಣಿ ಕೆ.ಬಿ.ಮಲ್ಲಿಕಾರ್ಜುನ, 15 ವರ್ಷಗಳ ಹಿಂದೆ ನಡೆದ ತರಳಬಾಳು ಹುಣ್ಣಿಮೆ ನೆನಪಲ್ಲಿ ಆರಂಭವಾದ ಶಿವ ಪತ್ತಿನ ಸಹಕಾರ ಸಂಘ ಸುಭದ್ರ ಅಡಿಪಾಯ ಹೊಂದಿದೆ. ಎಲ್ಲ ನಿರ್ದೇಶ ಕರು ಮತ್ತು ಪದಾಧಿಕಾರಿಗಳು ಸಂಘದ ಏಳಿಗೆಗೆ ನಿರಂತರ ಶ್ರಮಿಸಿ ಇದನ್ನು ಮಾದರಿ ವ್ಯಾವಹಾರಿಕ ಸಂಘವಾಗಿ ರೂಪಿಸು ತ್ತೇವೆ ಎಂಬ ಭರವಸೆ ನೀಡಿದರು. ಬ್ಯಾಂಕಿನ ಭದ್ರತಾ ಕೊಠಡಿ ಉದ್ಘಾಟಿಸಿದ ಅಪೆಕ್ಸ್‌ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಬೆಳ್ಳಿ ಪ್ರಕಾಶ್, ಸಂಘ ಸ್ವಾವಲಂಬಿಯಾಗಿ ಸ್ವಂತ ಕಟ್ಟಡ ಹೊಂದುವಲ್ಲಿ ನಿರ್ದೇಶಕ ಮಂಡಳಿ ಮತ್ತು ಶೇರುದಾರರ ಸಹಕಾರದಿಂದ ಆರೋಗ್ಯಕರ ಸ್ಥಿತಿಯಲ್ಲಿದೆ. ಸಾಲ ಪಡೆದವರು ಸಮರ್ಪಕ ಮರುಪಾವತಿ ಮಾಡಿದರೆ ಮಾತ್ರ ಸಹಕಾರ ಸಂಘ ಲಾಭ ಗಳಿಸಿ ತನ್ನ ಸದಸ್ಯರಿಗೆ ಡಿವಿಡೆಂಟ್‌ ನೀಡಲು ಸಾಧ್ಯ. ಹಲವು ಸಂದರ್ಭಗಳಲ್ಲಿ ಜವಾಬ್ದಾರಿ ಹೊತ್ತವರು ತಮಗೆ ಆಗುವ ಕಹಿ ಅನುಭವಗಳಿಂದ ಮತ್ತೊಮ್ಮೆ ಜವಾ ಬ್ದಾರಿ ಹೊರಲು ಹಿಂಜರಿಯುವ ಅನೇಕ ಸನ್ನಿವೇಶ ಉದ್ಭವಿಸುತ್ತವೆ. ಏನೇ ಆದರೂ ಶಿವ ಪತ್ತಿನ ಸಹಕಾರ ಸಂಘ ಮತ್ತಷ್ಟು ಸದೃಢಗೊಳಿಸುವ ಸಂಕಲ್ಪದೊಂದಿಗೆ ದುಡಿಯುತ್ತೇವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ.ಎನ್.ಬೊಮ್ಮಣ್ಣ, ಪ್ರೀತಿ, ವಿಶ್ವಾಸ, ಭದ್ರತೆ ಮತ್ತು ನಂಬಿಕೆ ಸಹಕಾರ ತತ್ವದ ಮೂಲ ಬೇರುಗಳಾಗಿದ್ದು 5080 ಸದಸ್ಯರ ಒಮ್ಮತದ ಸಲಹೆ-ಸಹಕಾರದಿಂದ ಸಂಘ ಜಿಲ್ಲೆಯಲ್ಲೇ ಅತ್ಯುತ್ತಮ ಸಹಕಾರ ಸಂಘವಾಗಿ ಹೊರಹೊಮ್ಮಿದೆ. ₹38 ಕೋಟಿ ಠೇವಣಿ ಹೊಂದಿ ಮತ್ತು ಅಷ್ಟೇ ಮೊತ್ತದ ಸಾಲ ವಿತರಿಸಿದೆ. ಕಳೆದ ಸಾಲಿನಲ್ಲಿ ₹150 ಕೋಟಿ ವ್ಯವಹಾರ ನಡೆಸಿ ₹96 ಲಕ್ಷ ಲಾಭ ಗಳಿಸಿ ಶೇ.10 ಡಿವಿಡೆಂಟ್‌ ಘೋಷಿಸಿದೆ. ಸಂಘದ ಈ ಬೆಳವಣಿಗೆ ಮಠದ ಪಾತ್ರ ಅಮೂಲ್ಯ. ಬೃಹನ್ಮಠ ರೈತ ಪರ ಚಿಂತನೆ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯಶಸ್ಸಿನ ಮೂಲಕ ಜನ ಸಾಮಾನ್ಯರಿಗೆ, ಪಶು ಪಕ್ಷಿಗಳಿಗೆ ನೆರವಾಗಿರುವುದು ಕೂಡಾ ಉಲ್ಲೇಖಾರ್ಹ ಎಂದು ನುಡಿದರು. ಪ್ರಾಸ್ತಾವಿಕವಾಗಿ ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಎಸ್.ವಿ.ಬಸವರಾಜಪ್ಪ, ಬ್ಯಾಂಕಿನ ಮಾಜಿ ಅಧ್ಯಕ್ಷ ಜಿ.ಟಿ.ಬಸವರಾಜು ಮಾತನಾಡಿದರು. ಸಂಘದ ಉಪಾಧ್ಯಕ್ಷರಾದ ನಂದಕುಮಾರ್, ಸಿ.ಎನ್.ಶೇಖರಪ್ಪ, ಎಂ.ಮರುಳಸಿದ್ದಪ್ಪ, ಎ.ಸಿ.ಚಂದ್ರಪ್ಪ, ಎಚ್.ಸಿ.ಕಲ್ಮರುಡಪ್ಪ, ನಿರ್ದೇಶಕರಾದ ಎಸ್.ಜಿ.ರಾಮಪ್ಪ, ಕೆ.ಎಂ.ಜಯಣ್ಣ, ಬಿ.ಎಲ್.ಚಿದಾನಂದ, ಎನ್.ಒ.ರವಿಕುಮಾರ್, ಡಿ.ಈಶ್ವರಪ್ಪ, ಆರ್.ರಮೇಶ್, ಕೆ.ಟಿ.ಮಹೇಶ್, ಗೀತಾ ಶ್ರೀನಾಥ್, ಎಲ್.ಎಸ್.ಶೈಲಜ ಇದ್ದರು. ---ಬಾಕ್ಸ್‌---

ಸಮಾಜಕ್ಕೆ ಮಾರ್ಗದರ್ಶಕರಾಗಿ: ಸ್ವಾಮೀಜಿನಮ್ಮ ಹಿರಿಯ ಗುರುಗಳು ಬಸವಣ್ಣನವರ ಹಾದಿ ಅನುಸರಿಸಿ ಸಮಾಜಕ್ಕೆ ಮಾರ್ಗದರ್ಶಕರಾಗಿ, ಶಿಕ್ಷಣವೇ ಬಡವರ ಉದ್ಧಾರದ ಅಸ್ತ್ರ ಎಂದು ಅರಿತು ಹಳ್ಳಿ-ಹಳ್ಳಿಗಳಲ್ಲಿ ಶಾಲೆಗಳ ಸ್ಥಾಪನೆ ಮೂಲಕ ಸಮಾಜ ಸಂಘಟಿಸಿ ಸರಿದಾರಿಗೆ ತರಲು ಶ್ರಮಿಸಿದರು. ಅವರ ರನ್ನು ನಾವೂ ಹಿಂಬಾಲಿಸಿದ್ದೇವೆ. ಹಣ ಮುಖ್ಯವಾದರೂ ಮನುಷ್ಯನ ಮನಸ್ಸನ್ನು ವಿಕೃತಗೊಳಿಸುವ ಗುಣ ಹೊಂದಿದೆ. ದುರಾಸೆ, ದುರ್ವ್ಯಸನ, ಹಿಂಸೆ ಮನುಷ್ಯನನ್ನು ಬಂಧಿಸುವ ಸಂಕೋಲೆಗಳಾಗಿವೆ ಎಂಬುದನ್ನು ಅರಿತು ಸಮಾಜ ಕೊಟ್ಟದ್ದನ್ನು ಅಲ್ಲಿಗೇ ಹಿಂದಿರುಗಿಸುವ ಮೂಲಕ ಅಭಿವೃದ್ಧಿ ಕಾರ್ಯದಲ್ಲಿ ಕೈ ಜೋಡಿಸಬೇಕಿದೆ.- ಡಾ,ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ತರಳಬಾಳು ಬೃಹನ್ಮಠ ಸಿರಿಗೆರೆ.ಫೋಟೋ

ಕಡೂರು ಪಟ್ಟಣದ ವೇದಾವತಿ ಶಾಲೆ ಆವರಣದಲ್ಲಿ ಶನಿವಾರ ಶಿವ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನು ಲೋಕಾರ್ಪಣೆ ಸಮಾರಂಭದಲ್ಲಿ ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಕೆ.ಬಿ.ಮಲ್ಲಿಕಾರ್ಜುನ, ಬೆಳ್ಳಿಪ್ರಕಾಶ್, ಕೆ.ಎನ್.ಬೊಮ್ಮಣ್ಣ, ಜಿ.ಟಿ.ಬಸವರಾಜ್‌ ಮೊದಲಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ಫ್ರೀಡಂ ಪಾರ್ಕ್‌, ವಿಧಾನಸೌಧ ಬಳಿ ರೈತರ ಪ್ರತಿಭಟನೆ
ಮಂತ್ರಾಲಯ ಮಠಕ್ಕೆ ತಲೆನೋವಾದ ಆನ್ಲೈನ್ ವಂಚಕರು