ಚನ್ನಪಟ್ಟಣ: ಯೋಗೇಶ್ವರ್ ಸೋತಾಗಲೂ, ಗೆದ್ದಾಗಲೂ ನಿಮ್ಮೊಂದಿಗೆ ಇರುತ್ತಾರೆ. ಆದರೆ, ಇನ್ನೊಬ್ಬರ ಬಗ್ಗೆ ಗೊತ್ತಿಲ್ಲ. ಮಧುಗಿರಿ, ರಾಮನಗರ, ಮಂಡ್ಯ ಆಯಿತು ಮುಂದೆ ಅವರು ಎಲ್ಲಿಗೆ ಟೂರಿಂಗ್ ಟಾಕೀಸ್ ಹೋಗುತ್ತಾರೋ ಗೊತ್ತಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕಂದಾಯ ಸಚಿವ ಕೃಷ್ಣ ಬೈರೇಗೌಡ ಪರೋಕ್ಷ ವಾಗ್ದಾಳಿ ನಡೆಸಿದರು.
ಅವರು ಪಾರ್ಟಿ ಬಿಟ್ಟಿರಬಹುದು. ಆದರೆ, ಚನ್ನಪಟ್ಟಣ ಜನರನ್ನು ಬಿಟ್ಟಿಲ್ಲ. ತಾಲೂಕಿನ ಹಿತಚಿಂತಕರಾಗಿ ನಿಮ್ಮ ಜತೆ ಇದ್ದಾರೆ. ಇಲ್ಲಿ ಶೋ ಕ್ಲಿಕ್ ಆಗಲಿ ಬಿಡಲಿ ನಿಮ್ಮ ಜತೆ ಇರುತ್ತಾರೆ. ನೀವು ಹಾಲು ಕೊಟ್ಟರು ವಿಷ ಕೊಟ್ಟರೂ ನಿಮ್ಮ ಜತೆಯೇ ಇರುವವರ ಬೇಕಾ ಅಥವಾ ಅನುಕೂಲಕ್ಕೆ ತಕ್ಕಂತೆ ಬರುವವರು ಬೇಕಾ ಎಂದು ಪ್ರಶ್ನಿಸಿದರು.
ಅವರು ಮೇಲಿಂದ ಬಂದವರು ಮೇಲಿನ ಲೆವೆಲ್‌ನಲ್ಲೇ ಇರುತ್ತಾರೆ. ಇನ್ನೊಬ್ಬರಿಗೆ ಅವರು ಲೀಡರ್ ಆಗುವುದು ಬಿಟ್ಟರೆ ಜನರ ಕುರಿತು ಚಿಂತೆ ಇಲ್ಲ. ನಿಮ್ಮ ಜತೆಗೆ ನಾವು ಇದ್ದೇವೆ. ನಮ್ಮ ಕಡೆಯಿಂದ ತಾಲೂಕಿಗೆ ಬೇಕಾದದ್ದು ಮಾಡುತ್ತೇವೆ. ಎಲ್ಲವನ್ನು ಯೋಚಿಸಿ ಈ ಬಾರಿಯ ಚುನಾವಣೆಯಲ್ಲಿ ಯೋಗೇಶ್ವರ್ ಬೆಂಬಲಿಸಿ ಎಂದು ಮನವಿ ಮಾಡಿದರು.ಎಲ್ಲರಿಗೂ ಗ್ಯಾರೆಂಟಿ ನೀಡಿದ್ದೇವೆ: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ರೈತರಿಗೆ ನೆರವಾಗುವ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಜಾತಿ, ಧರ್ಮ ಎನ್ನದೇ ಪಕ್ಷ ಎಂದು ಭೇದ-ಭಾವ ಮಾಡದೇ ಎಲ್ಲರಿಗೂ ಐದು ಗ್ಯಾರೆಂಟಿ ತಲುಪಿದೆ. ಗ್ಯಾರೆಂಟಿಯಿಂದ 5 ರಿಂದ 6 ಸಾವಿರ ರೂ. ಪ್ರತಿ ಬಡ ಕುಟಂಬಕ್ಕೂ ತಲುಪುತ್ತಿದೆ ಎಂದರು.
ಪೊಟೋ೫ಸಿಪಿಟಿ೧: ತಾಲೂಕಿನ ಕೋಡಂಬಳ್ಳಿ ಜಿಪಂ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿ ಯೋಗೇಶ್ವರ್ ಹಾಗೂ ಸುರೇಶ್ ಅವರನ್ನು ಹೂವಿನಹಾರ ಹಾಕಿ ಸನ್ಮಾನಿಸಲಾಯಿತು.
ಪೊಟೋ೫ಸಿಪಿಟಿ೩: ತಾಲೂಕಿನ ಕೋಡಂಬಳ್ಳಿ ಜಿಪಂ ವ್ಯಾಪ್ತಿಯಲ್ಲಿ ಯೋಗೇಶ್ವರ್ ಜನರ ಬಳಿ ತೆರಳಿ ಮತಯಾಚನೆ ಮಾಡಿದರು.