ಶೃಂಗೇರಿ: ಕೆಲದಿನಗಳಿಂದ ಶೃಂಗೇರಿಗೆ ಪ್ರವಾಸಿಗರ ದಂಡು ಹರಿದು ಬರುತ್ತಿದ್ದು ದೇವಸ್ಥಾನ,ಪ್ರವಾಸಿ ತಾಣಗಳಲ್ಲಿ ಎಲ್ಲೆಡೆ ಪ್ರವಾಸಿಗರ ಗುಂಪು ಕಂಡುಬರುತ್ತಿದೆ. ಶನಿವಾರ ಶ್ರೀ ಮಠ, ಗಾಂಧಿ ಮೈದಾನ, ಶೃಂಗೇರಿ ಪಟ್ಟಣ, ಬಸ್ ನಿಲ್ದಾಣ ಎಲ್ಲೆಡೆ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು.
ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಕಿಗ್ಗಾ ಸಮೀಪದ ಸಿರಿಮನೆ ಜಲಪಾತದಲ್ಲಿ ನೀರು ದುಮ್ಮುಕ್ಕುತ್ತಿದ್ದು ಪ್ರವಾಸಿಗರ ಕಣ್ಮನ ಸೂರೆಗೊಳ್ಳುತ್ತಿದೆ. ಸಿರಿಮನೆಯಲ್ಲಿ ಪ್ರವಾಸಿಗರ ನೂಕು ನುಗ್ಗಲು ಕಂಡು ಬರುತ್ತಿದೆ. ರಾಜ್ಯದ ವಿವಿಧೆಡೆಗಳಿಂದ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
ವೀಕೆಂಡ್ ದಿನ ಶನಿವಾರ, ಭಾನುವಾರಗಳಲ್ಲದೇ ದಿನನಿತ್ಯ ಪ್ರವಾಸಿಗರು ಬರುತ್ತಲೇ ಇದ್ದಾರೆ. ಪಟ್ಟಣದ ಬಸ್ ನಿಲ್ದಾಣ, ಮುಖ್ಯರಸ್ತೆ, ಭಾರತೀ ಬೀದಿಗಳಲ್ಲಿ ವಾಹನ ದಟ್ಟಣೆಯಿಂದ ಬೆಳಿಗ್ಗೆಯಿಂದಲೂ ಸಂಜೆಯವರೆಗೆ ಪದೇ ಪದೇ ಟ್ರಾಫಿಕ್ ಸಮಸ್ಯೆ ಉದ್ಭವಿಸುತ್ತಿದ್ದು ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಗಾಂಧಿ ಮೈದಾನದಲ್ಲಿಯೂ ವಾಹನ ದಟ್ಟಣೆ ಕಂಡುಬರುತ್ತಿದೆ.19 ಶ್ರೀ ಚಿತ್ರ 2-
ಶೃಂಗೇರಿಗೆ ಪ್ರವಾಸಿಗರ ದಂಡು ಹರಿದುಬರುತ್ತಿದ್ದು,ಶನಿವಾರ ಕಂಡು ಬಂದ ಜನ ಸಂದಣಿ