ಕಾರಪುರ ಮಠದ ರಸ್ತೆಗೆ ಬಂತು ಪಟ್ಟಣ ಪಂಚಾಯಿತಿ ಕಸ

KannadaprabhaNewsNetwork | Published : Dec 23, 2024 1:00 AM

ಸಾರಾಂಶ

ಪಟ್ಟಣದಲ್ಲಿ ಸಂಗ್ರಹಿಸುವ ಘನ ತ್ಯಾಜ್ಯ ಕಸವನ್ನು ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡದೇ ಪಟ್ಟಣ ಪಂಚಾಯಿತಿ ಸಿಬ್ಬಂದಿ ರಸ್ತೆ ಬದಿಗಳು, ರೈತರ ಕೃಷಿ ಜಮೀನು, ನೀರಾವರಿ ಕಾಲುವೆಗಳಿಗೆ ಕಸ ಸುರಿದು ಪರಿಸರ ಕಲುಷಿತಗೂಳಿಸುತ್ತಿದ್ದಾರೆ. ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತಿದೆ.

ಅಂಬಳೆ ವೀರಭದ್ರನಾಯಕ

ಕನ್ನಡಪ್ರಭ ವಾರ್ತೆ ಯಳಂದೂರು

ಪಟ್ಟಣದಲ್ಲಿ ಸಂಗ್ರಹಿಸುವ ಘನ ತ್ಯಾಜ್ಯ ಕಸವನ್ನು ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡದೇ ಪಟ್ಟಣ ಪಂಚಾಯಿತಿ ಸಿಬ್ಬಂದಿ ರಸ್ತೆ ಬದಿಗಳು, ರೈತರ ಕೃಷಿ ಜಮೀನು, ನೀರಾವರಿ ಕಾಲುವೆಗಳಿಗೆ ಕಸ ಸುರಿದು ಪರಿಸರ ಕಲುಷಿತಗೂಳಿಸುತ್ತಿದ್ದಾರೆ. ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತಿದೆ.ಪಟ್ಟಣದ ಕಾರಪುರ ಮಠಕ್ಕೆ ಹೋಗುವ ರಸ್ತೆ ಬದಿ ಮತ್ತು ಯರಿಯೂರು ಕಾಲುವೆ ಬದಿ ಕಸ ಹಾಕುವುದರಿಂದ ಸಾರ್ವಜನಿಕರು ರ್ದುನಾಥ ತಡೆಯಲಾಗದೆ ಮೂಗು ಮುಚ್ಚಿ ತಿರುಗಾಡುವ ಪರಿಸ್ಥಿತಿ ಬಂದಿದೆ. ಪಟ್ಟಣದಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ಕೊಳ್ಳೇಗಾಲ ಕಸ ವಿಲೇವಾರಿ ಘನತ್ಯಾಜ್ಯ ಘಟಕಕ್ಕೆ ಸಾಗಿಸಬೇಕೆಂದು ಈ ಹಿಂದೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರು. ಆದರೂ ಸ್ಥಳೀಯ ಪಟ್ಟಣ ಪಂಚಾಯಿತಿ ಸಿಬ್ಬಂದಿ ಮಾತ್ರ ಪಟ್ಟಣದಲ್ಲಿ ಉತ್ಪತ್ತಿಯಾಗುವ ಕಸವನ್ನು ಕಾಲುವೆ, ರಸ್ತೆ ಬದಿಗಳು, ಚಾನಲ್‌ಗಳಿಗೆ ಸುರಿದು ಕಲುಷಿತಗೂಳಿಸುತ್ತಿದ್ದಾರೆ.ನೀರಾವರಿ ಕಾಲುವೆ ರಸ್ತೆಬದಿಗಳೇ ಘನತ್ಯಾಜ್ಯ ಘಟಕ: ಯಳಂದೂರು ಪಟ್ಟಣ ಚಿಕ್ಕ ಪಟ್ಟಣವಾದರೂ ಘನತ್ಯಾಜ್ಯ ಮಾತ್ರ ದೊಡ್ಡ ಮಟ್ಟದಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ನಿರ್ದಿಷ್ಟವಾದ ಜಾಗ ತಲುಪಿಸಲು ಪಟ್ಟಣ ಪಂಚಾಯಿತಿ ಆಡಳಿತ ಪೌರ ಕಾರ್ಮಿಕರಿಗೆ ಮಾರ್ಗ ದರ್ಶನ ನೀಡದೆ ಇರುವ ಕಾರಣ ಪಟ್ಟಣ ಪಂಚಾಯಿತಿ ಸಿಬ್ಬಂದಿ ಅವರಿಗೆ ಅನುಕೂಲವಾಗುವ ರೀತಿ ನೀರಾವರಿ ಕಾಲುವೆ, ಕೆರೆ, ಕಟ್ಟೆ, ಕೃಷಿ ಜಮೀನು, ರಸ್ತೆ ಬದಿಗಳಲ್ಲಿ ಕೃತಕ ಘನತ್ಯಾಜ್ಯ ಘಟಕಗಳನ್ನು ಸೃಷ್ಠಿಸಿ ಕೂಂಡು ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ.ರೋಗ ಭೀತಿ: ಸಿಕ್ಕ ಸಿಕ್ಕ ಕಡೆ ಬೇಕಾ ಬಿಟ್ಟಿ ಘನತ್ಯಾಜ್ಯ ಸುರಿಯುತ್ತಿರುವುದರಿಂದ ಮದ್ಯದ ಅಂಗಡಿ ಪ್ಲಾಸ್ಟಿಕ್‌ ಕವರ್, ಬಾಟಲಿ, ಆಸ್ಪತ್ರೆಗಳಲ್ಲಿ ಉತ್ಪತ್ತಿಯಾಗುವ ವಿಷಕಾರಿ ಚುಚ್ಚು ಮದ್ದುಗಳು, ಔಷಧಿಗಳು ತ್ಯಾಜ್ಯದ ಜತೆ ಮಿಕ್ಸ್ ಮಾಡಿ ಸುರಿಯುವುದರಿಂದ ವಿಷಕಾರಿ ಅಂಶ ಗಾಳಿಯಲ್ಲಿ ಸೇರಿ ವಾಯು ಮಾಲಿನ್ಯವಾಗುವುದರ ಜತೆ ಮನುಷ್ಯರ ಆರೋಗ್ಯದ ಮೇಲೆ ದುಷ್ಟರಿಣಾಮ ಬಿರುತ್ತಿದೆ. ಕಾಡು ಹಂದಿ, ನಾಯಿಗಳು ಘನತ್ಯಾಜ್ಯದಲ್ಲಿ ಸಿಗುವ ಕೊಳತೆ ಮಾಂಸದ ಮೂಳೆಗಳು ತಿನ್ನಲು ಕಸವನ್ನು ಚಲ್ಲಿ ತಿನ್ನುವುದರಿಂದ ಪ್ರಾಣಿಗಳಿಗೆ ಸಾಕ್ರಮಿಕ ಕಾಯಿಲೆಗಳಿಗೆ ತುತ್ತಾಗುವ ಪರಿಸ್ಥಿತಿ ಬಂದಿದೆ. ಇನ್ನೂ ಬೀದಿನಾಯಿಗಳು ಕಸದ ರಾಶಿಯಲ್ಲಿ ಸಿಗುವ ಆಹಾರಕ್ಕಾಗಿ ಕಚ್ಚಾಟ ಮಾಡಿ ಮನುಷ್ಯರ ಮೇಲೂ ದಾಳಿ ನಡೆಸುತ್ತಿದೆ. ದನಕರು, ಹಸುಗಳು ಕೂಡಾ ತ್ಯಾಜ್ಯದಲ್ಲಿ ಸಿಗುವ ಪಾಸ್ಟಿಕ್ ಕವರುಗಳನ್ನು ತಿಂದು ರೋಗಗಳಿಗೆ ತುತ್ತಾಗಿ ಮೃತಪಡುತ್ತಿವೆ. ಆದರೂ ಕಸವನ್ನು ಸುರಿಯ ಬೇಡಿ ಎಂದು ಹತ್ತಾರು ಬಾರಿ ಪಟ್ಟಣ ಪಂಚಾಯಿತಿಗೆ ಸಾರ್ವಜನಿಕರು ಮತ್ತು ಕೃಷಿ ಜಮೀನಿನ ಮಾಲೀಕರು ದೂರಿದರು ಸಹ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಕ್ಯಾರೆ ಎನ್ನದೆ ರಸ್ತೆ ಬದಿಗಳಲ್ಲಿ ಕಸ ಸುರಿಯುತ್ತಿರುವುದು ಪಟ್ಟಣ ಪಂಚಾಯಿತಿ ಆಡಳಿತ ವ್ಯವಸ್ಥೆ ಬಗ್ಗೆ ಅಕ್ರೋಶ ವ್ಯಕ್ತಪಡಿಸಿದ್ದಾರೆ.ಮುಂಜಾನೆ ನಡಿಗೆ ನಿಲ್ಲಿಸಿದ ಜನ ಕಾರಪುರ ಮಠ ರಸ್ತೆಯಲ್ಲಿ ನಿತ್ಯಾ ಮಹಿಳೆಯರು ಮತ್ತು ಮಕ್ಕಳು ವಯೋವೃದ್ದರು ಸಂಜೆ ಮತ್ತು ಮುಂಜಾನೆ ಸಮಯದಲ್ಲಿ ವಾಯು ವಿಹಾರಕ್ಕೆ ಬರುತ್ತಿದ್ದ ಜನರು ಈ ಘನ ತ್ಯಾಜ್ಯದ ಗಬ್ಬುನಾಥಕ್ಕೆ ಬೇಸತ್ತು ತಮ್ಮ ವಾಯುವಿಹಾರ ನಿಲ್ಲಿಸಿದ್ದಾರೆ. ಅಲ್ಲದೆ ಈ ರಸ್ತೆ ಮುಖಾಂತರವೇ ಕಾರಪುರ ಮಠಕ್ಕೆ ಭಕ್ತರು ಆಗಮಿಸುತ್ತಾರೆ. ಅಲ್ಲದೆ ಈ ದಾರಿಯಲ್ಲೇ ಪರಿಶಿಷ್ಟ ಜಾತಿ,ಪಂಗಡ, ಇತರೆ ಜನನಾಂಗದ ರುದ್ರಭೂಮಿ ಇರುವುದರಿಂದ ಅಂತ್ಯ ಸಂಸ್ಕಾರ ನಡೆಸುವ ಜನರು ಕೂಡಾ ಈ ಕಸ ಕಂಡು ಪಟ್ಟಣ ಪಂಚಾಯಿತಿ ವಿರುದ್ದ ಅಕ್ರೋಶ ವ್ಯಕ್ತಪಡಿಸಿದ್ದಾರೆ.ಪಟ್ಟಣ ಪಂಚಾಯಿತಿ ಆಡಳಿತ ವ್ಯವಸ್ಥೆ ತುಂಬಾ ಹದಗೆಟ್ಟಿದೆ. ಘನತ್ಯಾಜ್ಯವನ್ನು ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡಬೇಕಾಗಿತ್ತು. ಆದರೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಮುಖ್ಯಾಧಿಕಾರಿಗಳು ನಿರ್ಲಕ್ಷತೆಗೆ ಕೈಕನ್ನಡಿಯಾಗಿದೆ. ಇನ್ನಾದರೂ ಪಟ್ಟಣ ಪಂಚಾಯಿತಿ ಆಡಳಿತ ಸೂಕ್ತವಾದ ಜಾಗದಲಿ ಕಸ ವಿಲೇವಾರಿ ಮಾಡದೆ ಹೋದರೆ ಪಟ್ಟಣ ಪಂಚಾಯಿತಿ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ.

ರಾಮನಾಯಕ, ಬಿಜೆಪಿ ಮುಖಂಡ ಎಲೇಕೇರಿ ಬೀದಿಕಾರಪುರ ಮಠದ ಬಳಿ ರಸ್ತೆ ಬದಿಗೆ ಕಸ ಸುರಿಯುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈಗಾಗಲೇ ಪಟ್ಟಣದಲ್ಲಿ ಉತ್ಪತ್ತಿಯಾಗುವ ಕಸವನ್ನು ಬೇರೆ ಕಡೆ ಸಾಗಿಸಲಾಗುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿಸ್ಥರ ಮೇಲೆ ಸೂಕ್ತ ಕ್ರಮ ವಹಿಸಲಾಗುವುದು.

ಮಹೇಶ್ ಕುಮಾರ್, ಮುಖ್ಯಾಧಿಕಾರಿ ಪ.ಪಂ. ಯಳಂದೂರು

Share this article