ನಿವೇಶನ ಹಂಚಿಕೆಗಾಗಿ ಪಟ್ಟಣ ಪಂಚಾಯಿತಿಗೆ ಮುತ್ತಿಗೆ

KannadaprabhaNewsNetwork |  
Published : Jun 02, 2026, 02:15 AM IST
ನಿವೇಶನ ಹಂಚಿಕೆ ಮಾಡುವಂತೆ ಆಗ್ರಹಿಸಿ ಪಪಂ ಕಾರ್ಯಾಲಯದ ಬಾಗಿಲಲ್ಲಿ ಮಹಿಳೆಯರು ಕೂತು ಆಕ್ರೋಶ ವ್ಯಕ್ತಪಡಿಸಿದರು. | Kannada Prabha

ಸಾರಾಂಶ

ಉಸ್ತುವಾರಿ ಮಂತ್ರಿಗಳು ಪರಿಶೀಲನೆ ನಡೆಸಿ ಹಂಚಿಕೆ ಮಾಡುವಂತೆ ಜಿಲ್ಲಾಧಿಕಾರಿ, ಆಡಳಿತಾಧಿಕಾರಿ ಹಾಗೂ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅವರ ಸೂಚನೆಯ ಪ್ರಕಾರ ಪರಿಶೀಲನೆ ನಡೆಸಲಾಯಿತು. ಆದರೆ ಹಂಚಿಕೆ ಕಾರ್ಯ ಮಾತ್ರ ಮಾಡಲಿಲ್ಲ.

ಮುಳಗುಂದ: ಸ್ಥಳೀಯ ಪಟ್ಟಣ ಪಂಚಾಯಿತಿಯಿಂದ 2012ರಿಂದ ಕಡುಬಡವರಿಗೆ, ನಿರ್ಗತಿಕರಿಗೆ ಹಂಚಿಕೆಯಾಗಬೇಕಿದ್ದ ನಿವೇಶನಗಳು ಇಂದಿಗೂ ಹಂಚಿಕೆಯಾಗದಿರುವುದನ್ನು ಖಂಡಿಸಿ ಮಹಿಳೆಯರು ಪಪಂ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ಕಳೆದ ಹದಿನೈದು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನಿವೇಶನ ಹಂಚಿಕೆ ಸದಸ್ಯರ ಆಡಳಿತಾವಧಿಯಲ್ಲಿ ಹಂಚಿಕೆಯಾಗಲಿಲ್ಲ. ಬಂದ 4000 ಅರ್ಜಿಗಳ ಪೈಕಿ 373 ಫಲಾನುಭವಿಗಳ ಹೆಸರು ಈ ತಾತ್ಕಾಲಿಕ ಪಟ್ಟಿ ಹಚ್ಚಲಾಗಿತ್ತು. ಆದರೆ ಸರಿಯಾಗಿ ಹಂಚಿಕೆಯಾದ್ದರಿಂದ ತಟಸ್ಥ ಉಳಿಸುವಂತಾಯಿತು.

ಆದರೆ ಉಸ್ತುವಾರಿ ಮಂತ್ರಿಗಳು ಪರಿಶೀಲನೆ ನಡೆಸಿ ಹಂಚಿಕೆ ಮಾಡುವಂತೆ ಜಿಲ್ಲಾಧಿಕಾರಿ, ಆಡಳಿತಾಧಿಕಾರಿ ಹಾಗೂ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅವರ ಸೂಚನೆಯ ಪ್ರಕಾರ ಪರಿಶೀಲನೆ ನಡೆಸಲಾಯಿತು. ಆದರೆ ಹಂಚಿಕೆ ಕಾರ್ಯ ಮಾತ್ರ ಮಾಡಲಿಲ್ಲ.

ಇದರಿಂದ ರೊಚ್ಚಿಗೆದ್ದ ಸಾರ್ವಜನಿಕ ಮಹಿಳೆಯರು ಕಳೆದ ವಾರ ಪಪಂಗೆ ಬಂದಾಗ ಮುಖ್ಯಾಧಿಕಾರಿಗಳು ಸೋಮವಾರ ಬರುವಂತೆ ತಿಳಿಸಿದ್ದರು. ಆದರೆ ಸೋಮವಾರ ಬಂದರೆ ಮುಖ್ಯಾಧಿಕಾರಿಯೇ ಕಾರ್ಯಾಲಯದಲ್ಲಿರಲಿಲ್ಲ. ಕಳೆದ ಕೆಲ ವರ್ಷಗಳಿಂದ ನಾವು ಹೀಗೆಯೇ ಕಾರ್ಯಾಲಯಕ್ಕೆ ಸುತ್ತಿ ಸಾಕಾಗಿದೆ. ಆದರೆ ಅಂದು ಬಾ ಇಂದು ಬಾ ಎಂದು ಹೇಳುತ್ತಿದ್ದು, ನಿವೇಶನರಹಿತರ ಬಗ್ಗೆ ಇವರಿಗೆ ಕಾಳಜಿಯೇ ಇಲ್ಲವಾಗಿದೆ. ಇದರಿಂದ ಪಟ್ಟಣದಲ್ಲಿ ಅಸಹನೆಯ ವಾತಾವರಣ ನಿರ್ಮಾಣವಾಗಿದೆ. ಈ ಹಿಂದೆ ಒಂದು ಪಟ್ಟಿ ಸದಸ್ಯರುಗಳಿದ್ದಾಗ ರೆಡಿಯಾಗಿತ್ತು. ಆದರೆ ಹಂಚಿಕೆಯಾದ ನಿವೇಶನಗಳು ಮನೆಯಿದ್ದವರಿಗೆ ನಿವೇಶನ ಹೀಗೆ ಸರ್ಕಾರದ ನೀತಿ ನಿಯಮ ಗಾಳಿಗೆ ತೂರಿ ಅವೈಜ್ಞಾನಿಕವಾಗಿ ಹಂಚಿಕೆ ಮಾಡಲಾಗಿತ್ತು. ನಿವೇಶನ ಪಡೆಯಬೇಕಿದ್ದ ಬಡವರಿಗೆ ಹಂಚಿಕೆ ಮಾಡಿಲ್ಲ ಎಂದು ಆರೋಪಿಸಿದರು.ನಿವೇಶನಗಳಿಗೆ 2012ರಲ್ಲಿ, 2017ರಲ್ಲಿ 2024 ರಲ್ಲಿ ಹೀಗೆ ಅರ್ಜಿ ಸಲ್ಲಿಕೆಯಾಗಿವೆ. ಹೀಗೆ ಅನೇಕ ಬಾರಿ ಅರ್ಜಿ ಸಲ್ಲಿಸಿ ಸಾವಿರಾರು ರು. ಖರ್ಚು ಮಾಡಿಕೊಂಡಿದ್ದೇವೆ. ನಮಗೆ ಮನೆಯಿಲ್ಲದೇ ಬಾಡಿಗೆ ಮನೆಯಲ್ಲಿದ್ದೇವೆ. ಬಾಡಿಗೆ ಮನೆಯ ವಾಸ ತಪ್ಪಿಸಿ ಎಂದರು. ಮುಖ್ಯಾಧಿಕಾರಿಗಳಿಗೆ ಫೋನ್ ಮಾಡಿದರೆ ಬೆಂಗಳೂರಿಗೆ ಹೋಗಿರುವುದಾಗಿ ಶುಕ್ರವಾರ ಬರಲು ಹೇಳಿದ್ದಾರೆ. ಶುಕ್ರವಾರ ಇನ್ನೂ ಹೆಚ್ಚು ಮಹಿಳೆಯರು ಸೇರಿ ಹೋರಾಟಕ್ಕಿಳಿಯುವುದಾಗಿ ಎಚ್ಚರಿಕೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾದ್ಯಂತ ಶಾಲೆಗಳ ಪ್ರಾರಂಭೋತ್ಸವ
ಸಂಘಟನೆ, ಆಡಳಿತಾತ್ಮಕ ಅವಿಭಾವ ಸಂಬಂಧ ಅಗತ್ಯ: ಎಸ್.ಎಸ್. ಶಿರಹಟ್ಟಿ