ಕನ್ನಡಪ್ರಭ ವಾರ್ತೆ ಬೀದರ್
ಕಾರ್ಖಾನೆಯಲ್ಲಿ ಭಾನುವಾರ ರಾತ್ರಿ 10ರ ಸುಮಾರಿಗೆ ಈ ದುರ್ಘಟನೆ ನಡೆದಿದ್ದು, ರಾಸಾಯನಿಕ ತಯಾರಿಕೆಯ ಸಂದರ್ಭದಲ್ಲಿ ಉಪಸ್ಥಿತರಿದ್ದ 8 ಜನರ ಪೈಕಿ ಇಬ್ಬರು ಸೋರಿಕೆಯಾದ ರಾಸಾಯನಿಕ ಅನಿಲ ಸೇವನೆಯಿಂದಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತಕ್ಷಣವೇ ಅನಿಲ ಸೋರಿಕೆ ಅರಿತು ಹೊರಗೆ ಓಡಿ ಬಂದ ಇತರ ಕಾರ್ಮಿಕರು ಜೀವ ಉಳಿಸಿಕೊಂಡಿದ್ದಾರೆ.
ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಿಂದಾಗಿ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ವಡ್ಡನಕೇರಾ ಗ್ರಾಮದ ಮಹ್ಮದ್ ಶಾದಾಬ್ ಕುತುಬೋದ್ದೀನ್ (21) ಹಾಗೂ ಮಧ್ಯಪ್ರದೇಶ ಮೂಲದ ಇಂದ್ರಜಿತ್ (23) ಮೃತಪಟ್ಟಿದ್ದಾರೆ.ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್ ಅವರ ಸೂಚನೆಯಂತೆ ಕಾರ್ಖಾನೆಯ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ ಹಾಗೂ ಡಿಎಸ್‌ಪಿ ಜೆಎಸ್ ನ್ಯಾಮೇಗೌಡರ್ ಹಾಗೂ ಸಿಪಿಐ ಗುರುಲಿಂಗಪ್ಪ ಗೌಡ ಪಾಟೀಲ್, ಪಿಎಸ್‌ಐ ತಿಮ್ಮಯ್ಯ ಅವರು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲಿಸಿ ಸಂಬಂಧಿತರನ್ನು ವಿಚಾರಣೆಗೆ ಒಳಪಡಿಸಿ, ಘಟಕದ ಕಾರ್ಯ ಸ್ಥಗಿತಗೊಳಿಸುವ ಕಾರ್ಯ ನಡೆಸಿದ್ದಾರೆ ಎಂದು. ಆಸ್ಪತ್ರೆಗೆ ಭೀಮರಾವ್ ಪಾಟೀಲ್ ಭೇಟಿ, ಸಾಂತ್ವನ