ನಾಗವಲ್ಲಿ ಶಾಲೆಗೆ ಟೊಯೊಟ ಕಂಪನಿ 3 ಕೋಟಿ ರು ನೆರವು

KannadaprabhaNewsNetwork |  
Published : Apr 03, 2026, 01:30 AM IST
0 | Kannada Prabha

ಸಾರಾಂಶ

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ನಾಗವಲ್ಲಿಯ ಕೆಪಿಎಸ್ ಶಾಲೆಗೆ ಗುರುವಾರ ಭೇಟಿ ನೀಡಿದ್ದ ಬೆಂಗಳೂರಿನ ಪ್ರತಿಷ್ಠಿತ ಟೊಯೊಟಾ ಕಿರ್ಲೋಸ್ಕರ್ ಕಂಪನಿಯ ಅಧಿಕಾರಿಗಳು ಶಾಲೆಯಲ್ಲಿ ಮೂಲ ಸೌಕರ್ಯಜ ಕಲ್ಪಿಸಲು ಅಗತ್ಯವಾದ 3 ಕೋಟಿ ರೂಪಾಯಿ ಅನುದಾನವನ್ನು ಕೊಡಲು ಒಪ್ಪಿದ್ದಾರೆ ಎಂದು ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್‌ಗೌಡ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ನಾಗವಲ್ಲಿಯ ಕೆಪಿಎಸ್ ಶಾಲೆಗೆ ಗುರುವಾರ ಭೇಟಿ ನೀಡಿದ್ದ ಬೆಂಗಳೂರಿನ ಪ್ರತಿಷ್ಠಿತ ಟೊಯೊಟಾ ಕಿರ್ಲೋಸ್ಕರ್ ಕಂಪನಿಯ ಅಧಿಕಾರಿಗಳು ಶಾಲೆಯಲ್ಲಿ ಮೂಲ ಸೌಕರ್ಯಜ ಕಲ್ಪಿಸಲು ಅಗತ್ಯವಾದ 3 ಕೋಟಿ ರೂಪಾಯಿ ಅನುದಾನವನ್ನು ಕೊಡಲು ಒಪ್ಪಿದ್ದಾರೆ ಎಂದು ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್‌ಗೌಡ ತಿಳಿಸಿದ್ದಾರೆ.ಕಂಪನಿಯ ಅಧಿಕಾರಿಗಳಾದ ಜನರಲ್ ಮ್ಯಾನೇಜರ್‌ ಕಿರಣ್, ಮ್ಯಾನೇಜರ್ ಪ್ರಶಾಂತ್ ಹಾಗೂ ರಮೇಶ್‌ ಅವರು ತಮ್ಮ ಜತೆಗೆ ಕ್ಷೇತ್ರದ ಮಸ್ಕಲ್, ಹೊನ್ನುಡಿಕೆ ಹಾಗೂ ಹೊನಸಗೆರೆ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸಿದರು. ಈಗಾಗಲೇ ಸರ್ಕಾರದ ಅನುದಾನ ಮತ್ತು ಶಾಸಕರ ನಿಧಿ ನೇರಿಒಟ್ಟು 3.5 ಕೋಟಿ ರೂಪಾಯಿ ಅನುದಾನದಡಿ ಈ ಶಾಲೆಯಲ್ಲಿ 16 ಕೊಠಡಿಗಳ ನರ್ಮಾದಣ ನಡೆದಿದೆ ಎಂದು ಶಾಸಕರು ತಿಳಿಸಿದ್ದಾರೆ.ನಂತರ ನಾಗವಲ್ಲಿಯ ಕೆಪಿಎನ್ ಶಾಲೆಗೆ ಭೇಟಿ ನೀಡಿ ಅಲ್ಲಿ ಸುಸಜ್ಜಿತವಾದ 12 ನೂತನ ಶಾಲಾ ಕೊಠಡಿಗಳು, ಕಂಪ್ಯೂಟರ್‌ಗಳು, ಪ್ರಯೋಗಾಲಯದ ಸಾಮಗ್ರಿಗಳು, ಗ್ರಂಥಾಲಯದ ಪುಸ್ತಕಗಳು, ಮತ್ತು ಶಿಕ್ಷಕರಿಗೆ ಲ್ಯಾಪ್‌ಟ್ಯಾಪ್, ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಆಟಿಗೆ ಸಾಮಾನುಗಳನ್ನು ಒದಗಿಸಲು 3 ಕೋಟಿ ರೂಪಾಯಿಗಳನ್ನು ಸಿಎಸ್‌ಆರ್ ನಿಧಿಯಡಿ ಒದಗಿಸಲು ಒಪ್ಪಿಕೊಂಡರು ಎಂದು ಶಾಸಕರು ಹೇಳಿದ್ದಾರೆ.

ಇಂದು ತಮ್ಮ ಕ್ಷೇತ್ರದ ವಿವಿಧ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿ ಒದಗಿಸಲಾಗಿರುವ ಮೂಲಸೌಕರ್ಯ‌ಗಳ ಕುರಿತು ತೃಪ್ತಿ ವ್ಯಕ್ತಪಡಿಸಿದ ಟೊಯೊಟ ಕಂಪನಿಯ ಅಧಿಕಾರಿಗಳು ನಾಗವಲ್ಲಿ ಶಾಲೆಯನ್ನು ರಾಜ್ಯದಲ್ಲಿ ಒಂದು ಅತ್ಯುತ್ತಮ ಶಾಲೆ ಮಾಡುವ ತಮ್ಮ ಸಂಕಲ್ಪಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ತಾವು ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆನೆಗಾಡು ಸೋಲಿಗರ ಹಾಡಿಗೆ ಕೊನೆಗೂ ಹರಿದ ಗಂಗೆ
ನಾಯಕತ್ವ ವೃದ್ಧಿಗೆ ವಿದ್ಯಾರ್ಥಿ ಸಂಸತ್ತು ಸಹಕಾರಿ: ಪ್ರೊ. ಜೆ.ಎಂ. ನಾಗಯ್ಯ