ಕನ್ನಡಪ್ರಭ ವಾರ್ತೆ ಕೆಜಿಎಫ್ಉದ್ಘಾಟನೆ ಮುನ್ನವೇ ಕೆಜಿಎಫ್ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯ ಡಿಜಿಟಲ್ ಟ್ರ್ಯಾಕ್‌ನ ತಡೆಗೋಡೆ ಸೋಮವಾರ ರಾತ್ರಿ ಸುರಿದ ಮಳೆಗೆ ಕುಸಿದು, ಕೋಚ್ಚಿ ಹೋಗಿದೆ. ಇದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅಂದಾಜು ೧೦ ಕೋಟಿ ರುಪಾಯಿಗಳ ವೇಚ್ಚದಲ್ಲಿ ಸಾರಿಗೆ ಕಚೇರಿ ಹಾಗೂ ಡಿಜಿಟಲ್ ವಾಹನ ಚಾಲನಾ ಪಥದ ಕಾಮಗಾರಿ ಬಹುತೇಕ ಮುಗಿದಿದ್ದು, ಶೀಘ್ರದಲ್ಲೇ ಹೊಸ ಕಚೇರಿ ಉದ್ಘಾಟಿಸಲು ನಿರ್ಧರಿಸಲಾಗಿತ್ತು. ಮಳೆಗೆ ಕೋಚ್ಚಿ ಹೋದ ತಡೆಗೋಡೆಕೋಲಾರ ಜಿಲ್ಲೆಯಲ್ಲಿ ಪ್ರರ್ಥಮವಾಗಿ ಕೆಜಿಎಫ್ ನಗರದಲ್ಲಿ ಡಿಜಿಟಲ್ ಟ್ರಾಕ್ ನಿರ್ಮಿಸಿ, ವಾಹನ ಚಾಲನಾ ಪರವಾನಗಿಯನ್ನು ನೀಡಲು ಅತ್ಯಾದುನಿಕ ತಂತ್ರಜ್ಞಾನದಿಂದ ೫ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಳೆದ ಒಂದು ವರ್ಷದಿಂದ ಡಿಜಿಟಲ್ ಟ್ರ್ಯಾಕ್ ಕಾಮಗಾರಿ ನಡೆಯುತ್ತಿತ್ತು, ಸೋಮವಾರ ರಾತ್ರಿ ಸುರಿದ ಮಳೆಗೆ ೭೦ ಮೀಟರ್ ಡಿಜಿಟಲ್ ಟ್ರ್ಯಾಕ್‌ನ ತಡೆಗೋಡೆ ಕೊಚ್ಚಿ ಹೋಗಿದೆ.ಗೋಡೆಗೆ ತಳಪಾಯವೇ ಇಲ್ಲ ಮೈಸೂರು ಮೂಲದ ಚಂದ್ರೇಗೌಡ ಎಂಬುವವರು ಡಿಜಿಟಲ್ ಟ್ರ್ಯಾಕ್ ನಿರ್ಮಾಣದ ಕಾಮಗಾರಿ ನಡೆಸುತ್ತಿದ್ದರು, ಆದರೆ ತಡೆಗೋಡೆ ನಿರ್ಮಿಸುವಾಗ ತಳಪಾಯ ಹಾಕದೇ ತಡೆಗೋಡೆ ನಿರ್ಮಾಣ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಸೋಮವಾರ ರಾತ್ರಿ ಸುರಿದ ಮಳೆಗೆ ತಡೆಗೋಡೆ ಕೋಚ್ಚಿಹೋಗಿದೆ.
ಕೋಚ್ಚಿ ಹೋಗಿರುವ ತಡೆಗೋಡೆಯನ್ನು ಪುನಃ ತಳಪಾಯ ಇಲ್ಲದೆ ಹಾಲೋ ಬ್ರಿಕ್ಸ್‌ನಿದ ನಿರ್ಮಾಣ ಮಾಡುತ್ತಿದ್ದಾರೆ, ಈಗಲಾದರೂ ಅಧಿಕಾರಿಗಳು ಕಾಮಗಾರಿಯನ್ನು ಪರಿಶೀಲಿಸಿ ತಳಪಾಯ ತೋಡಿ ತಡೆಗೋಡೆಯನ್ನು ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಶಾಸಕರು ಶಾಮೀಲಾಗಿರುವ ಅನುಮಾನಉದ್ಘಾಟನೆಗೆ ಮುನ್ನವೇ ಒಂದೇ ಮಳೆಗೆ ತಡೆಗೋಡೆ ಕೊಚ್ಚಿಹೋಗಿರುವುದು ನೋಡಿದರೆ ಕಚೇರಿಯ ಕಟ್ಟಡದ ಗುಣಮಟ್ಟದ ಬಗ್ಗೆ ಪ್ರಶ್ನೆ ಮಾಡಬೇಕಿದೆ, ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಂಬಂಧಪಟ್ಟ ಇಂಜಿನಿಯರ್‌ಗಳು ಇಲ್ಲದೆ ಇರುವುದೇ ಕಳಪೆ ಕಾಮಗಾರಿಯ ಸಾಕ್ಷಿ, ತಾಲೂಕಿನಲ್ಲಿ ಅವೈಜ್ಞಾನಿಕ ಕಾಮಗಾರಿಗಳಮ ಕುರಿತು ಶಾಸಕರು ಧ್ವನಿ ಎತ್ತದೆ ಇರುವುದು ನೋಡಿದರೆ ಶಾಸಕರು ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರಯೇ ಎಂಬು ಅನುಮಾನಗಳು ಮೂಡುತ್ತಿವೆ ಎಂದು ಜೆಡಿಎಸ್‌ನ ತಾಲೂಕು ಅಧ್ಯಕ್ಷರಾದ ಪಿ.ದಯಾನಂದ್ ತಿಳಿಸಿದ್ದಾರೆ. ಒಂದೇ ಮಳೆಗೆ ಡಿಜಿಟಲ್ ಟ್ರಾಕ್‌ನ ಗೋಡೆ ಕುಸಿದಿದ್ದು, ಎರಡನೇ ಮಳೆಗೆ ಸಾರಿಗೆ ಕಚೆರಿ ಕುಸಿಯುವ ಅನುಮಾನ ವ್ಯಕ್ತವಾಗಿದೆ. ಕಟ್ಟಡದ ಗುಣಮಟ್ಟದ ಕುರಿತು ತನಿಖೆಯಾಗಬೇಕು, ಕಟ್ಟಡದ ಗುಣಮಟ್ಟವನ್ನು ಮೂರನೇ ವ್ಯಕ್ತಿಯಿಂದ ತಪಾಸಣೆ ನಡೆಸಬೇಕು ಎಂದು ಮಾಜಿ ಶಾಸಕ ಎಸ್.ರಾಜೇಂದ್ರನ್ ಆಗ್ರಹಿಸಿದ್ದಾರೆ.