ಕೋಡೆಕಲ್‌ನಲ್ಲಿ ಟ್ರ್ಯಾಕ್ಟರ್‌ ಜಗ್ಗಿಸುವ ಸ್ಪರ್ಧೆ

KannadaprabhaNewsNetwork |  
Published : Sep 27, 2026, 01:30 AM IST
ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದ ಆಲಮೇಲ ಗ್ರಾಮದ ಟ್ರಾö್ಯಕ್ಟರ್ ಮಾಲೀಕನಿಗೆ ಬಹುಮಾನ ನೀಡುತ್ತಿರುವ ಮಾಜಿ ಸಚಿವ ನರಸಿಂಹನಾಯಕ(ರಾಜುಗೌಡ), ಹನುಮಂತನಾಯಕ(ಬಬಲಗೌಡ),ರಾಜಾ ಕುಶಾಲನಾಯಕ ಜಹಾಗೀರದಾರ ಮತ್ತೀತರರು. | Kannada Prabha

ಸಾರಾಂಶ

ಗಣೇಶ ಉತ್ಸವದ ಹಿನ್ನೆಲೆಯಲ್ಲಿ ಕೊಡೇಕಲ್ ಗ್ರಾಮದ ಪ್ಯಾಟಿ ವಲಯದಲ್ಲಿ ಆರ್‌ಟಿಜೆ ಸ್ಪೋರ್ಟ್ಸ ಕ್ಲಬ್ ವತಿಯಿಂದ ಸ್ಥಾಪಿಸಿದ ಗಣೇಶ ಉತ್ಸವ ಸಮಿತಿ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ 50 ಎಚ್‌ಪಿ ಟ್ರ್ಯಾಕ್ಟರ್‌ ಜಗ್ಗುವ ಸ್ಪರ್ದೆ ನೋಡುಗರನ್ನು ರೋಮಾಂಚನಗೋಳಿಸಿತು.

ಕನ್ನಡಪ್ರಭ ಕೊಡೇಕಲ್

ಗಣೇಶ ಉತ್ಸವದ ಹಿನ್ನೆಲೆಯಲ್ಲಿ ಕೊಡೇಕಲ್ ಗ್ರಾಮದ ಪ್ಯಾಟಿ ವಲಯದಲ್ಲಿ ಆರ್‌ಟಿಜೆ ಸ್ಪೋರ್ಟ್ಸ ಕ್ಲಬ್ ವತಿಯಿಂದ ಸ್ಥಾಪಿಸಿದ ಗಣೇಶ ಉತ್ಸವ ಸಮಿತಿ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ 50 ಎಚ್‌ಪಿ ಟ್ರ್ಯಾಕ್ಟರ್‌ ಜಗ್ಗುವ ಸ್ಪರ್ದೆ ನೋಡುಗರನ್ನು ರೋಮಾಂಚನಗೋಳಿಸಿತು.

ಇದೇ ಮೊದಲ ಬಾರಿಗೆ ಗ್ರಾಮದ ಆರ್‌ಟಿಜೆ ಸ್ಪೋರ್ಟ್ಸ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಸ್ಪರ್ದೆಯಲ್ಲಿ ದೂರದ ಆಲಮೇಲ, ನಿಡಗುಂದಿ, ಗೆದ್ದಲಮರಿ, ಹುಲ್ಲಿಕೇರಾ ,ಹರವಾಳ ಸೇರಿದಂತೆ ವಿವಿಧ ಭಾಗಗಳಿಂದ 14 ಟ್ರ್ಯಾಕ್ಟರ್‌ಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಗ್ರಾಮದ ಅರಸು ಮನೆತನದ ರಾಜಾ ಜಿತೇಂದ್ರನಾಯಕ ಜಹಾಗೀರದಾರ, ರಾಜಾ ಕುಶಾಲನಾಯಕ ಜಹಾಗೀರದಾರ ಮತ್ತು ಯುವ ಮುಖಂಡ ಹನುಮಂತನಾಯಕ (ಬಬಲುಗೌಡ) ಸ್ಪರ್ಧೆಗೆ ಚಾಲನೆ ನೀಡಿದರು.ರೋಮಾಂಚನಗೊಳಿಸಿದ ಸ್ಪರ್ಧೆ: ಕಮಿಟಿ ನಿರ್ಣಯದಂತೆ ಸ್ಪರ್ದೆಯಲ್ಲಿ 50 ಎಚ್.ಪಿ ಇಂಜಿನ್ ಸಾಮರ್ಥ್ಯದ ಟ್ರ್ಯಾಕ್ಟರ್‌ಗಳು ಭಾಗಹಿಸಲು ಅನುಮತಿ ನೀಡಲಾಗಿತ್ತು. ಟ್ರ್ಯಾಕ್ಟರ್‌ಗಳ ತೂಕ ನೋಡಿದ ನಂತರ ಲಾಟ್ಸ್‌ ಮೂಲಕ ಸ್ಪರ್ಧಿಗಳ ಆಯ್ಕೆಯಾದರು. ಸ್ಪರ್ದೆಯಲ್ಲಿ ಒಟ್ಟು ಎರಡು ಸುತ್ತುಗಳಿದ್ದು

ಕಿಕ್ಕಿರಿದ ಜನಸ್ತೋಮ: ಬಹುತೇಕವ ಟ್ರ್ಯಾಕ್ಟರ್‌ಗಳ ಜಗ್ಗುವ ಸ್ಪರ್ಧೆ ಹೆಚ್ಚಾಗಿ ಜಮಖಂಡಿ ತಾಲೂಕಿನ ಭಾಗಗಳಲ್ಲಿ ಹೆಚ್ಚಾಗಿ ನಡೆಸಲಾಗುತ್ತದೆ. ಆದರೆ ವಲಯದಲ್ಲಿ ಇದೇ ಮೊದಲ ಬಾರಿಗೆ ಟ್ರ್ಯಾಕ್ಟರ್‌ಗಳ ಜಗ್ಗುವ ಸ್ಪರ್ಧೆ ಆಯೋಜಿಸಿದ್ದ ಕಾರಣ ಸ್ಪರ್ಧೆ ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು, ಯಾವುದೆ ಅಹಿತಕರ ಘಟನೆ ಸಂಭವಿಸದಂತೆ ಸ್ಪರ್ಧೆ ನಡೆಯುವ ಸುತ್ತಲು ಬ್ಯಾರಿಕೇಡಗಳನ್ನು ಅಳವಡಿಸಿ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು.

ತಡರಾತ್ರಿವರೆಗೆ ನಡೆದ ಸ್ಪರ್ಧೆಯಲ್ಲಿ ಸಿಂದಗಿ ತಾಲೂಕಿನ ಆಲಮೇಲದ ಟ್ರ್ಯಾಕ್ಟರ್‌ ಪ್ರಥಮ ಸ್ಥಾನ ಗಳಿಸುವ ಮೂಲಕ 20 ಸಾವಿರ ರು. ಬಹುಮಾನ ತನ್ನದಾಗಿಸಿಕೊಂಡಿತು. ದ್ವಿತೀಯ ಬಹುಮಾನವಾದ 15 ಸಾವಿರ ರು. ಬನ್ನಟ್ಟಿ ಗ್ರಾಮದ ಟ್ರ್ಯಾಕ್ಟರ್‌ ಪಾಲಾಯಿತು. ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡ ಹರನಾಳ ಗ್ರಾಮದ ಟ್ರ್ಯಾಕ್ಟರ್‌ 10 ಸಾವಿರ ರು. ತನ್ನದಾಗಿಸಿಕೊಂಡಿತು.

ಒಟ್ಟಾರೆಯಾಗಿ ಇದೇ ಮೊದಲ ಬಾರಿಗೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಟ್ರ್ಯಾಕ್ಟರ್‌ ಜಗ್ಗಿಸುವ ಸ್ಪರ್ದೆ ಅತ್ಯಂತ ರೋಮಾಂಚನವಾಗಿ ನಡೆಯುವ ಮೂಲಕ ಜನರ ಮೆಚ್ಚುಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಸ್ಪರ್ದೆಯನ್ನು ಮಾಜಿ ಸಚಿವ ನರಸಿಂಹನಾಯಕ (ರಾಜುಗೌಡ) ಕೂತುಹಲದಿಂದ ವೀಕ್ಷಣೆ ಮಾಡಿ ವಿಜೇತ ಟ್ರ್ಯಾಕ್ಟರ್‌ಗಳ ಮಾಲೀಕರಿಗೆ ಬಹುಮಾನ ವಿತರಿಸಿದರು. ರಾಜಾ ಜಿತೇಂದ್ರನಾಯಕ ಜಹಾಗೀರದಾರ, ರಾಜಾ ಕುಶಾಲನಾಯಕ ಜಹಾಗೀರದಾರ,ಬಬಲುಗೌಡ, ಕಾರ್ತಿಕನಾಯಕ, ಮಲ್ಲು ನವಲಗುಡ್ಡ, ದೇವು ಗೋಪಾಳಿ, ಸೇರಿದಂತೆ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿರತೆ ಹಾವಳಿ ಗ್ರಾಮಸ್ಥರ ಆಕ್ರೋಶ ಸಾಕು ಪ್ರಾಣಿಗಳ ಮೇಲೆ ದಾಳಿ
ಜನಪದ ಸಾಹಿತ್ಯಕ್ಕೆ ಪ್ಲೀಟ್ ಕೊಡುಗೆ ಅನನ್ಯ: ಕೊಡಂಬಲ್