- ಜುಲೈ 23 ಮತ್ತು 24 ರಂದು ಯಾದಗಿರಿಯಲ್ಲಿ ಬೇಕರಿ ಮತ್ತು ಸಣ್ಣ ವ್ಯಾಪಾರಿಗಳಿಂದ ಮುಷ್ಕರ
ಜಿಎಸ್ಟಿ ದಂಡ ನೋಟಿಸ್‌ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ನಗರದ ಬೇಕರಿ ಮಾಲೀಕರು ಮತ್ತು ಸಣ್ಣ ಅಂಗಡಿದಾರರು, ಜುಲೈ 23 ಮತ್ತು 24 ರಂದು ಈ ಎರಡು ದಿನಗಳ ಕಾಲ ಮುಷ್ಕರವನ್ನು ಘೋಷಿಸಿದ್ದಾರೆ. ಈ ಕುರಿತು ಮಂಗಳವಾರ ನಡೆದ ಜಂಟಿ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಮೌನ ಪ್ರತಿಭಟನೆಯೊಂದಿಗೆ ಸಾಂಕೇತಿಕ ಮುಷ್ಕರದ ಆ ಎರಡು ದಿನಗಳಲ್ಲಿ ಕಪ್ಪುಪಟ್ಟಿಗಳನ್ನು ಧರಿಸಿ ಜಿಎಸ್ಟಿ ದಂಡದ ನಿರ್ಧಾರವನ್ನು ವಿರೋಧಿಸಲು ಸಭೆಯಲ್ಲಿ ಎಲ್ಲರೂ ಒಮ್ಮತದಿಂದ ನಿರ್ಧರಿಸಿದ್ದಾರೆಂದು ಬೇಕರಿ ಮತ್ತು ಕಿರಾಣಾ ವ್ಯಾಪಾರಿಗಳ ಸಂಘ ತಿಳಿಸಿದೆ. ಸಭೆಯಲ್ಲಿ ಮುಖಂಡರಾದ ಬೇಕರಿ ಸಂಘದ ಅಧ್ಯಕ್ಷ ಅಬ್ದುಲ್ ಹಸನ್, ವ್ಯಾಪಾರಸ್ಥರಾದ ಮೊಹ್ಮದ್ ಅನ್ವರ್, ಕಿರಾಣಾ ಸಂಘದ ಅಧ್ಯಕ್ಷ ಸಿದ್ದುಗೌಡ ಹಾಗೂ ಕಿರಾಣಿ ಸಂಘದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಶಿರಗೋಳ ಇದ್ದರು.