ಉಡುಪಿ ಲಾ ಕಾಲೇಜಿನಲ್ಲಿ ಸಾಂಪ್ರದಾಯಿಕ ದಿನ

KannadaprabhaNewsNetwork |  
Published : Jun 20, 2026, 02:45 AM IST
19ಲಾ | Kannada Prabha

ಸಾರಾಂಶ

ಜಗತ್ತಿನಲ್ಲಿ ಪ್ರಕೃತಿ ಸುಲಭವಾಗಿ ಸಾಧ್ಯವಾಗುವುದನ್ನು ಕಲಿಯುವ ಮತ್ತು ನೋಡುವ ಅವಕಾಶ ಕೊಟ್ಟಿದೆ. ಯುವ ಜನತೆ ಜೀವನದಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಂಡು ಯಾವುದೇ ಒತ್ತಡಕ್ಕೆ ಒಳಗಾಗದೇ ವಿಶಿಷ್ಟ ಪ್ರತಿಭೆ, ದೃಷಿಕೋನ ಮತ್ತು ಮಹಾತ್ವಾಕಾಂಕ್ಷೆ ಮೂಲಕ ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮಬೇಕು ಎಂದು ಚಲನಚಿತ್ರ ನಟ ಹಾಗೂ ರಂಗಭೂಮಿ ಕಲಾವಿದರಾದ ಬಾಸುಮ ಕೊಡಗು ಹೇಳಿದರು.

ಉಡುಪಿ: ಜಗತ್ತಿನಲ್ಲಿ ಪ್ರಕೃತಿ ಸುಲಭವಾಗಿ ಸಾಧ್ಯವಾಗುವುದನ್ನು ಕಲಿಯುವ ಮತ್ತು ನೋಡುವ ಅವಕಾಶ ಕೊಟ್ಟಿದೆ. ಯುವ ಜನತೆ ಜೀವನದಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಂಡು ಯಾವುದೇ ಒತ್ತಡಕ್ಕೆ ಒಳಗಾಗದೇ ವಿಶಿಷ್ಟ ಪ್ರತಿಭೆ, ದೃಷಿಕೋನ ಮತ್ತು ಮಹಾತ್ವಾಕಾಂಕ್ಷೆ ಮೂಲಕ ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮಬೇಕು ಎಂದು ಚಲನಚಿತ್ರ ನಟ ಹಾಗೂ ರಂಗಭೂಮಿ ಕಲಾವಿದರಾದ ಬಾಸುಮ ಕೊಡಗು ಹೇಳಿದರು. ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ‘ಮೂಲ’ ಎಂಬ ಸಾಂಪ್ರಾದಾಯಿಕ ದಿನದ ಉದ್ಘಾಟಕರಾಗಿ ಮಾತನಾಡಿದ ಅವರು, ಕಾನೂನು ಕ್ಷೇತ್ರದಲ್ಲಿನ ತೀರ್ಪುಗಳು / ತೀರ್ಮಾನಗಳು ಮಾನವಿಕ ದೃಷ್ಟಿಕೋನದಿಂದಿರಬೇಕು ಎಂದು ಹೇಳಿದರು.ಕಾರ್ಯಕ್ರಮದ ಮತ್ತೊಬ್ಬ ಅತಿಥಿಗಳಾದ ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕಾಕ೯ಳ ಮಾತನಾಡಿ, ಕೈಗಾರಿಕೆ ಹೆಸರಿನಲ್ಲಿ ತುಳುನಾಡಿನಲ್ಲಿ ಕೃಷಿ ಭೂಮಿ ನಾಶವಾಗುತ್ತಿದ್ದು, ಇದರಿಂದ ಸಂಸ್ಕೃತಿ ಮತ್ತು ಆರೋಗ್ಯ ಹಾಳಾಗುತ್ತಿದೆ. ಕೃಷಿ ಉಳಿದರೆ ಸಂಸ್ಕೃತಿ ಮತ್ತು ಭಾಷೆ ಉಳಿಯುತ್ತದೆ. ಹಾಗಾಗಿ ಯುವಜನತೆ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮೂಲಕ ತುಳುನಾಡಿನ ಸಂಸ್ಕೃತಿ ಉಳಿಸಬೇಕು ಎಂದರು. ಕಾಲೇಜಿನ ಮಾನವಿಕ ವಿಭಾಗದ ಮುಖ್ಯಸ್ಥರಾದ ಪ್ರೊ. ರೋಹಿತ್ ಎಸ್. ಅಮೀನ್ ಅಧ್ಯಕ್ಷತೆ ವಹಿಸಿದ್ದರು. ನಿಧಿ ಪ್ರಾರ್ಥನೆ ನೆರವೇರಿಸಿದರು. ದೀಪಕ್ ಹಾಗೂ ಕಾರ್ತಿಕ್ ಪರಿಚಯಿಸಿದರು. ಶ್ರೀವತ್ಸ ಸ್ವಾಗತಿಸಿದರು. ಅಚಲ ಹೆಬ್ಬಾರ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಜನೆ ಕಾಲಹರಣಕ್ಕಲ್ಲ: ಶ್ರೀ ವೇದವರ್ಧನ ತೀರ್ಥರು
ಫ್ಲೆಕ್ಸ್ ತೆರವಿಗೆ ವಿರೋಧ: ಪುರಸಭೆಗೆ ಮುತ್ತಿಗೆ ಪ್ರತಿಭಟನೆ