ಕೊಪ್ಪಳದಲ್ಲಿ ಡಿಜೆ ಅಬ್ಬರವಿಲ್ಲದೆ ಸಂಪ್ರದಾಯಿಕ ಗಣೇಶ ವಿಸರ್ಜನೆ

KannadaprabhaNewsNetwork |  
Published : Sep 24, 2026, 02:00 AM IST
ಕೊಪ್ಪಳ ಗಿಣಿಗೇರ ಗ್ರಾಮದ ನವಚೇತನ ತರುಣ ಸಂಘ ಹಾಗೂ ನವಚೇತನ ಮಹಿಳಾ ಸಂಘದ ಗಣೇಶ ವಿಸರ್ಜನೆ ಮೆರವಣಿಗೆ ಸಾಂಪ್ರದಾಯಿಕವಾಗಿ ನಡೆಯಿತು. | Kannada Prabha

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಗಣೇಶೋತ್ಸವದ ಮೆರವಣಿಗೆ ಎಂದರೆ ಡಿಜೆ ಅಬ್ಬರ, ಭಾರಿ ಧ್ವನಿವರ್ಧಕ ಹಾಗೂ ಪಟಾಕಿಗಳ ಸದ್ದು ಸಾಮಾನ್ಯವಾಗಿರುವ ಸಂದರ್ಭದಲ್ಲಿ ಕೊಪ್ಪಳ ತಾಲೂಕಿನ ಗಿಣಿಗೇರ ಗ್ರಾಮದ ನವಚೇತನ ತರುಣ ಸಂಘ ಹಾಗೂ ನವಚೇತನ ಮಹಿಳಾ ಸಂಘವು ಇದಕ್ಕೆ ಭಿನ್ನವಾಗಿ ಸಂಪ್ರದಾಯಿಕ ಶೈಲಿಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ನಡೆಸುವ ಮೂಲಕ ಗಮನ ಸೆಳೆಯಿತು.

ಕೊಪ್ಪಳ: ಇತ್ತೀಚಿನ ದಿನಗಳಲ್ಲಿ ಗಣೇಶೋತ್ಸವದ ಮೆರವಣಿಗೆ ಎಂದರೆ ಡಿಜೆ ಅಬ್ಬರ, ಭಾರಿ ಧ್ವನಿವರ್ಧಕ ಹಾಗೂ ಪಟಾಕಿಗಳ ಸದ್ದು ಸಾಮಾನ್ಯವಾಗಿರುವ ಸಂದರ್ಭದಲ್ಲಿ ಗಿಣಿಗೇರ ಗ್ರಾಮದ ನವಚೇತನ ತರುಣ ಸಂಘ ಹಾಗೂ ನವಚೇತನ ಮಹಿಳಾ ಸಂಘವು ಇದಕ್ಕೆ ಭಿನ್ನವಾಗಿ ಸಂಪ್ರದಾಯಿಕ ಶೈಲಿಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ನಡೆಸುವ ಮೂಲಕ ಗಮನ ಸೆಳೆಯಿತು.

ಗ್ರಾಮದಲ್ಲಿ ನವಚೇತನ ತರುಣ ಸಂಘ ಹಾಗೂ ನವಚೇತನ ಮಹಿಳಾ ಸಂಘದ ವತಿಯಿಂದ ಆಯೋಜಿಸಿದ್ದ 22ನೇ ವರ್ಷದ ಗಣೇಶೋತ್ಸವದ ವಿಸರ್ಜನೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಗಣೇಶ ಮೂರ್ತಿಯನ್ನು ಸಾಂಪ್ರದಾಯಿಕ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.

ವಿಶೇಷವಾಗಿ ಈ ಬಾರಿ ಡಿಜೆ ಬಳಸದೆ, ಶರಾವಣಭವ ಚಂಡಿ ವಾದ್ಯದ ನಾದ ಹಾಗೂ ಶುಭಶ್ರೀ ಅವರ ಮನಮೋಹಕ ವಾಯಲಿನ್ ವಾದನದೊಂದಿಗೆ ಮೆರವಣಿಗೆ ನಡೆಸಲಾಯಿತು. ಸಾಂಪ್ರದಾಯಿಕ ಸಂಗೀತದ ನಾದಕ್ಕೆ ಗ್ರಾಮಸ್ಥರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಮೆರವಣಿಗೆಯುದ್ದಕ್ಕೂ ಭಕ್ತರು ಗಣೇಶನಿಗೆ ಜಯಘೋಷಗಳನ್ನು ಮೊಳಗಿಸಿ ಭಕ್ತಿಭಾವ ಮೆರೆದರು.

ಮೆರವಣಿಗೆಯಲ್ಲಿ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಇಂದಿನ ದಿನಗಳಲ್ಲಿ ಗಣೇಶೋತ್ಸವದ ಮೆರವಣಿಗೆಗಳಲ್ಲಿ ಡಿಜೆ ಅಬ್ಬರವೇ ಪ್ರಮುಖ ಆಕರ್ಷಣೆಯಾಗುತ್ತಿರುವ ಸಂದರ್ಭದಲ್ಲಿ, ಸಂಗೀತದ ಸದ್ದಿನ ಬದಲಾಗಿ ಸಂಪ್ರದಾಯಿಕ ವಾದ್ಯಗಳ ಮೂಲಕ ಹಬ್ಬದ ಆಚರಣೆ ನಡೆಸಿದ ನವಚೇತನ ಸಂಘದ ಪ್ರಯತ್ನ ಗ್ರಾಮಸ್ಥರ ಗಮನ ಸೆಳೆಯಿತು.

ಹಬ್ಬದ ಸಂಭ್ರಮಕ್ಕೆ ಆಧುನಿಕತೆಯ ಸ್ಪರ್ಶ ನೀಡುವ ಬದಲು ನಮ್ಮ ನಾಡಿನ ಸಾಂಪ್ರದಾಯಿಕ ಕಲೆ, ಸಂಗೀತ ಹಾಗೂ ವಾದ್ಯಗಳಿಗೆ ಆದ್ಯತೆ ನೀಡುವ ಮೂಲಕ ನವಚೇತನ ತರುಣ ಸಂಘ ಮತ್ತು ನವಚೇತನ ಮಹಿಳಾ ಸಂಘವು ವಿಭಿನ್ನ ಸಂದೇಶ ಸಾರಿತು. ಸಂಘದ ಈ ವಿನೂತನ ಪ್ರಯತ್ನಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸುರಕ್ಷತೆ ಶಿಕ್ಷಕರ ಮೂಲ ಕರ್ತವ್ಯ: ಸಿದ್ರಾಮೇಶ್ವರ
ಕೊಪ್ಪಳದಲ್ಲಿ ಆಧಾರ್ ತಿದ್ದುಪಡಿಗೆ ಬೆಳಗಿನ ಜಾವವೇ ಕ್ಯೂ