ಪಾರಂಪರಿಕ ವೈದ್ಯಕೀಯ ಕ್ಷೇತ್ರಕ್ಕಿದೆ ಮಹತ್ವದ ಇತಿಹಾಸ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

KannadaprabhaNewsNetwork |  
Published : Jun 08, 2026, 03:15 AM IST
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿದರು. | Kannada Prabha

ಸಾರಾಂಶ

ಪಾರಂಪರಿಕ ವೈದ್ಯ ಡಾ. ಮಳಲಿ ಅವರು ಅನೇಕ ರೋಗಗಳಿಗೆ ಔಷಧ ನೀಡಿದ್ದಾರೆ. ದೇಶ- ವಿದೇಶಗಳಿಂದ ಸಾಕಷ್ಟು ಜನರು ವಾಸನ ಗ್ರಾಮಕ್ಕೆ ಬಂದು ಔಷಧಿ ಪಡೆದಿದ್ದಾರೆ.

ನರಗುಂದ: ಆಯುರ್ವೇದವು ಕೇವಲ ರೋಗಗಳಿಗೆ ಚಿಕಿತ್ಸೆ ನೀಡುವುದಲ್ಲದೆ, ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸಮತೋಲನವನ್ನು ಕಾಪಾಡಿಕೊಳ್ಳುವ ಮೂಲಕ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಮಾರ್ಗದರ್ಶನ ನೀಡುತ್ತದೆ. ಇದಕ್ಕೆ ಬಹಳಷ್ಟು ಇತಿಹಾಸ ಮಹತ್ವ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಭಿಪ್ರಾಯಪಟ್ಟರು.

ತಾಲೂಕಿನ ವಾಸನ ಗ್ರಾಮದ ಸ್ವಯಂ ಸಂಜೀವಿನಿ ಆಶ್ರಮದಲ್ಲಿ ಬಿವಿಜಿ ವೆಲ್‌ನೆಸ್‌ ಸೆಂಟರ್-ಕ್ಯಾನ್ಸರ್ ಚಿಕಿತ್ಸಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಪಾರಂಪರಿ ವೈದ್ಯಕೀಯ ಸೇವೆ ದೊಡ್ಡ ಸಾಧನೆ ಮಾಡಲಾಗಿದ್ದು, ಭಾರತದ ಕೊಡುಗೆ ದೊಡ್ದದು. ಜಗತ್ತಿಗೆ ಶೂನ್ಯದ ಕಲ್ಪನೆ ಕೊಟ್ಟವರು ಭಾರತೀಯರು ಎಂದ ಅವರು, ಇಸ್ಲಾಮಿಕ್ ಪ್ರಭಾವದಿಂದಾಗಿ ವೈದ್ಯಕೀಯ ಕ್ಷೇತ್ರ ಸೇರಿದಂತೆ ನಮ್ಮ ನಂಬಿಕೆ ಮೇಲೆ ವ್ಯವಸ್ಥೆ ಗದಾ ಪ್ರಹಾರದಿಂದಾಗಿ ಹಾನಿಯಾಯಿತು‌. ನಂತರ ಪಾರಂಪರಿಕವಾಗಿ ಬಂದಿದ್ದು ಆಯುರ್ವೇದಕ್ಕೆ ಬಹಳಷ್ಟು ಮಹತ್ವ ಬಂದಿತು. ಇದರಿಂದಾಗಿ ಗಿಡಮೂಲಿಕೆಗಳ ಅನೇಕ ಔಷಧಿ ಇವೆ. ಇದು ಈಗ ದೊಡ್ಡ ಪ್ರಮಾಣದ ಮಹತ್ವ ಬರುತ್ತಿದೆ. ಬಿವಿಜಿ ಲೈಫ್ ಸೈನ್ಸಸ್ ಲಿಮಿಟೆಡ್‌ ಜೊತೆಗೆ ಸೇರಿಕೊಂಡು ಹಣಮಂತ ಮಳಲಿ ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ. ಇದೊಂದು ದಾಖಲೆಯಾಗಬೇಕು. ಇಲ್ಲಿಗೆ ಬಂದ ರೋಗಿಗಳು ಗುಣಮುಖರಾಗಿ ನಗುತಾ ಹೋಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಪಾರಂಪರಿಕ ವೈದ್ಯ ಡಾ. ಮಳಲಿ ಅವರು ಅನೇಕ ರೋಗಗಳಿಗೆ ಔಷಧ ನೀಡಿದ್ದಾರೆ. ದೇಶ- ವಿದೇಶಗಳಿಂದ ಸಾಕಷ್ಟು ಜನರು ವಾಸನ ಗ್ರಾಮಕ್ಕೆ ಬಂದು ಔಷಧಿ ಪಡೆದಿದ್ದಾರೆ. ಆಯುರ್ವೇದ ಔಷಧಿಗೆ ಅಡ್ಡ ಪರಿಣಾಮ ಇಲ್ಲ. ಆದರೆ ಅಲೋಪತಿಕ್ ಔಷಧಿಗೆ ಅಡ್ಡ ಪರಿಣಾಮ ಇದೆ. ಈ ಚಿಕಿತ್ಸಾಲಯಕ್ಕೆ ದಾಖಲೆ ಪ್ರಮಾಣದಲ್ಲಿ ಜನರು ಬರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿಗೆ ಬರುವ ರೋಗಿಗಳು ಗುಣಮುಖರಾಗಿ ಹೊರಹೋಗಬೇಕಾಗಿದೆ ಎಂದರು.ಪಾರಂಪರಿಕ ವೈದ್ಯ ಡಾ. ಹನುಮಂತ ಮಳಲಿ ಮಾತನಾಡಿ, ನಮ್ಮ ಚಿಕಿತ್ಸಾಲಯದಲ್ಲಿ ಔಷಧಿ ಪಡೆದು ಗುಣಮುಖರಾದ ಅನೇಕರು ಇಲ್ಲಿಗೆ ಆಗಮಿಸಿದ್ದಾರೆ. ದೇಶ- ವಿದೇಶದಿಂದ ಜನರು ಇಲ್ಲಿಗೆ ಬಂದು ನನ್ನ ಹತ್ತಿರ ಔಷಧಿ ಪಡೆದಿದ್ದಾರೆ. ಕ್ಯಾನ್ಸರ್ ವಾಸಿಯಾದ 10 ಸಾವಿರ ಜನರ ದಾಖಲೆ ಇದೆ. ಅಡುಗೆ ಮನೆಯ ಆಹಾರ ಪದ್ಧತಿ ಬದಲಾದ ಕಾರಣ ರೋಗಗಳು ಹೆಚ್ಚು ಹರಡುತ್ತಿವೆ. ರಾಜ್ಯಾದ್ಯಂತ 40 ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಿದ್ದೇವೆ ಎಂದರು.ಬಿವಿಜಿ ಲೈಫ್ ಸೈನ್ಸಸ್ ಲಿಮಿಟೆಡ್‌ ಸಂಸ್ಥೆ ಸಂಸ್ಥಾಪಕ ಹಣಮಂತರಾವ ಗಾಯಕವಾಡ ಮಾತನಾಡಿ, ಬಿವಿಜಿ ಲೈಫ್ ಸೈನ್ಸಸ್ ಸಂಸ್ಥೆ ಬಹಳಷ್ಟು ಸಂಶೋಧನೆ ಮೂಲಕ ಇಂದು ಪಾರಂಪರಿಕ ವೈದ್ಯಕೀಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಕೊಟ್ಟಿದೆ. ಕೇವಲ ಯಾವುದೇ ಒಂದು ಗಿಡಮೂಲಿಕೆ ಮುಖಾಂತರ ಔಷಧ ಕೊಡತಾ ಇಲ್ಲ ನುರಿತ ತಜ್ಞ ವೈದ್ಯಕೀಯ ಸಾಧಕರ ಮೂಲಕ ಸಂಶೋಧನೆ ಮಾಡಲಾಗಿದೆ. ಇಂದು ಗ್ರಾಮಾಂತರ ಪ್ರದೇಶಗಳಲ್ಲಿ ಜನರ ಉತ್ತಮ ಆರೋಗ್ಯ ಕೊಡಲು ನಾವು ಬಂದಿದ್ದೇವೆ ಎಂದರು.ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಮಾತನಾಡಿ, ಸಂಸಾರದಲ್ಲಿ ಸಂತರಾಗಿ ಬದುಕಬೇಕು. ಇಲ್ಲಿ ಸಂತೋಷದಿಂದ ಬದುಕುವವರೇ ನಿಜವಾದ ಸಂತರು. ಮನುಷ್ಯ ಸಂತೋಷ ತನ್ನಲ್ಲಿ ಇರಿಸಿಕೊಂಡಿದ್ದು, ಅದನ್ನ ತೋರಿಸಿಕೊಡಲು ಬಿವಿಜಿ ಸಂಸ್ಥೆಯವರು ನಿಮ್ಮ ಊರಿಗೆ ಬಂದಿದ್ದಾರೆ ಎಂದರು.

ಕೇರಳದ ಮಾಹಾಪೀಠಂನ ಪೀಠಾಧಿಪತಿ ಶ್ರೀ ಸಹಸ್ರಾರ ಯೋಗೀಶ್ವರ ಸ್ವಾಮೀಜಿ ಮಾತನಾಡಿ, ಆರ್ಯುವೇದ ಚಿಕಿತ್ಸೆ ಅತ್ಯಂತ ಬಹಳ ಉಪಯುಕ್ತ ಆಗಿದೆ. ಅದರಲ್ಲೂ ಗ್ರಾಮಾಂತರ ಪ್ರದೇಶಗಳಲ್ಲಿ ಇದೊಂದು ಬಹಳಷ್ಟು ಪ್ರಸ್ತುತ ಆಗಿದೆ. ವಾಸನದಲ್ಲಿ ಬಿವಿಜಿ ಶಾಖೆ ಆರಂಭಿಸಿದ್ದು, ಇದು ಬಹಳಷ್ಟು ಪ್ರಾಮುಖ್ಯತೆ ಪಡೆಯಲು ಜನರು ಸಹಕಾರ ಕೊಡಬೇಕು. ಇದು ಮಾದರಿ ಗ್ರಾಮ ಆಗಿ ಆರೋಗ್ಯವಂತ ಸಮುದಾಯ ರೂಪಿಸುವ ಕಾರ್ಯ ನಡೆಯಬೇಕು ಎಂದರುಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸಂಜೀವಕುಮಾರ ಹಂಚಾಟೆ, ಶಾಸಕ ಸಿ.ಸಿ. ಪಾಟೀಲ, ಮಾಜಿ ಶಾಸಕ ಬಿ.ಆರ್. ಯಾವಗಲ್, ಹಂಚಾಟೆ, ಅರುಣ ಕುಮಾ‌ರ್, ಡಾ.ವಿದ್ಯಾ, ಡಾ.ರವಿಕುಮಾ‌ರ್, ಬಿವಿಜಿ ಲೈಫ್ ಸೈನ್ಸಸ್ ಲಿಮಿಟೆಡ್‌ನ ದಕ್ಷಿಣ ಭಾರತ ಸಂಯೋಜಕ ಸಂಜಯ್ ಡೋಂಗರೆ ಮುಂತಾದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಸಿರು ರಕ್ಷಣೆಗೆ ಸಂಘ- ಸಂಸ್ಥೆಗಳು ಮುಂದಾಗಲಿ: ವಕೀಲ ಬಿ.ಎಸ್. ಬಾಳೇಶ್ವರಮಠ
ಮೃತ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮೀ ಹಣ ಜಮೆ:ವಾಪಸ್ ಪಡೆದು ಅರ್ಹರಿಗೆ ತಲುಪಿಸಲು ಕ್ರಮ: ಎಸ್.ಆರ್. ಪಾಟೀಲ