ತಂತ್ರಜ್ಞಾನದ ಕಾಲದಲ್ಲಿ ಸಾಂಪ್ರದಾಯಿಕ ಪಠ್ಯದ ಜ್ಞಾನ ಸಾಕಾಗುವುದಿಲ್ಲ: ಕೆಳಗಿನಮನಿ

KannadaprabhaNewsNetwork |  
Published : Oct 16, 2026, 02:15 AM IST
ಹಾನಗಲ್ಲ ಶ್ರೀ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ ಹಾಗೂ ಸ್ವಾಗತ ಸಮಾರಂಭವನ್ನು ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಪ್ರಸ್ತುತ ತಂತ್ರಜ್ಞಾನದ ಅರಿವು ನೀಡುವ ವಿಷಯಗಳನ್ನು ಕಲಿಯುವುದು ಮತ್ತು ಉದ್ಯೋಗ ಆಧಾರಿತ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ತಿಳಿಸಿದರು.

ಹಾನಗಲ್ಲ: ಇಂದಿನ ಜಾಗತಿಕ ಮಾರುಕಟ್ಟೆಯಲ್ಲಿ ಯಶಸ್ವಿಯಾಗಬೇಕಾದರೆ ಕೇವಲ ಸಾಂಪ್ರದಾಯಿಕ ಪಠ್ಯಪುಸ್ತಕದ ಜ್ಞಾನ ಸಾಕಾಗುವುದಿಲ್ಲ, ಅದರೊಂದಿಗೆ ಪ್ರಸ್ತುತ ತಂತ್ರಜ್ಞಾನದ ಅರಿವು ನೀಡುವ ವಿಷಯಗಳನ್ನು ಕಲಿಯುವುದು ಮತ್ತು ಉದ್ಯೋಗ ಆಧಾರಿತ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ತಿಳಿಸಿದರು.

ಪಟ್ಟಣದ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ ಹಾಗೂ ಸ್ವಾಗತ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ, ಪದವಿ ಎನ್ನುವುದು ಕೇವಲ ಕೈಯಲ್ಲಿ ಹಿಡಿಯುವ ಪ್ರಮಾಣಪತ್ರವಲ್ಲ. ಅನೇಕ ಸೋಲುಗಳನ್ನು ಮೆಟ್ಟಿ ನಿಂತ ವಿದ್ಯಾರ್ಥಿ ಸಾಧನೆಯ ಜ್ಞಾನದ ಸಂಕೇತ ಎಂದರು.ಪ್ರಾಂಶುಪಾಲ ಡಾ. ಎಂ.ಎಚ್. ಹೊಳಿಯಣ್ಣನವರ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ಅರಿತು ನಿರಂತರ ಪರಿಶ್ರಮ, ಪ್ರಾಮಾಣಿಕತೆಯಿಂದ ಅಭ್ಯಸಿಸಿದಾಗ ಅಂತಹ ಅಧ್ಯಯನದ ಪ್ರತಿಫಲ ಜೀವನದ ಯಶಸ್ಸಿನಲ್ಲಿ ಕಾಣಬಹುದೆಂದರು. ಸಂಸ್ಥೆಯ ಉಪಾಧ್ಯಕ್ಷ ಪ್ರಕಾಶಗೌಡ ಪಾಟೀಲ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿದರು. ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಬೋವಿ ಹೊನ್ನಪ್ಪ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿನಿಯರಾದ ಕಾವ್ಯಾ ಕೋಟಿ ಮತ್ತು ರೇಣುಕಾ ಕೆ. ಅನಿಸಿಕೆಗಳನ್ನು ಹಂಚಿಕೊಂಡರು. ಕು. ಆರತಿ ಮತ್ತು ಸೌಮ್ಯ ಭರತ ನಾಟ್ಯ ಪ್ರದರ್ಶಿಸಿದರು. ಅಳ್ನಾವರ ಸರಕಾರಿ ಪದವಿ ಕಾಲೇಜಿನ ಡಾ. ಸುರೇಶ ದೊಡ್ಡಮನಿ, ನಿರ್ದೇಶಕರುಗಳಾದ ಪ್ರೊ ಸಿ. ಮಂಜುನಾಥ ಭೀಮನಗೌಡ ಕೂಕನಗೌಡ್ರ, ಸುರೇಶ ರಾಯ್ಕರ್, ರವಿರಾಜ ಕಲಾಲ, ಭಾಸ್ಕರ ಹುಲ್ಲಮನಿ, ರವಿ ಮೂಡ್ಲಿಯವರ, ಮಾಲತೇಶ ಚಿಕ್ಕಣ್ಣನವರ, ಚಿಕ್ಕಾವಲಿ ಮಂಜುನಾಥ, ಸಂಜಯ ಬೇದ್ರೆ ಮತ್ತು ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿಗಳಾದ ಶುಭಾ ಹೊಸಮನಿ, ಮಹಮ್ಮದ್ ದಾವರಲಿ ಮುಲ್ಲಾ ಉಪಸ್ಥಿತರಿದ್ದರು. ಚೇತನ ಲಮಾಣಿ ಮತ್ತು ಲಕ್ಷ್ಮಿ ಡಾಂಗೆ ಪ್ರಾರ್ಥನೆ, ಪೂಜಾ ಬೆಳಗಲಿ ಸ್ವಾಗತ, ಉಪನ್ಯಾಸಕಿ ಹಾಜೀರಾ ಶೇಕ್ ಪರಿಚಯ, ವಿದ್ಯಾ ಶಿಗ್ಲಿ, ಸಂಜನಾ ಕಮಾಟಿ ನಿರೂಪಣೆ, ಶ್ವೇತಾ ಗಡಿಯಣ್ಣನವರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಗಮಾಸ್ತಿ ಕ್ಷೇತ್ರದ ಮಹಿಳಾ ದಸರಾ ಜಿಲ್ಲೆಗೆ ಮಾದರಿ
ಅಗ್ನಿವೀರರಾಗಲು ಇಟಗಿಯಲ್ಲಿ ಉಚಿತ ತರಬೇತಿ ಶಿಬಿರ