ಮಂಗಳೂರು: ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ.) ವತಿಯಿಂದ ಅವೇಕ್ ಕುಡ್ಲ ಪರಿಕಲ್ಪನೆಯಡಿ ಮಂಗಳೂರು ನಗರ ಸಂಚಾರ ಪೊಲೀಸ್ ಇಲಾಖೆ ಸಹಯೋಗದಲ್ಲಿ ಸಂಚಾರ ಸುರಕ್ಷತೆ ಮತ್ತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮವನ್ನು ಪಾಂಡೇಶ್ವರ ಮತ್ತು ಹೊಯ್ಗೆ ಬಜಾರ್ ರೈಲ್ವೆ ಕ್ರಾಸಿಂಗ್‌ಗಳಲ್ಲಿ ಭಾನುವಾರ ಆಯೋಜಿಸಲಾಯಿತು. ಸಂಚಾರ ಡಿಸಿಪಿ ರವಿಶಂಕರ್ ಇವರು ಟ್ರಾಫಿಕ್ ಬ್ಯಾರಿಕೇಡ್ಸ್ ಹಾಗೂ ರೈಲ್ವೆ ಗೇಟ್ ವೇಳಾಪಟ್ಟಿ ಫಲಕಗಳನ್ನು ಅನಾವರಣ ಮಾಡುವ ಮೂಲಕ ಅಧಿಕೃತ ಚಾಲನೆ ನೀಡಿದರು.
ಮಾಜಿ ಮೇಯರ್ ದಿವಾಕರ್, ಮಾಜಿ ಕಾರ್ಪೊರೇಟರ್ ಲತೀಫ್, ಟ್ರಸ್ಟಿನ ಅಧ್ಯಕ್ಷ ಸೀತಾರಾಮ ಎ., ಪ್ರಧಾನ ಕಾರ್ಯದರ್ಶಿ ಉಮಾನಾಥ್ ಕೋಟೆಕಾರ್, ತಜ್ಞರ ಸಮಿತಿ ಸದಸ್ಯರಾದ ಮಂಜುಳಾ ಜಿ, ಮನೋಹರ್ ಪ್ರಭು, ಖಜಾಂಚಿ ರಾಮ ದೇವಾಡಿಗ, ಕಾರ್ಯಕ್ರಮ ಸಂಯೋಜಕ ಪುನೀತ್ ಪೂಜಾರಿ, ವಾರ್ಡ್ ಸಂಯೋಜಕಿ ಸರಿತಾ, ಕಚೇರಿ ಸಂಯೋಜಕಿ ನೇಹಾ ಮತ್ತಿತರರಿದ್ದರು. ನಾಲ್ಕು ಪರ್ಯಾಯ ಮಾರ್ಗ
ವಾಹನ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಅಧ್ಯಯನದ ಆಧಾರದ ಮೇಲೆ ಸಾರ್ವಜನಿಕರಿಗೆ ನಾಲ್ಕು ಪರ್ಯಾಯ ಮಾರ್ಗಗಳನ್ನು ಸೂಚಿಸಲಾಯಿತು. ಅವುಗಳಲ್ಲಿ ಮೊರ್ಗನ್ಸ್ ಗೇಟ್, ಮಾರ್ನಮಿಕಟ್ಟೆ, ಕೋಟಿ ಚೆನ್ನಯ್ಯ ಜಂಕ್ಷನ್, ಕೆಎಂಸಿ ಅತ್ತಾವರ, ರೈಲ್ವೆ ಸ್ಟೇಷನ್ ರಸ್ತೆ, ಎ.ಬಿ. ಶೆಟ್ಟಿ ವೃತ್ತ. ಮೊರ್ಗನ್ಸ್ ಗೇಟ್, ಮಾರ್ನಮಿಕಟ್ಟೆ, ಕೋಟಿ ಚೆನ್ನಯ್ಯ ಜಂಕ್ಷನ್, ಕಂಕನಾಡಿ ಜಂಕ್ಷನ್, ಫಳ್ನೀರ್, ಮಿಲಾಗ್ರಿಸ್, ಹಂಪನಕಟ್ಟೆ. ಮೊರ್ಗನ್ಸ್ ಗೇಟ್, ಜೆಪ್ಪು ಮಾರ್ಕೆಟ್, ಕಾಶಿಯ ಜಂಕ್ಷನ್, ಎಮ್ಮೆಕೆರೆ ಕ್ರಾಸ್ ರಸ್ತೆ, ರಾಮಕೃಷ್ಣ ಆಶ್ರಮ ರಸ್ತೆ, ಪಾಂಡೇಶ್ವರ ಹಾಗೂ ಮೊರ್ಗನ್ಸ್ ಗೇಟ್, ಜೆಪ್ಪು ಮಾರ್ಕೆಟ್, ಬೋಳಾರ, ಹೊಯ್ಗೆ ಬಜಾರ್, ರೊಸಾರಿಯೋ ರಸ್ತೆ ಸೇರಿವೆ. ಈ ಮಾರ್ಗಗಳನ್ನು ಪರ್ಯಾಯವಾಗಿ ಬಳಸಿದರೆ ಸಂಚಾರ ದಟ್ಟಣೆ ಕಡಿಮೆಯಾಗಲು ಹಾಗೂ ನಿರ್ವಹಣೆ ಸುಲಭವಾಗಲು ಸಹಕಾರಿಯಾಗುತ್ತದೆ ಎಂದು ಡಿಸಿಪಿ ರವಿಶಂಕರ್ ತಿಳಿಸಿದರು.