ಕನ್ನಡಪ್ರಭ ವಾರ್ತೆ ಮಂಗಳೂರು
ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ನಗರದ ಅಡ್ಯಾರ್ ಕಣ್ಣೂರು ಬಳಿ ಇರುವ ಷಾ ಗಾರ್ಡನ್ ಮೈದಾನದಲ್ಲಿ ಏ.18ರಂದು ಪ್ರತಿಭಟನಾ ಸಮಾವೇಶ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಅಂದು ಮಧ್ಯಾಹ್ನ 12ರಿಂದ ರಾತ್ರಿ 9 ಗಂಟೆವರೆಗೆ ಸಂಚಾರ ದಟ್ಟಣೆ ಆಗಬಹುದಾದ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಡೀಲ್- ಕಣ್ಣೂರು- ಅಡ್ಯಾರ್- ಸಹ್ಯಾದ್ರಿ- ಅರ್ಕುಳ (ಎರಡು ಕಡೆಯಿಂದ) ಮಾರ್ಗಗಳ ಬದಲಾಗಿ ಪರ್ಯಾಯ ಮಾರ್ಗಗಳನ್ನು ಉಪಯೋಗಿಸಲು ಪೊಲೀಸ್ ಇಲಾಖೆ ಕೋರಿದೆ.ಸ್ಥಳೀಯ, ತುರ್ತು ಹಾಗೂ ಅತ್ಯಗತ್ಯ ಕಾರಣಗಳಿಗೆ ಬರುವ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳು ಬದಲಿ ಮಾರ್ಗ ಬಳಸುವಂತೆ ತಿಳಿಸಲಾಗಿದೆ.
ಮೆಲ್ಕಾರು ಜಂಕ್ಷನ್- ಪುತ್ತೂರು/ ಬಂಟ್ವಾಳ/ ಬೆಳ್ತಂಗಡಿ ಕಡೆಯಿಂದ ಮಂಗಳೂರು ನಗರ/ ಕಾಸರಗೋಡು ಕಡೆಗೆ ಬರುವ ವಾಹನಗಳು ಮೆಲ್ಕಾರ್ ಜಂಕ್ಷನ್- ಬೊಳಿಯಾರ್- ಮುಡಿಪು- ದೇರಳಕಟ್ಟೆ- ತೊಕ್ಕೊಟ್ಟು ಮೂಲಕ ಸಂಚರಿಸುವುದು.ಬಿ.ಸಿ.ರೋಡ್ ಕಡೆಯಿಂದ ಮಂಗಳೂರು/ ಉಡುಪಿ ಕಡೆಗೆ ಸಂಚರಿಸುವ ವಾಹನಗಳು ಪೊಳಲಿ ದ್ವಾರದ ಮೂಲಕ ಕಲ್ಪನೆ ಜಂಕ್ಷನ್- ನೀರುಮಾರ್ಗ- ಬೈತುರ್ಲಿ- ಕುಲಶೇಖರ- ನಂತೂರು ಮೂಲಕ ಸಂಚರಿಸುವುದು.
ವಳಚ್ಚಿಲ್ ಜಂಕ್ಷನ್- ಬಿ.ಸಿ.ರೋಡ್/ ತುಂಬೆ/ ಫರಂಗಿಪೇಟೆ ಕಡೆಯಿಂದ ಮಂಗಳೂರು ನಗರದ ಕಡೆಗೆ ಸಂಚರಿಸುವ ಲಘು ವಾಹನಗಳು ವಳಚ್ಚಿಲ್‌ನಲ್ಲಿ ಬಲಕ್ಕೆ ತಿರುಗಿ ಮೇರ್ಲಪದವು- ನೀರುಮಾರ್ಗ- ಬೈತುರ್ಲಿ- ನಂತೂರು ಮೂಲಕ ಸಂಚರಿಸುವುದು.ಅಡ್ಯಾರ್ ಕಟ್ಟೆ- ಬಿ.ಸಿ.ರೋಡ್/ ತುಂಬೆ/ ಫರಂಗಿಪೇಟೆ ಕಡೆಯಿಂದ ಮಂಗಳೂರು ನಗರದ ಕಡೆಗೆ ಸಂಚರಿಸುವ ಲಘು ವಾಹನಗಳು ಅಡ್ಯಾರ್ ಕಟ್ಟೆ ಬಳಿ ಎಡಕ್ಕೆ ತಿರುಗಿ ಹರೇಕಳ ಬ್ರಿಡ್ಜ್- ಕೊಣಾಜೆ- ದೇರಳಕಟ್ಟೆ- ತೊಕ್ಕೊಟ್ಟು ಮೂಲಕ ಸಂಚರಿಸುವುದು.
ಪಂಪ್‌ವೆಲ್ ಜಂಕ್ಷನ್- ಮಂಗಳೂರು ನಗರದ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ತೊಕ್ಕೊಟ್ಟು- ದೇರಳಕಟ್ಟೆ- ಮುಡಿಪು- ಬೊಳಿಯಾರ್- ಮೆಲ್ಕಾರ್ ಮೂಲಕ ಸಂಚರಿಸುವುದು.ನಂತೂರು ವೃತ್ತ- ಮಂಗಳೂರು ನಗರ/ ಸುರತ್ಕಲ್ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಬಿಕರ್ನಕಟ್ಟೆ- ಕುಲಶೇಖರ- ಬೈತುರ್ಲಿ ಜಂಕ್ಷನ್- ನೀರುಮಾರ್ಗ- ಕಲ್ಪನೆ ಜಂಕ್ಷನ್- ಬಿ.ಸಿ ರೋಡ್ ಕೈಕಂಬದ ಪೊಳಲಿ ದ್ವಾರದ ಮೂಲಕ ಸಂಚರಿಸುವುದು.
ಕೆ.ಪಿ.ಟಿ. ವೃತ್ತ- ಮಂಗಳೂರು ನಗರ/ ಸುರತ್ಕಲ್ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಪದವಿನಂಗಡಿ- ಪಚ್ಚನಾಡಿ- ವಾಮಂಜೂರು- ಬೈತುರ್ಲಿ ಜಂಕ್ಷನ್- ನೀರುಮಾರ್ಗ- ಕಲ್ಪನೆ ಮೂಲಕ ಅಥವಾ ಬೋಂದೆಲ್- ಕಾವೂರು- ಬಜಪೆ- ಕೈಕಂಬ- ಮೂಡುಬಿದಿರೆ ಮೂಲಕ ಸಂಚರಿಸುವುದು.ಮೂಲ್ಕಿ ವಿಜಯಸನ್ನಿಧಿ- ಉಡುಪಿ/ ಮೂಲ್ಕಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಕಿನ್ನಿಗೊಳಿ- ಮೂಡುಬಿದಿರೆ- ಸಿದ್ದಕಟ್ಟೆ - ಬಂಟ್ವಾಳ ಮೂಲಕ ಸಂಚರಿಸುವುದು.
ಪಡುಬಿದ್ರಿ- ಉಡುಪಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಕಾರ್ಕಳ - ಮೂಡುಬಿದಿರೆ- ಸಿದ್ದಕಟ್ಟೆ - ಬಂಟ್ವಾಳ ಮೂಲಕ ಸಂಚರಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.