ಕನ್ನಡಪ್ರಭ ವಾರ್ತೆ ತಲಕಾಡು
ಬೆಳಗ್ಗೆ ಪಶ್ಚಿಮ ದಿಕ್ಕಿನ ಸೇತುವೆ ತಡೆ ಗೋಡೆಗೆ ಪ್ರವಾಹದ ನೀರು ಸ್ಪರ್ಶವಾಗುತ್ತಿದ್ದಂತೆ ಸೇತುವೆ ಎರಡು ದಿಕ್ಕಿನ ರಸ್ತೆಗೆ ಬ್ಯಾರಿಕೇಡ್ ಅಳವಡಿಸಿ ಸೇತುವೆ ಮೇಲಿನ ಸಂಚಾರವನ್ನು ಪೂರ್ಣ ಬಂದ್ ಮಾಡಲಾಯಿತು.
ತಲಕಾಡಿಗೆ ಹೆಬ್ಬಾಗಿಲಾದ ಹೆಮ್ಮಿಗೆ ಸೇತುವೆ ಬಂದ್ ನಿಂದ ಎಂದಿನಂತೆ ಸೇತುವೆ ಮೇಲೆದೈನಂದಿನ ಸಂಚರಿಸುವ ಜನವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿಕೊಂಡರು. ಹೀಗಾಗಿ ಟಿ. ನರಸೀಪುರ, ಸೋಸಲೆ, ಪೂರಿಗಾಲಿ ಅಥವಾ ಮಾದಾಪುರ, ಕಲಿಯೂರು, ಮುಳ್ಳೂರು, ಕಾವೇರಿಪುರ ನೂತನ ಸೇತುವೆ ಬಳಸು ಮಾರ್ಗವಾಗಿ ತಲಕಾಡಿಗೆ ಪ್ರಯಾಣಿಸಿದರು.ನ್ಯಾಯಾಧೀಶರಿಂದ ಪರಿಶೀಲನೆ:
ಇದಕ್ಕೂ ಮುನ್ನಾ ಬೆಳಗ್ಗೆ ಹೆಮ್ಮಿಗೆ ಸೇತುವೆ ಬಳಿಗೆ ಜಿಲ್ಲಾ ಉಪವಿಭಾಗಾಧಿಕಾರಿ ರಕ್ಷಿತ್, ತಹಸೀಲ್ದಾರ್ ಸುರೇಶಾಚಾರ್, ತಾಪಂ ಇಒ, ಸಿ. ಕೃಷ್ಣ, ಸೆಸ್ಕ್ ಎಇಇ ವೀರೇಶ್ ಭೇಟಿ ನೀಡಿದ್ದರು.
ತೇಲಿ ಬಂದ ಅಪರಿಚಿತ ಶವ:
ಮುಂದುವರೆದ ಪ್ರವಾಸಿ ನಿರ್ಬಂಧ:
ತಲಕಾಡು ಠಾಣೆಯ ಸಿಪಿಐ ಆನಂದ್ ಕುಮಾರ್, ಗ್ರಾಪಂ ಪಿಡಿಒ ಮಹೇಶ್, ಹೆಮ್ಮಿಗೆ ಪಿಡಿಒ, ಚಿದಾನಂದ, ಬಿಲ್ ಕಲೆಕ್ಟರ್ ನಾಗಣ್ಣ, ಕಾರ್ಯದರ್ಶಿ ರಾಜಶೇಖರ ಶೆಟ್ಟಿ, ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಾಣಿ, ಸದಸ್ಯ ಚಿಕ್ಕ ಮಾದನಾಯಕ, ಮುಖಂಡ ಮಹದೇಶ ಇದ್ದರು.ಕಾಳಜಿ ಕೇಂದ್ರದಲ್ಲಿರುವ ವೃದ್ಧೆಗೆ ಮೊಬೈಲ್ ಮೂಲಕ ಸಿಎಂ ಸಾಂತ್ವನ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇರಳ ರಾಜ್ಯದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದ ಸಂತ್ರಸ್ತರಾಗಿರುವ ಕುಟುಂಬದವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಘಟನೆಯ ಬಗ್ಗೆ ವಿವರ ಪಡೆದು ಸಾಂತ್ವನ ಹೇಳಿದರು.ಮೆಪ್ಪಾಡಿಯಲ್ಲಿರುವ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ 70 ವರ್ಷದ ಮಹದೇವಿ ಅವರು ಮೂಲತಃ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಉಕ್ಕಲಗೆರೆ ಗ್ರಾಮದವರು. ಮಹದೇವಿ ಅವರು ತಮ್ಮ ಕುಟುಂಬದ ಎಲ್ಲ 9 ಜನರನ್ನೂ ಕಳೆದುಕೊಂಡಿದ್ದು, ತಮ್ಮ ಮನೆಯವರ ಮೃತದೇಹಗಳನ್ನು ಗುರುತಿಸಲು ಶವಾಗಾರದ ಬಳಿ ಕಾಯುತ್ತಿದ್ದಾಗ ಸಿಎಂ ಸಿದ್ದರಾಮಯ್ಯ ಕರೆ ಮಾಡಿ ಮಾತನಾಡಿದರು. ಮಹದೇವಿ ಅವರ ಜತೆಗಿದ್ದ 34 ವರ್ಷದ ಚೈತ್ರಾ ಅವರ ಜೊತೆಗೂ ಮಾತನಾಡಿದ ಸಿಎಂ, ಸೂಕ್ತ ನೆರವು ನೀಡುವ ಭರವಸೆ ನೀಡಿದರು. ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಕರ್ನಾಟಕ ಮೂಲದ ಕುಟುಂಬಗಳ ಬಗ್ಗೆ ಅಧಿಕಾರಿಗಳಿಂದ ಸಿಎಂ ಮಾಹಿತಿ ಸಂಗ್ರಹಿಸಿದರು.