ಕನ್ನಡಪ್ರಭ ವಾರ್ತೆ ಮಂಗಳೂರು
ನಗರದ ಜೆರೋಸಾ ಶಾಲೆಯ ಗೇಟ್‌ನ ಎದುರು ಮಕ್ಕಳನ್ನು ಕರೆತರುವ ವಾಹನಗಳನ್ನು ನಿಲ್ಲಿಸುವುದರಿಂದ ಬೆಳಗ್ಗೆ ಹಾಗೂ ಸಂಜೆ ಶಾಲೆ ಬಿಡುವ ಸಮಯದಲ್ಲಿ ಭಾರೀ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ. ಶಾಲೆಯ ಒಳಗೆ ಜಾಗವಿದ್ದು, ವಾಹನಗಳಿಗೆ ಅಲ್ಲಿ ಪ್ರವೇಶ ನೀಡಿ ಮಕ್ಕಳನ್ನು ಬಿಟ್ಟು ಹೋಗಲು ಅವಕಾಶ ಕಲ್ಪಿಸಬೇಕು ಎಂದು ದಲಿತ ಮುಖಂಡ ಎಸ್.ಪಿ. ಆನಂದ್ ಪ್ರಸ್ತಾವಿಸಿದರು.
ನಗರದ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಈ ಸಮಸ್ಯೆಗಳಿವೆ. ಶಿಕ್ಷಣ ಸಂಸ್ಥೆಗಳ ಜತೆ ಈ ಬಗ್ಗೆ ನಿರಂತರ ಸಭೆಗಳಾಗುತ್ತಿವೆ. ಆದರೆ ಶಾಲೆಯ ಆವರಣದಲ್ಲಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ವಾಹನಗಳ ಪ್ರವೇಶಿಸಲು ನಿರ್ಬಂಧಿಸುತ್ತಿದ್ದಾರೆ ಎಂದು ಡಿಸಿಸಿ ಸಿದ್ಧಾರ್ಥ ಗೋಯಲ್ ಹೇಳಿದರು.ನಗರದ ಬೆಥನಿ ಶಾಲೆಯಲ್ಲಿ ಹಿಂದೆ ಇದೇ ರೀತಿ ಸಮಸ್ಯೆ ಇದ್ದು, ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಶಾಲಾ ಆರಂಭ ಹಾಗೂ ಮುಕ್ತಾಯದ ಸಮಯವನ್ನೇ ಬದಲಾಯಿಸಿ ಸುಗಮ ಟ್ರಾಫಿಕ್ ವ್ಯವಸ್ಥೆಗೆ ಅನುವು ಮಾಡಿದ್ದಾರೆ. ಅಂತಹ ವ್ಯವಸ್ಥೆ ಇತರ ಕಡೆಗೂ ಅನ್ವಯಿಸಿದರೆ ಉತ್ತಮ ಎಂದು ಸದಾಶಿವ ಉರ್ವಾಸ್ಟೋರ್ ತಿಳಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸುವ ಪ್ರಯತ್ನ ನಡೆಸುವುದಾಗಿ ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ತಿಳಿಸಿದರು.
ದಲಿತ ಕಾಲನಿಗಳಲ್ಲಿ ಹದಿಹರೆಯದ ಮಕ್ಕಳು ತಪ್ಪು ದಾರಿ ಹಿಡಿಯದಂತೆ, ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು ಎಂಬ ಬೇಡಿಕೆಯನ್ನು ಹಲವು ಸಮಯದಿಂದ ಮಾಡಲಾಗಿದೆ. ಆದರೆ ಕಾರ್ಯಗತವಾಗಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ಸಂಬಂಧಪಟ್ಟವರಿಗೆ ಸಲಹೆ ನೀಡಬೇಕು ಎಂದು ಅನಿಲ್ ಕಂಕನಾಡಿ ಮನವಿ ಮಾಡಿದ್ದಾರೆ.ನಗರ ಪಾಲಿಕೆಯಿಂದ ಈಗಾಗಲೇ ಈ ಬಗ್ಗೆ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಆದರೆ ಈ ಕಾರ್ಯ ಮಂಗಳೂರಿನ ಗ್ರಾಮಾಂತರ ಪ್ರದೇಶದಿಂದ ಆರಂಭಿಸಲಾಗುತ್ತಿದೆ. ಆದರೆ ಕ್ಯಾಮರಾ ಅಳವಡಿಕೆ ಕಾರ್ಯ ಮಂಗಳೂರಿನ ನಗರ ಪ್ರದೇಶಗಳು ಮೊದಲು ಆಗಬೇಕು ಎಂದರು. ಈ ಬಗ್ಗೆ ಪಾಲಿಕೆಗೆ ಮಾಹಿತಿ ನೀಡುವುದಾಗಿ ಡಿಸಿಪಿ ದಿನೇಶ್ ಕುಮಾರ್ ತಿಳಿಸಿದರು.
ಉರ್ವಸ್ಟೋರ್‌ನಲ್ಲಿ ಬಸ್ಟೇಂಡ್ ಅಥವಾ ರಸ್ತೆ ಬದಿಗಳಲ್ಲಿ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರು ಗುಂಪುಗೂಡಿ ಇರುತ್ತಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ದಲಿತ ಮುಖಂಡರು ಆಗ್ರಹಿಸಿದರು.
ಎಸಿಪಿ ಧನ್ಯಾ ನಾಯಕ್ ನಿರೂಪಿಸಿದರು. ಬಾಕ್ಸ್---
ಕಳೆದ ನಾಲ್ಕೈದು ಸಭೆಗಳಲ್ಲಿ ಮಾತ್ರವಲ್ಲದೆ, ಈ ಸಭೆಯಲ್ಲೂ ಗಂಭೀರ ಚರ್ಚೆಗೆ ಕಾರಣವಾದ್ದು ಒಂದು ಲೈಟ್ ಕಂಬದ ಕತೆ.