ಬಿಡಿಎ ವತಿಯಿಂದ 4 ಲೇನ್ ಎಲಿವೇಟೆಟ್ ಕಾರಿಡಾರ್ ನಿರ್ಮಾಣದ ಕಾಮಗಾರಿಯ ಹಿನ್ನೆಲೆಯಲ್ಲಿ ಬಳ್ಳಾರಿ ರಸ್ತೆಯ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (ಯುಎಎಸ್) ಸ್ಟಾಪ್ ಕ್ವಾಟ್ರಸ್ನಿಂದ ಮೇಕ್ರಿ ಸರ್ಕಲ್ವರೆಗೆ ಎಲ್ಲಾ ಮಾದರಿಯ ಬಸ್ಗಳು ಮತ್ತು ಗೂಡ್ಸ್ ವಾಹನಗಳನ್ನು ಶುಕ್ರವಾರದಿಂದ 1.5 ವರ್ಷಗಳ ಕಾಲ ಸಂಚಾರ ನಿಷೇಧಿಸಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಡಿಎ ವತಿಯಿಂದ 4 ಲೇನ್ ಎಲಿವೇಟೆಟ್ ಕಾರಿಡಾರ್ ನಿರ್ಮಾಣದ ಕಾಮಗಾರಿಯ ಹಿನ್ನೆಲೆಯಲ್ಲಿ ಬಳ್ಳಾರಿ ರಸ್ತೆಯ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (ಯುಎಎಸ್) ಸ್ಟಾಪ್ ಕ್ವಾಟ್ರಸ್ನಿಂದ ಮೇಕ್ರಿ ಸರ್ಕಲ್ವರೆಗೆ ಎಲ್ಲಾ ಮಾದರಿಯ ಬಸ್ಗಳು ಮತ್ತು ಗೂಡ್ಸ್ ವಾಹನಗಳನ್ನು ಶುಕ್ರವಾರದಿಂದ 1.5 ವರ್ಷಗಳ ಕಾಲ ಸಂಚಾರ ನಿಷೇಧಿಸಲಾಗಿದೆ.
ನ.6 ರಿಂದ ಮುಂದಿನ 18 ತಿಂಗಳುಗಳ ಕಾಲ (2028ರ ಮೇ 30) ಈ ಕಾಮಗಾರಿ ನಡೆಯಲಿದ್ದು, ಬಳ್ಳಾರಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಬಳ್ಳಾರಿ ರಸ್ತೆಯಲ್ಲಿ ಕೆಎಸ್ಆರ್ಟಿಸಿ, ಖಾಸಗಿ ಬಸ್ಗಳು ಸೇರಿ ಎಲ್ಲಾ ಮಾದರಿಯ ಗೂಡ್ಸ್ ವಾಹನಗಳ (ಎಲ್ಜಿವಿ, ಎಂಜಿವಿ, ಎಚ್ಜಿವಿ) ಸಂಚಾರವನ್ನು ಸಂರ್ಪೂಣವಾಗಿ ನಿರ್ಬಂಧಿಸಲಾಗಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಗರದ ಕಡೆಗೆ ಹೆಬ್ಬಾಳ ಮೂಲಕ ಸಂಚರಿಸುವ ವಾಹನ ಸವಾರರು ಹಾಗೂ ತುರ್ತು ವಾಹನಗಳು ಪರ್ಯಾಯ ಮಾರ್ಗಗಳನ್ನು ಬಳಸಲು ಸಂಚಾರ ಪೊಲೀಸರು ಸೂಚಿಸಿದ್ದು, ಇದಕ್ಕಾಗಿ ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದ್ದಾರೆ.ಏರ್ಪೋರ್ಟ್ ಕಡೆಗೆ ಹೆಬ್ಬಾಳ ಮೂಲಕ ಸಂಚರಿಸುವ ವಾಹನಗಳು
*ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಹೋಗುವ ವಾಹನ ಸವಾರರು, ಒಲ್ಡ್ ಹೈಗ್ರೌಂಡ್ ಜಂಕ್ಷನ್- ಕಲ್ಪನಾ ಜಂಕ್ಷನ್- ಓಲ್ಡ್ ಉದಯ ಟಿವಿ ಜಂಕ್ಷನ್- ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್ ಟ್ಯಾನರಿ ರಸ್ತೆ- ನಾಗವಾರ ರಸ್ತೆ ಮೂಲಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಹೋಗಬಹುದು.
*ಯಶವಂತಪುರ ಕಡೆಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಸಂಚರಿಸುವ ವಾಹನ ಸವಾರರು ಮತ್ತಿಕೆರೆ ರಸ್ತೆ ಮೂಲಕ ಬಿಇಎಲ್ ವೃತ್ತದಲ್ಲಿ ಬಲತಿರುವು ಪಡೆದು ರಿಂಗ್ ರೋಡ್ ಮೂಲಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ ಸಂಚರಿಸಬಹುದು.
ಹೆಬ್ಬಾಳ ಮೂಲಕ ಸಂಚರಿಸುವ ವಾಹನಗಳು:
*ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಯಿಂದ ನಗರದ ಕೇಂದ್ರ ಭಾಗದ ಕಡೆಗೆ ಬರುವ ವಾಹನ ಸವಾರರು ಹೆಬ್ಬಾಳದಲ್ಲಿ ಎಡತಿರುವು ಪಡೆದು ನಾಗವಾರ ಜಂಕ್ಷನ್ ಮುಖಾಂತರ ಬಲತಿರುವು ಪಡೆದು ಬಂಬುಬಜಾರ್, ಕ್ವೀನ್ಸ್ ರೋಡ್ ಮುಖಾಂತರ ನಗರದ ಕಡೆಗೆ ಸಂಚರಿಸಬಹುದು.
*ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಯಿಂದ ನಗರದ ಕೇಂದ್ರ ಭಾಗದ ಕಡೆಗೆ ಬರುವ ವಾಹನ ಚಾಲಕರು ಹೆಬ್ಬಾಳದಲ್ಲಿ ಬಲತಿರುವು ಪಡೆದು ಹೆಬ್ಬಾಳ ರಿಂಗ್ ರಸ್ತೆ-ಕುವೆಂಪು ಸರ್ಕಲ್-ಗೊರಗುಂಟೆ ಪಾಳ್ಯ ಜಂಕ್ಷನನಲ್ಲಿ ಎಡ ತಿರುವು ಪಡೆದು ಡಾ.ರಾಜ್ಕುಮಾರ್ ರಸ್ತೆ ಮೂಲಕ ನಗರದ ಕಡೆ ಸಂಚರಿಸುವುದು.
*ಯಶವಂತಪುರ ಕಡೆಯಿಂದ ನಗರದ ಕೇಂದ್ರ ಭಾಗಕ್ಕೆ ಸಂಚರಿಸುವವರು ಬಿಎಚ್ಇಎಲ್ ಜಂಕ್ಷನ್-ಮಾರಮ್ಮ ಸರ್ಕಲ್ ಬಳಿ ಬಲ ತಿರುವು ಪಡೆದು ಮಾರ್ಗೋಸಾ ರಸ್ತೆ ಮೂಲಕ ನಗರದ ಕಡೆಗೆ ತೆರಳಬಹುದು.
*ಹೆಬ್ಬಾಳ ಕಡೆಯಿಂದ ನಗರದ ಕಡೆಗೆ ಸಂಚರಿಸುವ ಹೆಬ್ಬಾಳ ಮೇಲುಸೇತುವೆ ಇಳಿದ ನಂತರ ಬ್ಯಾಪ್ಟಿಸ್ಟ್ ಆಸ್ಪತ್ರೆ ಮುಂಭಾಗ ಸರ್ವಿಸ್ ರಸ್ತೆಗೆ ಸೇರಿ ಸಿಬಿಐವರೆಗೂ ಸರ್ವಿಸ್ ರಸ್ತೆಯಲ್ಲಿ ಚಲಿಸಿ ನಂತರ ಬಳ್ಳಾರಿ ಮುಖ್ಯರಸ್ತೆಯ ಮುಖಾಂತರ ಬೆಂಗಳೂರು ನಗರದ ಕಡೆಗೆ ಸಂಚರಿಸುವುದು.
*ಹೆಬ್ಬಾಳದಿಂದ ಆನಂದನಗರ ಮತ್ತು ಆರ್.ಟಿ ನಗರ ಕಡೆಗೆ ಸಂಚರಿಸುವ ವಾಹನ ಸವಾರರು ಬ್ಯಾಪ್ಟಿಸ್ಟ್ ಆಸ್ಪತ್ರೆ ಮುಂಭಾಗ ಸರ್ವಿಸ್ ರಸ್ತೆಗೆ ಸೇರಿ ಆನಂದನಗರ ಕ್ರಾಸ್ ಮತ್ತು ಸಿಬಿಐ ಜಂಕ್ಷನ್ ಬಳಿ ಎಡತಿರುವು ಪಡೆದು ಆನಂದನಗರ ಮುಖ್ಯರಸ್ತೆಗೆ ಸೇರಿ ಮುಂದೆ ಆರ್.ಟಿ ನಗರ ಹಾಗೂ ಜಯಮಹಲ್ ರಸ್ತೆ ಕಡೆಗೆ ಸಂಚರಿಸುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.