ಸೋಮರಡ್ಡಿ ಅಳವಂಡಿ
ಘೋಷಣೆಯಾದ ರೈಲ್ವೆ ಯೋಜನೆಯೊಂದು 30 ವರ್ಷದ ಬಳಿಕ ಭಾಗಶಃ ಕಾಮಗಾರಿ ಪೂರ್ಣಗೊಂಡು ಗುರುವಾರದಿಂದ ನಿಗದಿತ ಮಾರ್ಗದಲ್ಲಿ ರೈಲು ಸಂಚರಿಸಲಿದೆ.
ಹೌದು! ಗದಗ-ತಳಕಲ್-ವಾಡಿ ರೈಲ್ವೆ ಯೋಜನೆ ಘೋಷಣೆಯಾದಾಗ ಈ ಯೋಜನೆ ಜಾರಿ ಕುರಿತು ಅಪಹಾಸ್ಯ ಮಾಡಿದವರೇ ಹೆಚ್ಚು. ಮುನಿರಾಬಾದ್-ಮೆಹಬೂಬ್ ನಗರ ರೈಲ್ವೆಯೇ ಇನ್ನೂ ಓಡುತ್ತಿಲ್ಲ, ಮತ್ತೊಂದು ರೈಲ್ವೆ ಯೋಜನೆ ಬೇರೆ ಎಂದೆಲ್ಲ ಕಿಚಾಯಿಸಿದ್ದರು. ಆದರೆ, ದೇಶದಲ್ಲಿಯೇ ಅತ್ಯಂತ ವೇಗವಾಗಿ ಭೂ ಸ್ವಾಧೀನ ಪ್ರಕ್ರಿಯೇ ಪೂರ್ಣಗೊಂಡು ತಳಕಲ್‌ನಿಂದ ಕುಷ್ಟಗಿ ವರೆಗೂ ರೈಲ್ವೆ ಮಾರ್ಗ ಪೂರ್ಣಗೊಂಡಿದೆ. ಈಗಾಗಲೇ ಪ್ರಾಯೋಗಿಕವಾಗಿ ರೈಲು ಓಡಿಸಿದ್ದು ಮೇ 15ರಂದು ಅಧಿಕೃತವಾಗಿ ರೈಲು ಓಡಾಟ ಪ್ರಾರಂಭವಾಗಲಿದೆ. ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಚಾಲನೆ ನೀಡಲಿದ್ದಾರೆ.ಕುಕನೂರು, ತಳಕಲ್, ಕುಷ್ಟಗಿ ಸೇರಿದಂತೆ ರೈಲುಗಳನ್ನೇ ಕಾಣದೂರಿನಲ್ಲಿ ಇನ್ಮುಂದೆ ರೈಲು ಇನ್ನೇನು ಕೆಲವೇ ಕ್ಷಣಗಳಲ್ಲಿ ಪ್ಲಾಟ್ ಪಾರ್ಮ್ 1ರಲ್ಲಿ ಬರಲಿದೆ ಎನ್ನುವ ಶಬ್ದ ನಿತ್ಯವೂ ಮೊಳಗಲಿದೆ.
ಗದಗ-ವಾಡಿ ರೈಲ್ವೆ ಯೋಜನೆ ಮೊಳಕೆಯೊಡೆದಿದ್ದು 1911ರಲ್ಲಿಯೇ. ನಿಜಾಮ್ ಸರ್ಕಾರ ಮತ್ತು ಬ್ರಿಟಿಷ್ ಸರ್ಕಾರ ಜಂಟಿಯಾಗಿ ಅಂತರಾಜ್ಯ ಸಂಪರ್ಕ ಕಲ್ಪಿಸಲು ರೂಪಿಸಿದ ಯೋಜನೆಯಾಗಿದೆ. ಆದರೆ, ಕಾರ್ಯಗತ ಆಗಲಿಲ್ಲ. ನಂತರ ಬ್ರಿಟಿಷರು ಭಾರತ ಬಿಟ್ಟು ತೊಲಗಿದ್ದರಿಂದ ಯೋಜನೆಯ ಸುಳಿವು ಇಲ್ಲದಂತೆ ಆಯಿತು. 1996ರಲ್ಲಿ ಸಂಸದರಾಗಿ ಆಯ್ಕೆಯಾದ ಬಸವರಾಜ ರಾಯರಡ್ಡಿ ಅವರು ಈ ಯೋಜನೆಯನ್ನು ಹೆಕ್ಕಿ ತೆಗೆದರು. ಬ್ರಿಟಿಷ್ ಕಾಲದಲ್ಲಿಯೇ ರೂಪಗೊಂಡಿದ್ದ ಯೋಜನೆಯ ಮಾರ್ಗ ಬದಲಾಯಿಸಿ ತಮ್ಮೂರು ತಳಕಲ್ ಮೂಲಕವಾಗಿ ಕುಕನೂರು ಮಾರ್ಗವಾಗಿ ಸಂಚರಿಸುವಂತೆ ಮಾಡಿ, ಕೇಂದ್ರದ ರೈಲ್ವೆ ಬಜೆಟ್‌ನಲ್ಲಿ ಸೇರಿಸಿ ಘೋಷಣೆ ಮಾಡಿಸುವಲ್ಲಿ ಯಶಸ್ವಿಯಾದರು.
ನಂತರ ಸಂಗಣ್ಣ ಕರಡಿ ಸಂಸದರಾಗಿದ್ದ ವೇಳೆ, ಬಸವರಾಜ ರಾಯರಡ್ಡಿ ರಾಜ್ಯದಲ್ಲಿ ಸಚಿವರಾಗಿದ್ದ ಸಂದರ್ಭದಲ್ಲಿ ಯೋಜನೆಯ ಭೂಸ್ವಾಧೀನದ ಎಲ್ಲ ಹಣವನ್ನು ರಾಜ್ಯ ಸರ್ಕಾರವೇ ಭರಿಸಿ ಭೂಸ್ವಾಧೀನ ಪ್ರಕ್ರಿಯೆ ವೇಗಗೊಳಿಸಿದರು. ಎನ್‌ಡಿಎ ಸರ್ಕಾರದಲ್ಲಿ ಯೋಜನೆಗೆ ವೇಗ ಪಡೆದುಕೊಂಡಿತು. 2017ರಲ್ಲಿ ಯೋಜನೆಯ ಭೂಮಿಪೂಜೆ ಕಾರ್ಯವೂ ನಡೆಯಿತು. ಇದೀಗ 30 ವರ್ಷಗಳಲ್ಲಿ ಯೋಜನೆಯು ಭಾಗಶಃ ಜಾರಿಗೊಂಡು, ರೈಲು ಓಡಾಟವೂ ಪ್ರಾರಂಭವಾಗುತ್ತಿರುವುದು ಈ ಭಾಗದ ಜನರ ಸಂತಸಕ್ಕೆ ಕಾರಣವಾಗಿದೆ.
ಗದಗ-ವಾಡಿ ರೈಲ್ವೆ ಯೋಜನೆ ಮಾರ್ಗವು 257.26 ಕಿಲೋ ಮೀಟರ್ ಹೊಂದಿದ್ದು ನಿಜಾಮ ಕಾಲದಲ್ಲಿ ₹ 1.96 ಕೋಟಿ ವೆಚ್ಚದ ಯೋಜನೆ ಇದಾಗಿತ್ತು. ಇಂದು ಪರಿಷ್ಕೃತಗೊಂಡು ₹ 2841 ಕೋಟಿ ವೆಚ್ಚದ ಯೋಜನೆ ಇದಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ತಲಾ ಶೇ.50ರಷ್ಟು ಅನುದಾನ ಹಾಗೂ ಭೂ ಸ್ವಾಧೀನ ಹೊಣೆಯನ್ನು ಸಂಪೂರ್ಣ ರಾಜ್ಯ ಸರ್ಕಾರವೇ ವಹಿಸಿಕೊಂಡಿದೆ. ಈಗಾಗಲೇ ಶೇ. 90ರಷ್ಟು ಭೂಸ್ವಾಧೀನವಾಗಿದ್ದು ರೈಲ್ವೆ ಇಲಾಖೆಗೆ ಹಸ್ತಾಂತರಿಸಿದೆ.
ಸ್ಟೇಷನ್ ಇಲ್ಲದೂರಲ್ಲಿ ಜಂಕ್ಷನ್
ಬಸವರಾಜ ರಾಯರಡ್ಡಿ, ಸಿಎಂ ಆರ್ಥಿಕ ಸಲಹೆಗಾರರು, ಶಾಸಕಕುಷ್ಟಗಿಗೆ ರೈಲು ಬರಬೇಕು ಎನ್ನುವುದು ನಮ್ಮ ಹಿರಿಯರ ಕನಸಾಗಿತ್ತು. ಇದಕ್ಕಾಗಿ ಸಾಕಷ್ಟು ಹೋರಾಟ ಮಾಡಿದ್ದೆವು. ಅಂತೂ ರೈಲು ಪ್ರಾರಂಭವಾಗುತ್ತಿರುವುದು ಖುಷಿ ತಂದಿದೆ.
ಸಂಗಣ್ಣ ಕರಡಿ, ಮಾಜಿ ಸಂಸದ