ಪಕ್ಷ ಬಲವರ್ಧನೆಗೆ ಪ್ರಶಿಕ್ಷಣ ಕಾರ್ಯಕ್ರಮ ದಾರಿದೀಪ: ನಿರ್ಮಲಾ ಕೊಳ್ಳಿ

KannadaprabhaNewsNetwork |  
Published : Apr 12, 2026, 02:30 AM IST
ಡಂಬಳ ಹೋಬಳಿ ಪೇಠಾಲೂರ ಗ್ರಾಮದಲ್ಲಿ ಪಂಡಿತ ದೀನದಯಾಳ ಉಪಾಧ್ಯಾಯವರ ಪ್ರಶಿಕ್ಷಣ ಮಹಾಭಿಯಾನ ಕಾರ್ಯಕ್ರಮವನ್ನು ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ನಿರ್ಮಲಾ ಕೊಳ್ಳಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಡಂಬಳ ಹೋಬಳಿ ಪೇಠಾಲೂರ ಗ್ರಾಮದಲ್ಲಿ ಆಯೋಜಿಸಿದ್ದ ಪಂ. ದೀನದಯಾಳ ಉಪಾಧ್ಯಾಯರ ಪ್ರಶಿಕ್ಷಣ ಮಹಾಭಿಯಾನ ಕಾರ್ಯಕ್ರಮವನ್ನು ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನಿರ್ಮಲಾ ಕೊಳ್ಳಿ ಉದ್ಘಾಟಿಸಿದರು.

ಡಂಬಳ: ಬಿಜೆಪಿ ಶಿಸ್ತಿಗೆ ಮಹತ್ವ ನೀಡುವ ಪಕ್ಷವಾಗಿದ್ದು, ಕಾರ್ಯಕರ್ತರಿಗೆ ಮೊದಲ ಪಾಠವಾಗಿ ಶಿಸ್ತಿನ ಕುರಿತೇ ತಿಳಿಸಲಾಗುತ್ತದೆ ಎಂದು ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನಿರ್ಮಲಾ ಕೊಳ್ಳಿ ಹೇಳಿದರು.

ಡಂಬಳ ಹೋಬಳಿ ಪೇಠಾಲೂರ ಗ್ರಾಮದಲ್ಲಿ ಆಯೋಜಿಸಿದ್ದ ಪಂ. ದೀನದಯಾಳ ಉಪಾಧ್ಯಾಯರ ಪ್ರಶಿಕ್ಷಣ ಮಹಾಭಿಯಾನ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಶಿಬಿರದಲ್ಲಿ ಬೂತ್ ಮಟ್ಟದ ಎಲ್ಲ ಕಾರ್ಯಕರ್ತರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, ಪಕ್ಷದ ಕಾರ್ಯಕ್ರಮಗಳ ಉದ್ದೇಶ ಹಾಗೂ ಸಂಘಟನಾತ್ಮಕ ಕಾರ್ಯವೈಖರಿಯ ಕುರಿತು ಮಾಹಿತಿ ನೀಡಲಾಗುತ್ತದೆ. ತರಬೇತಿ ಶಿಬಿರಗಳಲ್ಲಿ ನೀಡಲಾಗುವ ವಿಷಯಗಳನ್ನು ಪ್ರತಿಯೊಬ್ಬ ಕಾರ್ಯಕರ್ತರೂ ಮನದಟ್ಟು ಮಾಡಿಕೊಂಡು ಕಾರ್ಯಪ್ರವೃತ್ತರಾಗಬೇಕು. ಈ ರೀತಿಯ ಪ್ರಶಿಕ್ಷಣ ಕಾರ್ಯಕ್ರಮಗಳು ಪಕ್ಷದ ಸಂಘಟನಾತ್ಮಕ ಬಲವರ್ಧನೆಗೆ ದಾರಿದೀಪವಾಗಿದ್ದು, ಕಾರ್ಯಕರ್ತರಲ್ಲಿ ಚೈತನ್ಯ ಮತ್ತು ಹೊಣೆಗಾರಿಕೆ ಹೆಚ್ಚಿಸುತ್ತವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಂಬಳ ಮಂಡಳ ಅಧ್ಯಕ್ಷ ಅಂದಪ್ಪ ಗಿಡ್ಡಪ್ಪ ಹಾರೂಗೇರಿ ಮಾತನಾಡಿ, ರಾಷ್ಟ್ರ ಮೊದಲು ಎಂಬ ಧ್ಯೇಯದೊಂದಿಗೆ ಸ್ಥಾಪಿತಗೊಂಡಿರುವ ಏಕೈಕ ರಾಜಕೀಯ ಪಕ್ಷ ಬಿಜೆಪಿ. ರಾಷ್ಟ್ರೀಯ ಹಿತಚಿಂತನೆ ಹಾಗೂ ದೇಶಸೇವೆಯೇ ಜನಾರ್ದನ ಸೇವೆ ಎಂಬ ನಂಬಿಕೆ ಮತ್ತು ವಿಶ್ವಾಸದಡಿ ಪಕ್ಷ ಕಾರ್ಯನಿರ್ವಹಿಸುತ್ತಿದ್ದು, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೇ ಪಕ್ಷದ ದೊಡ್ಡ ಶಕ್ತಿ ಎಂದು ಹೇಳಿದರು.

ನಾಗರಾಜ ಕುಲಕರ್ಣಿ, ಫಕ್ಕನಗೌಡ ರಡ್ಡೆರ, ವೆಂಕನಗೌಡ ಪಾಟೀಲ, ಮುದ್ಲಿಂಗಪ್ಪ ಕೊರ್ಲಹಳ್ಳಿ, ನಾಗಪ್ಪ ಚಿಕ್ಕರಡ್ಡಿ, ಶ್ರೀದೇವಿ ಶೇಖಪ್ಪ ಯಾವಗಲ್, ರತ್ನಮ್ಮ ತೋಟಪ್ಪನವರ, ಸೋಮಶೇಖರ ಹಿರೇಮಠ, ರೋಣ ಮಂಡಲ ಅಧ್ಯಕ್ಷ ಉಮೇಶ ಮಲ್ಲಾಪೊರ, ರೇಣುಕಾ ಚಿಕ್ಕರಡ್ಡಿ, ಚನ್ನವೀರಪ್ಪ ಚಿನ್ನೂರ, ರಾಜೇಶ ಅರಕಾಲ, ಬರಮಪ್ಪ ನಾಗನೂರ, ಬರಮಪ್ಪ ತಿಮ್ಮಾಪುರ, ಸೋಮಶೇಖರಯ್ಯ ಹಿರೇಮಠ, ಕಾರ್ಯದರ್ಶಿ ಪಂಚಾಕ್ಷರಯ್ಯ ಹರ್ಲಾಪುರಮಠ, ಪ್ರಭು ಕೊರ್ಲಹಳ್ಳಿ, ಎಸ್.ಸಿ. ಮೋರ್ಚಾ ಅಧ್ಯಕ್ಷ ಕೃಷ್ಣ ಬಂಡಿ, ಶಿವಾನಂದ ಬಂಡಿ, ಮುತ್ತು ಚಿನ್ನಪ್ಪಗೌಡ್ರ, ಶಂಕ್ರಪ್ಪ ಮುಗಳಿ, ನಾಗಪ್ಪ ಚಿನ್ನಪ್ಪಗೌಡ್ರ, ರಮೇಶ ಸಿಗ್ಗಾವಿ ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಂಸ್ಕೃತಿಕ ನಾಯಕ ಬಸವಣ್ಣನವರ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ: ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ
ತೃತೀಯ ಲಿಂಗಿ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಿ